ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ನಮ್ಮ ಜೊತೆಗಿಲ್ಲ, ಇನ್ನು ಅವರನ್ನು ಕಳೆದುಕೊಂಡು ನಿಜಕ್ಕೂ ಅದೆಷ್ಟೋ ಜನರು ಅನಾಥರಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಪುನೀತ್ ಅಂತಹ ಅದ್ಭುತ ಹಾಗೂ ಉತ್ತಮ ಗುಣಗಳುಳ್ಳ ವ್ಯಕ್ತಿ ಎಲ್ಲೂ ಇಲ್ಲ ಎಂದರೆ ತಪ್ಪಾಗಲಾರದು.
ಅಪ್ಪು ಅವರು ಎಂತಹ ಅದ್ಭುತ ವ್ಯಕ್ತಿ ಎನ್ನುವುದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಅಪ್ಪು ಅವರು ನಮ್ಮನ್ನು ಬಿಟ್ಟು ಹೋದ ಮೇಲೆ ಅವರ ಅದೆಷ್ಟೋ ಫೋಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ.
ಸದ್ಯ ಅಪ್ಪು ಅವರ ಗಂಧದಗುಡಿ ಸಿನಿಮಾ ಎಲ್ಲೆಡೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಇನ್ನು ಗಂಧದಗುಡಿ ಸಿನಿಮಾ ಬೇರೆ ಎಲ್ಲಾ ಸಿನಿಮಾಗಳ ಧಾಖಲೆಯನ್ನು ಮುರಿಯುವಲ್ಲಿ ಯಶಸ್ವಿ ಕೂಡ ಆಗುತ್ತಿದೆ. ಇನ್ನು ಸಿನಿಮಾದಲ್ಲಿ ಅಪ್ಪು ಅವರನ್ನು ಕಂಡು ಪ್ರತಿಯೊಬ್ಬರು ಭಾವುಕರಾಗಿದ್ದಾರೆ.
ಅಪ್ಪು ಅವರನ್ನು ನಾವೆಲ್ಲರೂ ಕಳೆದುಕೊಂಡು ಈಗಾಗಲೆ ಒಂದು ವರ್ಷ ಕಳೆದು ಹೋಗಿದೆ. ಇನ್ನು ಅಪ್ಪು ಅವರ ಪುಣ್ಯತಿಥಿಯನ್ನು ಮೊನ್ನೆ ಬಹಳ ವಿಜೃಂಭಣೆಯಿಂದ ನೆರವೇರಿಸಲಾಗಿತ್ತು. ಇನ್ನು ಈ ಪುಣ್ಯ ಸಂರಣೆಗೆ ಲಕ್ಷಗಳಲ್ಲಿ ಜನರು ಆಗಮಿಸಿದ್ದರು, ಇನ್ನು ಅಪ್ಪು ಅವರ ಸ-ಮಾಧಿಗೆ ಭೇಟಿ ಮಾಡಿ ಪೂಜೆ ಸಲ್ಲಿಸಿದ್ದರು.
ಇನ್ನು ಇದೀಗ ಎಲ್ಲಿ ನೋಡಿದರೂ ಸಹ ಅಪ್ಪು ಅವರ ಫೋಟೋಗಳೇ ಕಾಣುತ್ತಿದೆ. ಇನ್ನು ಅದೆಷ್ಟೋ ಜನರು ತಮ್ಮ ಮನೆಯಲ್ಲೇ ಅಪ್ಪು ಫೋಟೋ ಇಟ್ಟು, ಪೂಜೆ ಮಾಡಿ ನೈವೇದ್ಯ ಮಾಡಿರುವುದು ಸಹ ಉಂಟು. ಇನ್ನು ಇದೀಗ ಅಪ್ಪು ಅವರ ಒಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಅಪ್ಪು ಅವರು ಕೊನೆಯದಾಗಿ ನಟಿಸಿದ್ದ ಒಂದು ಜಾಹೀರಾತಿನ ವಿಡಿಯೋ ಇದೀಗ ಎಲ್ಲೆಡೆ ಸಕತ್ ವೈರಲ್ ಆಗುತ್ತಿದೆ. ಡಾ. ರಾಜ್ ಕುಮಾರ್ ಲರ್ನಿಂಗ್ ಆಪ್ ಎನ್ನುವ ಒಂದು ಜಾಹೀರಾತಿನಲ್ಲಿ ಅಪ್ಪು ಕಾಣಿಸಿಕೊಂಡಿದ್ದು, ಈ ವಿಡಿಯೋ ನೋಡಿ ಎಲ್ಲರೂ ಸಹ ಭಾವುಕರಾಗಿದ್ದಾರೆ.
ಇನ್ನು ಅಪ್ಪು ಅವರು ಈ ಜಾಹೀರಾತಿನಲ್ಲಿ ಮಕ್ಕಳಿಗೆ ಸಿಗಬೇಕಾದ ಶಿಕ್ಷಣದ ಬಗ್ಗೆ ಮಾತನಾಡಿದ್ದು, ಅಪ್ಪು ಅವರ ಈ ಜಾಹೀರಾತಿನ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..