ಅಪ್ಪು ನಮ್ಮನ್ನು ಬಿಟ್ಟು ಹೋಗಿ ಈಗಾಗಲೆ ಒಂದು ವರ್ಷ ಕಳೆದು ಹೋಗಿದೆ. ಇನ್ನು ಇದೀಗ ಅಪ್ಪು ಅವರ ಒಂದು ವರ್ಷದ ಪುಣ್ಯ ತಿಥಿ ನಡೆಯುತ್ತಿದ್ದು, ಈ ದಿನ ಅಪ್ಪು ಅವರು ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ. ಇನ್ನು ಇದೀಗ ಇಡೀ ದೇಶಾದ್ಯಂತ ಜನರು ಈ ದಿನ ಅಪ್ಪು ಅವರ ಸ-ಮಾಧಿಯ ಬಳಿ ಭೇಟಿ ನೀಡುತ್ತಿದ್ದಾರೆ.
ಅಪ್ಪು ಅವರು ಒಬ್ಬ ಅದ್ಭುತ ಹಾಗೂ ಉತ್ತಮ ಗುಣಗಳಿರುವ ವ್ಯಕ್ತಿ ಎಂಬುವುದಕ್ಕೆ ನಮ್ಮ ಬಳಿ ಸಾಕಷ್ಟು ಉದಾಹರಣೆಗಳಿವೆ. ಅಪ್ಪು ಅವರ ಪುಣ್ಯ ತಿಥಿಯ ದಿನ ದೊಡ್ಮನೆಯ ಪ್ರತಿಯೊಬ್ಬ ಸದಸ್ಯರು ಭಾಗಿಯಾಗಿದ್ದು, ಹೋಮ ಹವನ ಮಾಡಿಸಿ ಅಪ್ಪು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
ಇನ್ನು ಅಪ್ಪು ಸ-ಮಾಧಿಯ ಬಳಿ ಈ ದಿನ ಜನರು ಲಕ್ಷಗಳಲ್ಲಿ ಬರುತ್ತಾರೆ ಎನ್ನುವ ಊಹೆ ಎಲ್ಲರಿಗೂ ಮೊದಲಿನಿಂದಲೇ ಇತ್ತು. ಆದರೆ ಎಲ್ಲರ ಊಹೆಗೂ ಮೀರಿದಂತೆ ಜನರು ಬಂದಿದ್ದಾರೆ. ಅಪ್ಪು ಅವರ ಸ-ಮಾಧಿಯ ದರ್ಶನ ಪಡೆಯಲು ಒಂದು ದಿನದ ಮುಂಚಿತವಾಗಿ ಜನರು ಬಂದು ಕಾದಿದ್ದಾರೆ.
ಕೇವಲ ಕರ್ನಾಟಕದಿಂದ ಮಾತ್ರವಲ್ಲ ಬೇರೆ ರಾಜ್ಯಗಳಿಂದ ಸಹ ಜನರು ಬಂದು ಅಪ್ಪು ಅವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಅಪ್ಪು ಸ-ಮಾಧಿಯ ಬಳಿ ಜನರು ದೇವಸ್ಥಾನಕ್ಕೆ ಹೋಗುವಂತೆ ಬಂದಿದ್ದು, ಇದನ್ನು ನೋಡಿ ದೊಡ್ಮನೆಯವರ ಕಣ್ಣಲ್ಲಿ ಆನಂದಭಾಷ್ಪ ಹರಿದಿದೆ.
ಇನ್ನು ಅಪ್ಪು ಇನ್ನಿಲ್ಲ ಎಂದು ತಿಳಿದ ತಕ್ಷಣ ಎಲ್ಲರ ಕಣ್ಣಲ್ಲಿ ನೀರು ಬರುತ್ತದೆ. ಇನ್ನು ಅಭಿಮಾನಿಗಳಾಗಿರುವ ನಮಗೆ ಇಷ್ಟು ದುಃಖವಾಗುತ್ತಿದ್ದರೆ, ಅವರ ಜೊತೆಗೆ ಇದ್ದು, ಅವರ ನೆರಳಿನಲ್ಲಿ ಬೆಳೆದ ದೊಡ್ಮನೆಯ ಮಂದಿಗೆ ಇನ್ನೆಷ್ಟು ದುಃಖವಾಗುತ್ತಿರಬಹುದು ಎಂಬುದನ್ನು ಊಹಿಸಲು ಕೂಡ ಸಾಧ್ಯವಿಲ್ಲ.
ಇನ್ನು ಅಪ್ಪು ಸ-ಮಾಧಿಯ ಬಳಿ ಇದೀಗ ಹೋಮ ಹವನ ನಡೆಯುತ್ತಿದೆ. ಈ ದಿನ ದೊಡ್ಮನೆಯ ಪ್ರತಿಯೊಬ್ಬ ಸದ್ಯಸ ಕೂಡ ಭಾಗಿಯಾಗಿದ್ದು, ಇನ್ನು ಇದೆ ವೇಳೆ ಅಪ್ಪು ಅವರನ್ನು ನೆನೆದು ಅಪ್ಪು ಮಗಳು ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸದ್ಯ ಅಲ್ಲಿದ್ದ ಮಾಧ್ಯಮದವರು ಸೆರೆ ಹಿಡಿದಿದ್ದಾರೆ.
ಇನ್ನು ಅಪ್ಪು ಮಗಳು ಅಳುತ್ತಿರುವುದನ್ನು ನೋಡಿ ರಾಘಣ್ಣ ಅವರಿಗೆ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ. ಇನ್ನು ನಿಮಗೂ ಕೂಡ ಅಪ್ಪು ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಒಂದು ಲೈಕ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..