ಅಪ್ಪು ಅವರ ಗಂಧದಗುಡಿ ಸಿನಿಮಾ ಇದೀಗ ಬಿಡುಗಡೆಯಾಗಿ ಎಲ್ಲೆಡೆ ಸಕತ್ ಸದ್ದು ಮಾಡುತ್ತಿದೆ. ಇನ್ನು ಅಪ್ಪು ಅವರ ಕನಸ್ಸಿನ ಸಿನಿಮಾ ಗಂಧದಗುಡಿಗಾಗಿ ಅಪ್ಪು ಬಹಳ ಕಷ್ಟ ಪಟ್ಟದ್ದರು. ಕೊನೆಗೂ ಅಪ್ಪು ಅವರ ಕಷ್ಟಕ್ಕೆ ನಿಜಕ್ಕೂ ಪ್ರತಿಫಲ ಸಿಕ್ಕಿದೆ ಎಂದರೆ ತಪ್ಪಾಗುವುದಿಲ್ಲ.
ಇನ್ನು ಅಪ್ಪು ಅವರನ್ನು ಕೊನೆಯ ಬಾರಿ ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳುಲು ಅದೆಷ್ಟೋ ಜನರು ಬಹಳ ಕಾತುರರಾಗಿದಿಂದ ಕಾದಿದ್ದರು. ಕೊನೆಗೂ ಅವರೆಲ್ಲರ ನಿರೀಕ್ಷೆಗೆ ಫಲ ಸಿಕ್ಕಿದೆ. ಅಪ್ಪು ಅವರನ್ನು ತೆರೆ ಮೇಲೆ ಕಣ್ತುಂಬ ನೋಡಿ ಎಲ್ಲರೂ ಭಾವುಕರಾಗಿದ್ದಾರೆ.
ಇನ್ನು ಇದೀಗ ಅಪ್ಪು ಅವರ ಒಂದು ವರ್ಷದ ಪುಣ್ಯಸ್ಮರಣೆಯ ದಿನದಂದು ಅವರನ್ನು ನೋಡಲು ಸಾಕಷ್ಟು ಜಾಗಗಳಿಂದ ಸಾವಿರಾರು ಜನರು ಅಪ್ಪು ಅವರ ಸ-ಮಾಧಿಯ ಬಳಿ ಕಂಠೀರವ ಸ್ಟುಡಿಯೋ ಬಳಿ ಧಾವಿಸಿದರು. ಇನ್ನು ಅಪ್ಪು ಅವರ ಈ ಪುಣ್ಯದಿನದಂದು ಅವರನ್ನು ಎಲ್ಲರೂ ದೇವರಂತೆ ಪೂಜಿಸುತ್ತಿದ್ದಾರೆ.
ಕೇವಲ ಕನ್ನಡವರು ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿ ಸಹ ನಮ್ಮ ಅಪ್ಪು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ಇಂದು ಅವರನ್ನು ಕಾಣಲು ಅವರ ಅಭಿಮಾನಿಗಳ ರಾಶಿ ಹರಿದು ಬಂದಿದೆ. ಅಪ್ಪು ಅವರನ್ನು ನೋಡಿ ಅವರ ಆಶೀರ್ವಾದ ಪಡೆಯಲು ಸಾಕಷ್ಟು ಜನ ಪರದಾಡುತ್ತಿದ್ದಾರೆ.
ಇನ್ನು ಅಪ್ಪು ಎಂತಹ ಸಹಜ ಜೀವಿ ಎನ್ನುವುದು ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಯಾವುದೇ ಆಡಂಬರ ಇಲ್ಲದೆ ಯಾವುದೇ ಅಹಂ ಇಲ್ಲದೆ ಸಹಜ ಜೀವನ ನಡೆಸಿದ್ದ ವ್ಯಕ್ತಿ ನಮ್ಮ ಅಪ್ಪು. ಅಂತಹ ಅದ್ಭುತ ವ್ಯಕ್ತಿ ಇಂದು ನಮ್ಮ ಮದ್ಯೆ ಇಲ್ಲದೆ ಇರುವುದು ನಿಜಕ್ಕೂ ಬೇಸರ ತರುವಂತಹ ಸಂಗತಿ.
ಇನ್ನು ಇದೀಗ ಅವರ ಅದೇ ಗುಣ ಅವರ ಮಕ್ಕಳಿಗೂ ಸಹ ಬಂದಿದೆ ಎಂದರೆ ತಪ್ಪಾಗುವುದಿಲ್ಲ. ಅಪ್ಪು ಅವರ ಪುಣ್ಯಸ್ಮರಣೆಯ ದಿನ ಸಾಕಷ್ಟು ಮಂದಿಗೆ ಅನ್ನಧಾನ ಮಾಡಲಾಗಿದೆ. ಇನ್ನು ಈ ವೇಳೆ ಅಪ್ಪು ಅವರ ಮಗಳು ಸ್ವತಃ ತಾವೇ ಅಲ್ಲಿ ಆಜಾರಾಗಿದ್ದ ಅಭಿಮಾನಿಗಳಿಗೆ ಊಟ ಬಡಿಸಿದ್ದಾರೆ.
ಈ ವಿಡಿಯೋವನ್ನು ಅಲ್ಲಿದ್ದ ಕೆಲ ಮಾದ್ಯಮಾದವರು ಸೆರೆ ಇಡಿದಿದ್ದಾರೆ. ಸದ್ಯ ಈ ವಿಡಿಯೋದಲ್ಲಿ ಅಪ್ಪು ಮಗಳ ಸರಳತೆ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಅಪ್ಪನಂತೆ ಮಗಳು ಎಂದು ಎಲ್ಲರೂ ಹೋಗಳುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..