ಗಂಧದಗುಡಿ ಸಿನಿಮಾ ನೋಡಿ ಬಿಕ್ಕಿ ಬಿಕ್ಕಿ ಅತ್ತ ಅನುಶ್ರೀ! ವಿಡಿಯೋ ನೋಡಿ!…

ಸ್ಯಾಂಡಲವುಡ್

ಕಿರುತೆರೆ ಲೋಕದಲ್ಲಿ ತನ್ನ ಚಟಪಟ ಮಾತುಗಳು ಹಾಗೆ ತನ್ನ ಅದ್ಭುತ ನಿರೂಪಣೆಯ ಮೂಲಕವೇ ಗುರುತಿಸಿಕೊಂಡಿರುವ ನಿರೂಪಕಿ ಹಾಗೂ ನಟಿ ಅನುಶ್ರೀ. ಕೇವಲ ನಿರೂಪಕಿಯಾಗಿ ಮಾತ್ರವಲ್ಲ ಒಬ್ಬ ಅದ್ಭುತ ಕಲಾವಿದೆಯಾಗಿ ಸಹ ಅನುಶ್ರೀ ಅವರು ಗುರುತಿಸಿಕೊಂಡಿದ್ದಾರೆ.

ಅನುಶ್ರೀ ಅವರು ಅದೆಷ್ಟೋ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಅದರ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಯಾವುದೇ ಕಾರ್ಯಕ್ರಮ ಅಥವಾ ಸಿನಿಮಾ ಈವೆಂಟ್ ಅನುಶ್ರೀ ಅವರ ನಿರೂಪಣೆ ಇಲ್ಲದೆ ಅದು ಸಂಪೂರ್ಣ ಎನಿಸಿಕೊಳ್ಳುವುದಿಲ್ಲ.

ಇನ್ನು ಅನುಶ್ರೀ ಅವರಿಗೆ ಅಪ್ಪು ಎಂದರೆ ಬಹಳ ಗೌರವ ಹಾಗೂ ಪ್ರೀತಿ. ಯಾವುದೇ ಕಾರ್ಯಕ್ರಮವಾದರೂ ಸಹ ಅನುಶ್ರೀ ಅವರು ತುಂಬಾ ಹೆಮ್ಮೆಯಿಂದ ಅಪ್ಪು ಅವರು ತಮ್ಮ ಫೇವರೇಟ್ ನಟ ಎಂದು ಹೇಳುತ್ತಿದ್ದರು. ಇನ್ನು ಅಪ್ಪು ಅವರು ಇದೀಗ ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ.

ಅವರ ಅಗಲಿಕೆಯಿಂದ ನಮ್ಮೆಲ್ಲರಿಗೂ ಎಷ್ಟು ಬೇಸರವಾಗಿದೆಯೋ ಅಷ್ಟೇ ಬೇಸರ ಇನ್ನು ಅದಕ್ಕಿಂತ ಹೆಚ್ಚು ಬೇಸರ ಅನುಶ್ರೀ ಅವರಿಗಾಗಿದೆ. ಇನ್ನು ಅದೆಷ್ಟೋ ಬಾರಿ ಕಾರ್ಯಕ್ರಮಗಳಲ್ಲಿ ಅನುಶ್ರೀ ನಿರೂಪಣೆ ಮಾಡುತ್ತಾ ಅಪ್ಪು ಅವರನ್ನು ನೆನೆದು ಕಣ್ಣೀರು ಹಾಕಿರುವುದು ಸಹ ಉಂಟು.

ಇನ್ನು ಇತ್ತಿಚೆಗೆ ಅಪ್ಪು ಅವರ ಗಂಧದಗುಡಿ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ಸ್ವತಃ ಅನುಶ್ರೀ ಅವರೇ ನಿರೂಪಣೆ ಮಾಡಿದ್ದರು. ಇನ್ನು ಸದ್ಯ ಎಲ್ಲೆಡೆ ಅಪ್ಪು ಅವರ ಗಂಧದಗುಡಿ ಸಿನಿಮಾ ಬಿಡುಗಡೆಯಾಗಿ ಬಹಳ ಸದ್ದು ಮಾಡುತ್ತಿದೆ.

ಇನ್ನು ಅಪ್ಪು ಅವರ ಗಂಧದಗುಡಿ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈ ಸಿನಿಮಾ ನೋಡಲು ಅನೇಕ ಕಲಾವಿದರು ಹಾಗೆ ಅಪ್ಪು ಅಭಿಮಾನಿಗಳು ಕಾತುರಾಗಿ ನಿಂತಿದ್ದರು. ಕೊನೆಗೂ ಅಪ್ಪು ಅವರ ಗಂಧದಗುಡಿ ಸಿನಿಮಾ ಬಹಳ ಅದ್ದೂರಿಯಾಗಿ ಬಿಡುಗಡೆಯಾಗಿದೆ.

ಸದ್ಯ ಅಪ್ಪು ಅವರನ್ನು ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಅನುಶ್ರೀ ಅವರು ಕೂಡ ಚಿತ್ರಮಂದಿರಕ್ಕೆ ಹೋಗಿ ಗಂಧದಗುಡಿ ಸಿನಿಮಾ ನೋಡಿ ಬಂದಿದ್ದಾರೆ. ಇನ್ನು ಸಿನಿಮಾ ನೋಡಿ ಹೊರಗೆ ಬರುವಾಗ ಅನುಶ್ರೀ ಅವರು ಅಳ್ಳುತ್ತಾ ಹೊರಗೆ ಬಂದಿದ್ದು ಅಲ್ಲಿದ್ದ ಮಾಧ್ಯಮದವರು ಅದನ್ನು ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *