ಬಿಗ್ ಬಾಸ್ ಸೀಸನ್ 9 ರ 5ನೆ ವಾರದ ಸಂಚಿಕೆಗೆ ಇದೀಗ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಕಳೆದ ವಾರ ಕಿಚ್ಚ ಸುದೀಪ್ ದೊಡ್ಮನೆಗೆ ಪಂಚಾಯತಿ ನಡೆಸಲು ಬರದೆ ಇದಿದ್ದು ಎಲ್ಲರಿಗೂ ಸಹ ಬೇಸರವಾಗಿತ್ತು. ಆಗಾಗಿ ಬಿಗ್ ಬಾಸ್ ವಿಭಿನ್ನ ರೀತಿಯಲ್ಲಿ ಎಲಿಮಿನೇಷನ್ ಅನ್ನ ಮಾಡಿದ್ದರು.
ಇನ್ನು ನೆನ್ನೆ ನಡೆದ ಎಲಿಮಿನೇಷನ್ ಪ್ರಕ್ರಿಯೆ ಬಹಳ ವಿಭಿನ್ನವಾಗಿತ್ತು ಎಂದೇ ಹೇಳ ಬಹುದು. ಇನ್ನು ಈ ವಾರ ಮನೆಯಿಂದ ಹೊಸ ಬರುವಂತಹ ಸ್ಪರ್ಧಿಗೆ ಕಿಚ್ಚ ಸುದೀಪ್ ಕೊಟ್ಟ ಪತ್ರದಲ್ಲಿಯೇ ಎಲಿಮಿನೇಟ್ ಆಗುವಂತಹ ಸೂಚನೆಯನ್ನ ನೀಡಿದ್ದರು ಅಂತ ಕಾಣುತ್ತದೆ.
ಹಾಗಾದರೆ ಎಲಿಮಿನೇಟ್ ಆದ ಸ್ಪರ್ಧಿ ಯಾರು, ಅಷ್ಟಕ್ಕೂ ಅವರು ಎಲಿಮಿನೇಟ್ ಆಗಲು ಕಾರಣ ಏನು. ಇನ್ನು ಎಲಿಮಿನೇಟ್ ಆದ ಸ್ಪರ್ಧಿ ಮಾಡಿದಂತಹ ತಪ್ಪಾದರು ಏನು, ಈ ರೀತಿಯ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೆವೆ, ಅದಕ್ಕಾಗಿ ಈ ಪುಟವನ್ನು ಸಂಪೂರ್ಣವಾಗಿ ಓದಿ..
ನೆನ್ನೆಯ ಬಿಗ್ ಬಾಸ್ ಸಂಚಿಕೆಯ ಆರಂಭದಲ್ಲಿ ಬಿಗ್ ಬಾಸ್ ಮನೆಯಲ್ಲಿ ಪುನೀತ್ ಅವರಿಗೆ ನಮನವನ್ನ ಸಲ್ಲಿಸಲಾಯಿತು. ಇನ್ನು ನೆನ್ನೆ ಪುನೀತ್ ಅವರ ಮೊದಲ ವರ್ಷದ ಪುಣ್ಯ ತಿಥಿ ಇದ್ದ ಕಾರಣ ಸ್ಪರ್ಧಿಗಳು ಸೇರಿದಂತೆ ಕಿಚ್ಚ ಸುದೀಪ್ ಅವರು ಅಪ್ಪು ಅವರಿಗೆ ನಮನವನ್ನ ಸಲ್ಲಿಸುತ್ತಾರೆ.
ಇನ್ನು ಸ್ಪರ್ಧಿಗಳಾಗಿ ಬಿಗ್ ಬಾಸ್ ಪತ್ರಗಳು ಮತ್ತು ಸ್ವೀಟ್ ಗಳನ್ನು ಕಳುಹಿಸುತ್ತಾರೆ. ಇನ್ನು ಒಂದೊಂದು ಸ್ಪರ್ಧಿಗಳಿಗೆ ಒಂದೊಂದು ಪತ್ರವನ್ನು ಸ್ವತಃ ಕಿಚ್ಚ ಸುದೀಪ್ ಅವರೇ ಬರೆದು ಕೊಟ್ಟು ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿರುತ್ತಾರೆ. ಇನ್ನು ಅದೇ ರೀತಿ ನೇಹಾ ಅವರಿಗೂ ಸಹ ಒಂದು ಪತ್ರ ಬಂದಿರುತ್ತದೆ.
ಅದರಲ್ಲಿ ಒಳ್ಳೆಯತನ ಒಳ್ಳೆಯದೇ ಆದರೆ ಅತಿ ಒಳ್ಳೆತನ ಎಂದು ಪ್ರಶ್ನಾರ್ಥಕ ಚಿಹ್ನೆ ಹಾಕಿ ಬಿಟ್ಟಿರುತ್ತಾರೆ. ಇನ್ನು ಈ ಪತ್ರ ನೇಹಾ ಅವರು ಮನೆಯಿಂದ ಹೊರ ಬರುತ್ತಾರಾ ಎನ್ನುವುದಕ್ಕೆ ನಿಜಕ್ಕೂ ಶಾಕ್ಷಿ ಎಂಬಂತೆ ಇತ್ತು. ಏಕೆಂದರೆ ಈ ವಾರ ಬಿಗ್ ಬಾಸ್ ಮನೆಯಿಂದ ನೇಹಾ ಗೌಡ ಎಲಿಮಿನೇಟ್ ಆಗಿದ್ದಾರೆ.
ಇನ್ನು ನೇಹಾ ಗೌಡ ಬಿಗ್ ಬಾಸ್ ಮನೆಯಲ್ಲಿ ತುಂಬಾ ಚೆನ್ನಾಗಿ ಆಟವಾಡುತ್ತಿದ್ದರು ಆದರೆ ಮಿಕ್ಕ ಸ್ಪರ್ಧಿಗಳಿಗೆ ಹೋಲಿಸಿದರೆ ಅವರು ಕೊಂಚ ವೀಕ್ ಇದ್ದ ಕಾರಣ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..