ಯಾರಿಗೂ ಕಾಣದ ಹಾಗೆ ಗೀತಕ್ಕನಿಗೆ ಓಕೆ ಹೇಳಿದ ಅಶ್ವಿನಿ ಪುನೀತ್!… ಏನಾಯ್ತು ಗೊತ್ತಾ ನೋಡಿ..!!

ಸ್ಯಾಂಡಲವುಡ್

ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಇಂದು ನಮ್ಮ ಜೊತೆಗಿಲ್ಲ. ಇನ್ನು ಕರುನಾಡ ಮನೆ ಮಗನಾಗಿದ್ದ ಅಪ್ಪು ಅವರನ್ನು ಕಳೆದುಕೊಂಡು ಅದೆಷ್ಟೋ ಕುಟುಂಬಗಳು ಅನಾಥವಾಗಿದೆ. ಇನ್ನು ಅಪ್ಪು ಅವರನ್ನು ಕಳೆದುಕೊಂಡು ಈಗಾಗಲೇ ಒಂದು ವರ್ಷ ಕಳೆದುಹೋಗಿದೆ.

ಆದರೂ ಸಹ ಅವರ ನೆನಪುಗಳಿಂದ ಹೊರ ಬರಲು ಯಾರಿಂದಲೂ ಸಹ ಸಾಧ್ಯವಾಗುತ್ತಿಲ್ಲ. ಇನ್ನು ಇತ್ತೀಚೆಗೆ ಅಪ್ಪು ಅವರ ಒಂದು ವರ್ಷದ ಪುಣ್ಯ ಸ್ಮರಣೆಯನ್ನು ಬಹಳ ಅದ್ದೂರಿಯಾಗಿ ಮಾಡಲಾಗಿತ್ತು. ಇನ್ನು ಅಭಿಮಾನಿಗಳು ಕೂಡ ಅಪ್ಪು ಹೆಸರಿನಲ್ಲಿ ಈ ದಿನ ಸಾಕಷ್ಟು ಸಾಮಾಜಿಕ ಕಾರ್ಯಕ್ರಗಳನ್ನು ಮಾಡಿದ್ದರು.

ಸದ್ಯ ಅಪ್ಪು ಅವರ ಗಂಧದಗುಡಿ ಸಿನಿಮಾ ಎಲ್ಲೆಡೆ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನ ಕಾಣುತ್ತೀದೆ. ಅಪ್ಪು ಅವರ ಕನಸ್ಸಿನ ಸಿನಿಮಾಗೆ ಎಲ್ಲೆಡೆಯಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಇದೀಗ ಅಪ್ಪು ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ಗೌರವಾನ್ವಿತ ಪ್ರಶಸ್ತಿ ನೀಡಿ ಗೋರವಿಸಿದೆ.

ಹೌದು ಪುನೀತ್ ರಾಜ್ ಕುಮಾರ್ ಅವರು ಮಾಡಿರುವ ಸಾಧನೆ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ಇಂತಹ ಅದ್ಭುತ ವ್ಯಕ್ತಿಗೆ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ನು ಈ ಕಾರ್ಯಕ್ರಮ ಕೆಲ ಫೋಟೋಗಳು ಸಕತ್ ವೈರಲ್ ಆಗುತ್ತಿದೆ.

ಇನ್ನು ಈ ಕಾರ್ಯಕ್ರಮ ನೆನ್ನೆ ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನದಂದು ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಅನೇಕ ಮಂದಿ ಭಾಗಿಯಾಗಿದ್ದರು. ಇನ್ನು ದೊಡ್ಮನೆಯ ಪ್ರತಿಯೊಬ್ಬ ಸದಸ್ಯರ ಜೊತೆಗೆ ಸಿ ಎಂ ಬಸವರಾಜ ಬೊಮ್ಮಾಯಿ, ಹಾಗೆ ಇನ್ಫೋಸಿಸ್ ನ ಸುಧಾ ಮೂರ್ತಿ, ತಮಿಳು ಚಿತ್ರರಂಗದ ಸ್ಟಾರ್ ಕಲಾವಿದ ರಜನಿಕಾಂತ್, ಹಾಗೆ ಟಾಲಿವುಡ್ ನಟ ಎನ್ ಟಿ ಆರ್ ಭಾಗಿಯಾಗುದ್ದರು.

ಇನ್ನು ಈ ಕಾರ್ಯಕ್ರಮ ನಡೆಯುತ್ತಿದ್ದಂತೆ ಜೋರು ಮಳೆ ಶುರುವಾಗಿದೆ, ಆದರೂ ಸಹ ಎಲ್ಲರೂ ಕೊಡೆಗಳನ್ನು ಹಿಡಿದು ಈ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದಾರೆ. ಹೌದು ಇನ್ನು ಅಪ್ಪು ಅವರ ಪರವಾಗಿ ಅಶ್ವಿನಿ ಮೇಡಂ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಇನ್ನು ಪ್ರಶಸ್ತಿ ಸ್ವೀಕರಿಸಿ ಸನ್ಮಾನ ಮಾಡಿಸಿಕೊಂಡ ನಂತರ ಅಶ್ವಿನಿ ಅವರು ಶಿವಣ್ಣ ಅವರ ಪತ್ನಿ ಗೀತಕ್ಕಾ ಅವರಿಗೆ ಓಕೆ ಎಂದು ಸನ್ನೆ ಮಾಡಿ ಹೇಳಿದ್ದಾರೆ. ಈ ದೃಶ್ಯ ಅಲ್ಲಿದ್ದ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *