ಅಪ್ಪು ಅವರ ಕನಸ್ಸಿನ ಸಿನಿಮಾ ಹಾಗೆ ಅಭಿಮಾನಿಗಳ ಬಹು ನಿರೀಕ್ಷಿತ ಸಿನಿಮಾ ಗಂಧದಗುಡಿ ಇದೀಗ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಬಿಡುಗಡೆಗಾಗಿ ಅಪ್ಪು ಅಭಿಮಾನಿಗಳು ಬಹಳ ಕಾತುರದಿಂದ ಕಾದಿದ್ದರು.
ಇನ್ನು ಇದೀಗ ಕೊನೆಗೂ ಅಪ್ಪು ಅವರ ಗಂಧದಗುಡಿ ಸಿನಿಮಾ ಬಿಡುಗಡೆಯಾಗಿದೆ, ಇನ್ನು ಕೆಲವರು ಈ ಸಿನಿಮಾ ನೋಡಲು ಟಿಕೆಟ್ ಸಿಗದೆ ಪರದಾಡುತ್ತಿದ್ದಾರೆ. ಇನ್ನು ಈ ಸಿನಿಮಾ ನೋಡಿದ ಪ್ರತಿಯೊಬ್ಬರು ಅಪ್ಪು ಅವರಿಗೆ ತುಂಬು ಮನಸ್ಸಿನಿಂದ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇಂದು ಅಪ್ಪು ಅವರು ನಮ್ಮ ಜೊತೆಗಿಲ್ಲ ಎನ್ನುವ ನೋವು ಒಂದು ಕಡೆಯಾದರೆ, ಇನ್ನೊಂದು ಕಡೆ ಅವರ ಸಿನಿಮಾ ಬಿಡುಗಡೆಯಾಗಿದೆ ಎನ್ನುವ ಖುಷಿ. ಈ ಗಂಧದಗುಡಿ ಸಿನಿಮಾದ ನಂತರ ಮತ್ತೆ ಎಂದು ಅಪ್ಪು ಅವರನ್ನು ತೆರೆ ಮೇಲೆ ನೋಡಲು ಸಾಸ್ಯವಿಲ್ಲ ಎಂದು ಊಹಿಸದರೂ ಕೂಡ ಮನಸ್ಸಿಗೆ ಬಹಳ ಬೇಸರವಾಗುತ್ತದೆ.
ಇನ್ನು ಗಂಧದಗುಡಿ ಸಿನಿಮಾದ ಟ್ರೇಲರ್ ಬಿಡುಗಡೆಯಾದಾನಿಂದಲೂ ಈ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಗಳು ಸೋಷಿಯಲ್ ಮಿಡಿಯಾದಲ್ಲಿ ನಡೆಯುತ್ತಲೆ ಇದೆ. ಇನ್ನು ಈ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಕೂಡ ಬಹಳ ಅದ್ದೂರಿಯಾಗಿ ಎಲ್ಲಾ ಕಲಾವಿದರ ಸಮುಖದಲ್ಲಿ ಜರುಗಿತ್ತು.
ಕೊನೆಗೂ ಎಲ್ಲರ ಆಸೆ ನೆರವೇರಿದೆ, ಅಪ್ಪು ಅವರ ಗಂಧದಗುಡಿ ಸಿನಿಮಾ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಇನ್ನು ಈ ಸಿನಿಮಾ ನೋಡಲು ದೊಡ್ಮನೆಯ ಪ್ರತಿಯೊಬ್ಬರು ಸಹ ಚಿತ್ರಮಂದಿರಕ್ಕೆ ಆಗಮಿಸಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಶ್ವಿನಿ ಮೇಡಂ ಮತ್ತು ಅವರ ತಂಗಿ, ರಾಘವೇಂದ್ರ ರಾಜ್ ಕುಮಾರ್ ಹಾಗೂ ಅವರ ಪತ್ನಿ, ಯುವರಾಜ್ ಕುಮಾರ್ ಸೇರಿದಂತೆ ದೊಡ್ಮನೆಯ ಪ್ರತಿಯೊಬ್ಬ ಸದಸ್ಯ ಗಂಧದಗುಡಿ ಸಿನಿಮಾ ಚಿತ್ರಮಂದಿರಕ್ಕೆ ಬಂದು ವೀಕ್ಷಿಸಿದ್ದಾರೆ. ಇನ್ನು ಇದೀಗ ಸಿನಿಮಾ ನೋಡುವ ವೇಳೆ, ಅಶ್ವಿನಿ ಅವರ ತಂಗಿ ಏನೋ ಮಾತನಾಡಿದ್ದಾರೆ.
ಹೌದು ಅಶ್ವಿನಿ ಅವರ ತಂಗಿ ಅಶ್ವಿನಿ ಅವರಿಗೆ ಸಿನಿಮಾದ ಸ್ಕ್ರೀನ್ ತೋರಿಸಿ ಏನೋ ಹೇಳಿದ್ದಾರೆ. ಇದಕ್ಕೆ ಅಶ್ವಿನಿ ಮೇಡಂ ಕೂಡ ತಲೆ ಅಲ್ಲಾಡಿಸಿದ್ದಾರೆ. ಸದ್ಯ ಅಶ್ವಿನಿ ಮೇಡಂ ಹಾಗೂ ಅವರ ಏನು ಮಾತನಾಡಿಕೊಂಡಿದ್ದಾರೆ ಎನ್ನುವ ಕುತೂಹಲ ಅನೇಕರಲ್ಲಿ ಮೂಡಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..