ಅಪ್ಪು ಅವರು ನಮ್ಮನ್ನು ಆಗಲಿ ಒಂದು ವರ್ಷವಾದರೂ ಸಹ ಅವರ ನೆನಪು ಮಾತ್ರ ನಮ್ಮನ್ನು ಬಿಟ್ಟು ಹೋಗುತ್ತಿಲ್ಲ. ಅಪ್ಪು ಅವರನ್ನು ಕಳೆದುಕೊಂಡು ಅಭಿಮಾನಿಗಳಾದ ನಮಗೆ ಹೀಗಿರಬೇಕಾದರೆ ಇನ್ನು ತಂದೆಯನ್ನ ಕಳೆದುಕೊಂಡ ಆ ಮಗಳ ಸ್ಥಿತಿ ಇನ್ನೇಗಿರಬೇಡ.
ಇನ್ನು ಇದೀಗ ಗಂಧದ ಗುಡಿ ಸಿನಿಮಾ ನೋಡಿ ಅಪ್ಪನ ಜೊತೆಗೆ ಫೋಟೋ ಹಂಚಿಕೊಂಡಿದ್ದಾರೆ ಮಗಳು ಧೃತಿ. ಪುನೀತ್ ರಾಜಕುಮಾರ್ ಅಭಿನಯದ ಗಂಧದಗುಡಿ ಚಿತ್ರ ಮತ್ತೆ ಅಪ್ಪು ಅವರನ್ನು ನೆನಪು ಮಾಡಿದೆ, ಒಂದು ವರ್ಷದಿಂದ ಅವರು ಇಲ್ಲ ಎನ್ನುವುದನ್ನು ನಂಬಲು ಆಗುತ್ತಿಲ್ಲ.
ಅಪ್ಪು ಗಂಧದ ಗುಡಿ ಸಿನಿಮಾದ ಮೂಲಕ ಮತ್ತೆ ತಮ್ಮ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಅಪ್ಪು ನಮ್ಮನ್ನು ಬಿಟ್ಟು ಹೋಗಿ ಒಂದು ವರ್ಷ ಕಳೆದರೂ ಸಹ ಅವರನ್ನು ಮರೆಯಲು ಆಗುತ್ತಿಲ್ಲ. ಅದರಲ್ಲೂ ಅವರ ಮಕ್ಕಳಿಗೆ ತುಂಬಾ ಕಾಡುತ್ತಿದೆ. ಗಂಧದಗುಡಿ ಸಿನಿಮಾ ನೋಡಿದ ಅಪ್ಪು ಮಗಳಾದ ಧೃತಿ ಅವರಿಗೆ ಮತ್ತೆ ಅಪ್ಪನ ನೆನಪಾಗಿದೆ.
ತಮ್ಮ ಅಪ್ಪನ ಜೊತೆಗಿನ ಫೋಟೋವನ್ನು ಧೃತಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಗಂಧದ ಗುಡಿ ಸಿನಿಮಾ ನೋಡಿರುವುದಾಗಿ ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ. ಗಂಧದಗುಡಿ ಸಿನಿಮಾ ನೋಡಿ ತೆರೆ ಮೇಲೆ ಅವರಪ್ಪನನ್ನು ಕೊನೆಯ ಬಾರಿ ನೋಡಿ ಕಣ್ಣು ತುಂಬಿಕೊಂಡಿದ್ದಾರೆ ಮಗಳು ಧೃತಿ.
ಈ ಸಿನಿಮಾದಲ್ಲಿ ಅಪ್ಪು ಒಂದು ಮಾತನ್ನು ಹೇಳುತ್ತಾರೆ. ಮನೆಗೆ ವಾಪಸ್ ಹೋಗ್ತೀನಿ ತಾನೇ ಮನೆಯಲ್ಲಿ ಹೆಂಡತಿ ಮಕ್ಕಳು ಕಾಯುತ್ತಿದ್ದಾರೆ. ಅಪ್ಪು ಅವರ ಈ ಮಾತು ಈ ಫೋಟೋ ನೋಡಿದಾಗ ಮತ್ತೆ ಮತ್ತೆ ನೆನಪಾಗುತ್ತದೆ. ದೃತಿ ಅವರು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ದಿನವೂ ಅಪ್ಪು ಅವರು ಒಮ್ಮೆಯಾದರೂ ದೃತಿ ಅವರಿಗೆ ಕರೆ ಮಾಡಿ ಮಾತನಾಡುತ್ತಿದ್ದರಂತೆ, ಆದರೆ ಈಗ ಅಪ್ಪನ ಧ್ವನಿ ಕೇಳಿದೆ ಮಗಳು ಬೇಸರದಲ್ಲಿದ್ದಾರೆ. ನನ್ನ ಮಗಳು ಸಿನಿಮಾಗಳನ್ನು ಅಷ್ಟಾಗಿ ನೋಡಲ ಆದರೆ ಈ ಸಿನಿಮಾ ವೈಲ್ಡ್ ಲೈಫ್ ಗೆ ಸಂಬಂಧಿಸಿದ್ದು, ಈಗಾಗಿ ಈ ಸಿನಿಮಾವನ್ನು ನನ್ನ ಮಕ್ಕಳು ನೋಡುತ್ತಾರೆ ಎಂದು ಅಪ್ಪು ಅವರು ಅಮೋಘ ವರ್ಷ ಅವರ ಬಳಿ ಹೇಳಿದ್ದರಂತೆ.
ಅಪ್ಪನನ್ನು ಕಳೆದುಕೊಂಡ ನೋವು ಅವರ ಮಕ್ಕಳಿಗೆ ಮಾತ್ರ ಗೊತ್ತು ಇನ್ನು ಅಶ್ವಿನಿ ಅವರು ತಂದೆಯ ಸ್ಥಾನದಲ್ಲಿ ನಿಂತು ಅವರ ಮಕ್ಕಳ ಜೀವನ ರೂಪಿಸುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ, ಹಾಗೆ ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ.