ಕರ್ನಾಟಕ ರತ್ನ ಪಡೆದು ಅಭಿಮಾನಿಗಳಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೇಳಿದ್ದೇನು ಗೊತ್ತಾ ನೋಡಿ !…

ಸ್ಯಾಂಡಲವುಡ್

ನೆನ್ನೆ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವ ಎಲ್ಲೆಡೆ ಕನ್ನಡದ ಭಾವುಟಗಳನ್ನು ಹಾರಿಸಿ ಎಲ್ಲರೂ ತುಂಬಾ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಇನ್ನು ಪ್ರತಿಯೊಬ್ಬ ಕನ್ನಡಿಗರಿಗೆ ಈ ದಿನ ತುಂಬಾ ಮುಖ್ಯ. ಹಾಗೆ ಕನ್ನಡದ ಅನೇಕ ಕಲಾವಿದರು ಸೋಷಿಯಲ್ ಮೀಡಿಯಾದ ಮುಖಾಂತರ ಕರ್ನಾಟಕ ರಾಜ್ಯೋತ್ಸವದ ಶುಭ ಕೋರಿದ್ದರು.

ಇನ್ನು ಕರ್ನಾಟಕ ರಾಜ್ಯೋತ್ಸವ ಪ್ರತಿಯೊಬ್ಬ ಕನ್ನಡಿಗನಿಗೂ ಬಹಳ ಮುಖ್ಯ, ಇನ್ನು ಈ ದಿನ ಮತ್ತೊಂದು ವಿಶೇಷ ನಡೆದಿದೆ ಅದೇನು ಎಂದರೆ ನಮ್ಮ ನಿಮ್ಮೆಲ್ಲರ ಕರುನಾಡ ಮನೆ ಮಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಈ ವಿಶೇಷ ದಿನದಂದು ಗೌರವಾನ್ವಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಹೌದು ನೆನ್ನೆ ನವೆಂಬರ್ 1 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವಾನ್ವಿತ ಕರ್ನಾಟಕ ರತ್ನ ಪ್ರಶಸ್ತಿ ನೀಡಿಲಾಗಿದೆ. ಇನ್ನು ಈ ಪ್ರಶಸ್ತಿಯನ್ನು ಪಡೆಯಲು ಅಪ್ಪು ನಮ್ಮ ಜೊತೆಗಿಲ್ಲದ ಕಾರಣ ಅವರ ಬದಲಾಗಿ ಅವರ ಪತ್ನಿ ಅಶ್ವಿನಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಸಾಕಾಸ್ಯು ದಿನಗಳಿಂದ ಅಪ್ಪು ಅವರಿಗೆ ಗೌರವಾನ್ವಿತ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಸಾಕಷ್ಟು ಅಭಿಮಾನಿಗಳು ಕೇಳಿ ಕೊಳ್ಳುತ್ತಿದ್ದರು. ಇನ್ನು ಎಲ್ಲರ ಮಾನ್ವಿಯಂತೆ ಕೊನೆಗೂ ಈ ಪ್ರಶಸ್ತಿ ಅಪ್ಪು ಅವರಿಗೆ ಸೇರಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

ಇನ್ನು ಈ ಪ್ರಶಸ್ತಿ ಪಡೆಯುವ ವೇಳೆ ಕಾರ್ಯಕ್ರಮದ ಮಧ್ಯದಲ್ಲಿ ಜೋರು ಮಳೆ ಬಂದಿದೆ, ಆದರೂ ಸಹ ಈ ಕಾರ್ಯಕ್ರಮವನ್ನು ಎಲ್ಲರೂ ನಿಂತು ಪೂರ್ಣ ಗೊಳಿಸಿದ್ದಾರೆ. ಹೌದು ಈ ಕಾರ್ಯಕ್ರಮಕ್ಕೆ ರಜನಿಕಾಂತ್, ಜ್ಯೂನಿಯರ್ ಎನ್ ಟಿ ಆರ್, ಸೇರಿದಂತೆ ಸಾಕಷ್ಟು ಗಣ್ಯರು ಭಾಗಿಯಾಗಿದ್ದರು.

ಇನ್ನು ಸಿ ಎಂ ಬಸವರಾಜ ಬೊಮ್ಮಯಿ ಅವರು ಅಶ್ವಿನಿ ಮೇಡಂ ಅವರಿಗೆ ಸನ್ಮಾನ ಮಾಡಿ ನಂತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಅಶ್ವಿನಿ ಅವರ ಕೈಗೆ ಒಪ್ಪಿಸಿದ್ದಾರೆ. ಸದ್ಯ ಎಲ್ಲೆಡೆ ಈ ವಿಷಯದ ಕುರಿತು ಸಂಭ್ರಮ ನಡೆಯುತ್ತಿದೆ. ಅಪ್ಪು ಅವರಿಗೆ ಈ ಪ್ರಶಸ್ತಿ ಕೊಟ್ಟಿರುವುದು ನಿಜಕ್ಕೂ ಹೆಮ್ಮೆ ಪಡುವಂತಹ ವಿಚಾರ.

ಈ ಪ್ರಶಸ್ತಿಯನ್ನು ಸ್ವೀಕರಿಸಿದ ಅಶ್ವಿನಿ ಮೇಡಂ ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ ಎಲ್ಲಾ ಅಭಿಮಾನಿಗಳಿಗೂ, ಹಾಗೆ ಕರ್ನಾಟಕ ಸರ್ಕಾರ ಹಾಗೂ ಬೊಮ್ಮಾಯಿ ಸರ್ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳನ್ನು ವೇದಿಕೆ ಮೇಲೆ ತಿಳಿಸಿದ್ದಾರೆ. ಇನ್ನು ನಿಮಗೂ ಕೂಡ ಅಪ್ಪು ಇಷ್ಟ ಎನ್ನುವಲ್ಲಿ ಈ ಪೋಸ್ಟ್ ಗೆ ಒಂದು ಲೈಕ್ ಮಾಡಿ, ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ

Leave a Reply

Your email address will not be published. Required fields are marked *