ಅಪ್ಪು ಅವರನ್ನು ಕಳೆದುಕೊಂಡು ಇಡೀ ಕನ್ನಡ ಚಿತ್ರರಂಗ ಅನಾಥವಾಗಿದೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಅವರನ್ನು ತಮ್ಮ ಸ್ವಂತ ಮಗನಂತೆ ಅದೆಷ್ಟೋ ಜನರು ಭಾವಿಸಿದ್ದರು, ಇನ್ನು ಅವರ ಮನೆಯ ಮಗನಾದ ಅಪ್ಪು ಅವರನ್ನು ಕಳೆದುಕೊಂಡು ಅದೆಷ್ಟೋ ಮನೆಗಳು ಅನಾಥವಾಗಿದೆ.
ಅಪ್ಪು ಅವರು ನಮ್ಮನ್ನು ಬಿಟ್ಟು ಹೋದ ದಿನದಿಂದಲೂ ಇಂದಿನವರೆಗೂ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆಯಲು ಲಕ್ಷಗಳಲ್ಲಿ ಅಭಿಮಾನಿಗಳು ಬರುತ್ತಿದ್ದರು. ಇನ್ನು ಅಂತಹ ದೇವರಂತಹ ಮನುಷ್ಯ ನಮ್ಮನ್ನು ಬಿಟ್ಟು ಹೋಗಿ ಇಂದಿಗೆ ಒಂದು ವರ್ಷ ಕಳೆದು ಹೋಗಿದೆ.
ಇನ್ನು ಇಂದು ಅಪ್ಪು ಅವರ ಮೊದಲನೆಯ ವರ್ಷದ ಪುಣ್ಯ ಸ್ಮರಣೆ ಇನ್ನು ಈ ದಿನ ಅಪ್ಪು ಅವರನ್ನು ಭೇಟಿ ಮಾಡಲು ಅದೆಷ್ಟೋ ಸಾವಿರ ಜನರು ಕಂಠೀರವ ಸ್ಟುಡಿಯೋ ಬಳಿ ಕಾದು ಕುಳಿತ್ತಿದ್ದಾರೆ. ಚಿಕ್ಕ ಮಕ್ಕಲಿನಿಂದ ಹಿಡಿದು ದೊಡ್ಡವರವರೆಗೂ ಅಪ್ಪುಗಾಗಿ ಸಾಲಿನಲ್ಲಿ ನಿಂತಿದ್ದಾರೆ.
ಇನ್ನು ಅಪ್ಪು ಅವರ ಪುಣ್ಯಸ್ಮರಣೆಯನ್ನು ಹಬ್ಬದ ರೀತಿ ಆಚರಿಸಬೇಕು ಎಂದು ಅದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಸ್ವತಃ ಅಶ್ವಿನಿ ಅವರೇ ಮುಂದೆ ನಿಂತು ಮಾಡಿದ್ದಾರೆ. ಅಲ್ಲದೆ ಅಶ್ವಿನಿ ಮೇಡಂ ಅವರ ಬೆನ್ನೆಲುವಾಗಿ ದೊಡ್ಮನೆಯ ಪ್ರತಿಯೊಬ್ಬ ಸದಸ್ಯ ನಿಂತಿದ್ದಾರೆ ಎಂದರೆ ತಪ್ಪಾಗುವುದಿಲ್ಲ.
ಇನ್ನು ಇದೀಗ ಅಪ್ಪು ಅವರ ಸಮಾಧಿಯ ಬಳಿ ಶಿವಣ್ಣ, ಗೀತಕ್ಕಾ, ರಾಘಣ್ಣ, ಅಶ್ವಿನಿ ಮೇಡಂ ಹಾಗೂ ಅವರ ಮಗಳು ಜೊತೆಗೆ ಯುವ ರಾಜ್ ಕುಮಾರ್ ಸೇರಿದಂತೆ ದೊಡ್ಮನೆಯ ಎಲ್ಲಾ ಸದಸ್ಯರು ಜೊತೆ ಸೇರಿ, ಈ ದಿನ ಅಪ್ಪು ಅವರ ಹೆಸರಿನಲ್ಲಿ ಹೋಮ ಹವನ ನಡೆಸಿದ್ದಾರೆ.
ಇನ್ನು ಈ ವೇಳೆ ಅಪ್ಪು ಅವರ ಸಮಾಧಿಯ ಬಳಿ ಅವರ ಸಿನಿಮಾದ ಹಾಡುಗಳನ್ನು ಹಾಕಲಾಗಿದೆ. ಇನ್ನು ಇದೆ ವೇಳೆ ಶಿವಣ್ಣ ಅವರ ಓಂ ಸಿನಿಮಾದ ಬ್ರಹ್ಮಾನಂದ ಓಂಕಾರ ಹಾಡನ್ನು ಹೇಳುತ್ತಾ, ಅಪ್ಪು ಅವರ ಮಗಳನ್ನು ತಬ್ಬಿಕೊಂಡು, ರಾಘಣ್ಣ ಅಪ್ಪು ಅವರ ಸ-ಮಾಧಿಯನ್ನು ತೋರಿಸುತ್ತಾ ಏನೋ ಹೇಳಿದ್ದಾರೆ.
ಸದ್ಯ ವಿಡಿಯೋ ಒಂದರಲ್ಲಿ ಈ ದೃಶ್ಯ ಸೇರಿಯಾಗಿದ್ದು, ಅಷ್ಟಕ್ಕೂ ರಾಘಣ್ಣ ಹೇಳಿದ್ದೇನು ಎನ್ನುವ ಕುತೂಹಲ ಎಲ್ಲರಿಗೂ ಮೂಡಿದೆ. ಇನ್ನು ನಿಮಗೂ ಕೂಡ ಅಪ್ಪು ಇಷ್ಟವಾಗಿದ್ದರೆ, ಈ ಪೋಸ್ಟ್ ಅನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..