ಪುನೀತ್ ರಾಜ್ ಕುಮಾರ್ ಬಹುಶಃ ತೆರೆ ಮೇಲೆ ಕಂಡ ನಟರಲ್ಲಿ ಅತ್ಯದ್ಭುತ ಮನುಷ್ಯ ಎಂದರೆ ತಪ್ಪಾಗಲಾರದು. ತೆರೆ ಮೇಲೆ ಮಾತ್ರವಲ್ಲದೆ ತೆರೆ ಹಿಂದೆ ಕೂಡ ಹೀರೋ ಆಗಿದ್ದ ಪುನೀತ್, ತಾವು ಇದ್ದಷ್ಟು ದಿನ ಬೇರೆಯವರ ಸಹಾಯಕ್ಕೆ ನಿಂತಿದ್ದರು, ಅಲ್ಲದೆ ಅವರು ಸಹಾಯ ಮಾಡುತ್ತಿದ್ದಾರೆ ಎಂದು ಯಾರಿಗೂ ಸಹ ತಿಳಿಯದಂತೆ ನೋಡಿಕೊಂಡಿದ್ದರು.
ಅದೆಷ್ಟೋ ಜನರ ಬಾಳಿಗೆ ಬೆಳಕಾಗಿದ್ದ ಅಪ್ಪು ಕೊನೆಗೂ ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ. ಇನ್ನು ಅಪ್ಪು ಅವರು ಇಲ್ಲದ ಆ ಖಾಲಿತನ ಅವರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಕರುನಾಡಿಗೆ ಕಾಡಿದೆ ಎಂದರೆ ತಪಲಾಗುವುದಿಲ್ಲ. ಇನ್ನು ಅಪ್ಪು ಇಲ್ಲದೆ ಕನ್ನಡ ಚಿತ್ರರಂಗ ನಿಜಕ್ಕೂ ಅನಾಥವಾಗಿದೆ.
ಇನ್ನು ಇದೀಗ ಅಪ್ಪು ಅವರ ಫೋಟೋ ಮತ್ತು ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕಂಡಾಗ ಕಣ್ಣಂಚಿನ್ನಲ್ಲಿ ನೀರು ಜಾರುವುದು ನಿಜ. ಇನ್ನು ಇದೀಗ ಅಪ್ಪು ಅವರ ಕನಸ್ಸಿನ ಪ್ರಾಜೆಕ್ಟ್ ಗಂಧದಗುಡಿ ಕೊನೆಗೂ ತೆರೆ ಮೇಲೆ ಅದ್ದೂರಿಯಾಗಿ ಬಿಡುಗಡೆಯಾಗಿದೆ.
ಇನ್ನು ಅಪ್ಪು ಅವರ ಕನಸ್ಸನ್ನು ನನಸ್ಸು ಮಾಡಲು ಅಶ್ವಿನಿ ಅವರು ಬಹಳಷ್ಟು ಕಷ್ಟ ಪಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಇದೆ ಮೊದಲ ಬಾರಿಗೆ ಅಪ್ಪು ಅವರ ಗಂಧದಗುಡಿ ಸಿನಿಮಾದ ಕುರಿತು ಸಂದರ್ಶನ ನೀಡಿರುವ ಅಶ್ವಿನಿ ಮೇಡಂ ತಮ್ಮ ಪ್ರೀತಿಯ ಬಗ್ಗೆ ಎಲ್ಲರ ಎದುರು ಹಂಚಿಕೊಂಡಿದ್ದಾರೆ.
ಇನ್ನು ಸಿನಿಮಾದ ಬಗ್ಗೆ ಮಾತನಾಡಿರುವ ಅಶ್ವಿನಿ ಅವರು ಈ ಸಿನಿಮಾ ಅವರ ಕನಸ್ಸಾಗಿತ್ತು, ನಮ್ಮ ರಾಜ್ಯದ ಪ್ರಕೃತಿ ಸೌಂದರ್ಯವನ್ನ ಸಿನಿಮಾದ ರೀತಿ ತೋರಿಸಬೇಕೆನ್ನುವ ಆಸೆ ಅವರಿಗಿತ್ತು. ಜಾಗಗಳಿಗೆ ಹೋದಾಗಲೆಲ್ಲ ಅವರು ತುಂಬಾ ಸಂತಸ ಪಡುತ್ತಿದ್ದರು. ಇನ್ನು ಸಾಮಾನ್ಯವಾಗಿ ನಾವು ಹೊರದೇಶಕ್ಕೆ ಪ್ರವಾಸಕ್ಕೆ ಹೋಗುತ್ತಿದ್ದೆವು.
ಇನ್ನು ನಮ್ಮ ರಾಜ್ಯದಲ್ಲೇ ಸಾಕಷ್ಟು ಸುಂದರವಾದ ಜಾಗಗಳಿದೆ ಎಂದು ಅದನ್ನು ವೀಕ್ಷಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡರು. ಇನ್ನು ಒಂದು ದಿನ ಒಂದು ಜಾಗದಲ್ಲಿ ನೆಟ್ವೇರ್ಕ್ ಇಲ್ಲದ ಬೆಳ್ಳಗೆಯಿಂದ ನನ್ನ ಬಳಿ ಮಾತನಾಡಿರಲಿಲ್ಲ, ಈ ಕಾರಣಕ್ಕೆ ಒಂದ್ ಬೆಟ್ಟದ ಮೇಲೆ ನೆಟ್ವೇರ್ಕ್ ಸಿಗುತ್ತದೆ ಎಂದು ಶ್ರಮ ಪಟ್ಟು ಅಲ್ಲಿಗೆ ಹೋಗಿ ಮಾತನಾಡಿದ್ದರು.
ಇನ್ನು ಇಲ್ಲಿನ ಜಾಗ ತುಂಬಾ ಚೆನ್ನಾಗಿದೆ ನೀನು ಎನ್ ಮಾಡ್ತಿಯೋ ನನಗೆ ಗೊತ್ತಿಲ್ಲ. ನೀನು ಇಲ್ಲಿದೆ ಬರಬೇಕು ಎಂದರೆ. ನಾನು ಸಹ 2 ದಿನ ಬಿಟ್ಟು ಆ ಜಾಗಕ್ಕೆ ಹೋಗಿ ಅಲ್ಲಿ ಟ್ರೆಕಿಂಗ್ ಮಾಡಿದೆವು. ನಾನು ನಿಜಕ್ಕೂ ಮರಿಯಲಾಗದಂತಹ ಕ್ಷಣ ಅದು. ಇನ್ನು ಅಪ್ಪು ಅವರು ಆದರ್ಶನ ವ್ಯಕ್ತಿ ಎನ್ನುವುದಕ್ಕೆ ಅಶ್ವಿನಿ ಅವರ ಮಾತುಗಳೇ ಸಾಕ್ಷಿ.