ಅಪ್ಪು ಈ ಹೆಸರು ಕೇಳಿದ ತಕ್ಷಣ ಎಲ್ಲರ ಮನಸ್ಸಿಗೆ ಹೇಳಲಾಗದಷ್ಟು ಬೇಸರವಾಗುತ್ತದೆ. ಸಹಜ ಗುಣ, ಮುಟ್ಟಿನಂತ ಮನಸ್ಸು, ಚಂದ್ರನಂತ ನಗು, ದೇವರಂತಹ ಮನುಷ್ಯ ಇಂತಹ ವ್ಯಕ್ತಿಯನ್ನು ಕಳೆದು ಕೊಂಡು ನಿಜಕ್ಕೂ ನಾವೆಲ್ಲರೂ ಅನಾಥರಾಗಿದ್ದೇವೆ ಎಂದರೆ ತಪ್ಪಾಗುವುದಿಲ್ಲ.
ಯಾರಿಗೆ ಯಾವ ಸಮಯದಲ್ಲಿ ಯಾವುದೇ ಕಷ್ಟ ಇದ್ದರೂ ಸರಿ ಅಪ್ಪು ಅವರು ಎಷ್ಟೇ ಬ್ಯುಸಿಯಾಗಿದ್ದರೂ ಕೂಡ ಅವರ ಕಷ್ಟಕ್ಕೆ ಮೊದಲು ಸ್ಪಂಧಿಸುತ್ತಿದ್ದರು. ಕರುನಾಡ ರತ್ನ ಅಪ್ಪು ಅದೆಷ್ಟೋ ಜನರಿಗೆ ಮಗನಾಗಿ, ಅಣ್ಣನಾಗಿ, ತಂದೆಯಾಗಿದ್ದರು, ಇನ್ನು ಇದೀಗ ಅವರು ನಮ್ಮ ಜೊತೆ ಇರುವುದಿಲ್ಲ ಇನ್ನು ಅವರನ್ನು ನೋಡಲು ಸಾಧ್ಯವಾಗುವುದಿಲ್ಲ ಎನ್ನುವ ವಿಷಯ ತಿಳಿದರೆ ಮನಸ್ಸಿಗೆ ಬಹಳ ನೋವಾಗುತ್ತದೆ.
ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿ ಇದೀಗ ಒಂದು ವರ್ಷ ಕಳೆದು ಹೋಗಿದೆ. ಅಪ್ಪು ಅವರನ್ನು ಕಳೆದುಕೊಂಡ ಆ ದಿನದಿಂದ ಈ ದಿನದವರೆಗೂ ಅವರನ್ನು ನೋಡಲು ಕಂಠೀರವ ಸ್ಟುಡಿಯೋ ಬಳಿ ಜನಸಾಗರ ಇರುತ್ತಿತ್ತು. ಅದೆಷ್ಟೋ ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳು ಅಪ್ಪು ಅವರ ಸಮಾಧಿಗೆ ಭೇಟಿ ನೀಡುತ್ತಿದ್ದರು.
ಅಪ್ಪು ಅವರನ್ನು ನೋಡಿ ಅವರ ನೆನೆದು ಕಣ್ಣೀರು ಹಾಕುತ್ತಾ, ಅವರ ಆಶೀರ್ವಾದ ಪಡೆದು ಮತ್ತೆ ಹುಟ್ಟಿ ಬಾ ಅಪ್ಪು ಎಂದು ಅದೆಷ್ಟೋ ಜನರು ಅಪ್ಪು ಅವರ ಸ-ಮಾಧಿಯ ಬಳಿ ಕಣ್ಣೀರು ಹಾಕುತ್ತಿದ್ದರು. ಇನ್ನು ಕೆಲವರು ಅಪ್ಪು ಅವರ ಹೆಸರಿನಲ್ಲಿ ಅವರ ಕೈಲಾದಷ್ಟು ಜನರಿಗೆ ಸಹಾಯ ಕೂಡ ಮಾಡುತ್ತಿದ್ದರು.
ಇನ್ನು ಇದೀಗ ಅಪ್ಪು ಅವರ ಪುಣ್ಯಸ್ಮರಣೆಯ ದಿನ ಅವರ ಹೆಸರಿನಲ್ಲಿ ಸಾಕಷ್ಟು ಹೋಮ ಹವನ ನಡೆಸಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಾಕಷ್ಟು ಜನ ಆ ದೇವರಲ್ಲಿ ಕೇಳಿಕೊಂಡಿದ್ದಾರೆ. ಇನ್ನು ಇದೆ ವೇಳೆ ಅಪ್ಪು ಅವರನ್ನು ನೋಡಲು ಅವರ ಸ-ಮಾಧಿ ಬಳಿ ಒಬ್ಬ ಮಹಿಳೆ ಆಗಮಿಸಿದ್ದು, ಅಪ್ಪು ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಅಪ್ಪು ನಮ್ಮನ್ನು ಏಕೆ ಬಿಟ್ಟು ಹೊದ್ರಿ ಅಪ್ಪು, ನಿಮಗಾಗಿ ಎಷ್ಟೊಂದು ಜನ ಬಂದಿದ್ದಾರೆ ಅಪ್ಪು. ಇದನ್ನೆಲ್ಲಾ ನೋಡಲು ನಿವು ಇಲ್ವಲ್ಲಾ. ಅಪ್ಪು ಅವರು ಒಂದು ಪುಟ್ಟ ಮಗು ಸರ್, ನೋಡಿ 2007 ರಲ್ಲಿ ನಮ್ಮ ಜೊತೆ ಒಬ್ಬರೇ ಬಂದು ಫೋಟೋ ಸಹ ತೆಗಿಸಿಕೊಂಡಿದ್ದರು ಎಂದು ಅಪ್ಪು ಜೊತೆಗಿನ ಫೋಟೊ ತೋರಿಸಿ ಬಹಳ ಬೇಸರ ಮಾಡಿಕೊಂಡಿದ್ದಾರೆ.
ಮತ್ತೆ ನೀವು ಹುಟ್ಟಿ ಬನ್ನಿ ಅಪ್ಪು, ಆ ನಿಮ್ಮ ಮಗಳ ಹೊಟ್ಟೆಯಲ್ಲೇ ಮತ್ತೆ ನೀವು ಹುಟ್ಟಿ ಬನ್ನಿ ಅಪ್ಪು ಎಂದು ಒಬ್ಬ ಮಹಿಳೆ ಕಣ್ಣೀರು ಹಾಕುತ್ತಾ ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ಇನ್ನು ಈ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..