ಕರ್ನಾಟಕ ರತ್ನ ಪ್ರಶಸ್ತಿ, ಈ ಬಿರುದಿನ ಬಗ್ಗೆ ಹೇಳುವುದಾದರೆ ಇದುವರೆಗೂ ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ಕೊಟ್ಟು ಕರ್ನಾಟಕ ರಾಜ್ಯ ಸರ್ಕಾರ ಗೌರವ ಸಲಿಸುತ್ತದೆ. ಇನ್ನು ಇದೀಗ ಈ ಸಾಲಿಗೆ ನಮ್ಮ ಕರುನಾಡ ಮುತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸೇರಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.
ಅಪ್ಪು ಅವರು ನಿಜಕ್ಕೂ ಕರ್ನಾಟಕದ ಹೆಮ್ಮೆ ಎಂದರೆ ತಪ್ಪಾಗಲಾರದು. ಅಪ್ಪು ಅವರು ಮಾಡಿರುವ ಕೆಲಸಗಳು ಹಿಂದೆ ಯಾರು ಮಾಡಿರಲಿಲ್ಲ, ಇನ್ನು ಮುಂದೆ ಯಾರ ಕೈಯಲ್ಲೂ ಮಾಡಲು ಸಾಧ್ಯವೂ ಇಲ್ಲ. ಇನ್ನು ಅಪ್ಪು ಅವರಿಗೆ ಇದೀಗ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಿದೆ.
ಈ ವಿಷಯ ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆ ಪಡುವಂತಹ ವಿಷಯವಾಗಿದೆ. ಇನ್ನು ಇದುವರೆಗೂ ಈ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೇವಲ 10 ಜನ ಮಾತ್ರ ಪಡೆದುಕೊಂಡಿದ್ದರು, ಆದರೆ ಇದೀಗ ಈ ಹೆಸರುಗಳಲ್ಲಿ ಇನ್ನು ಮುಂದೆ ನಮ್ಮ ಅಪ್ಪು ಅವರ ಹೆಸರು ಸಹ ಕೇಳಿ ಬರುತ್ತದೆ.
ಇನ್ನು ನೆನ್ನೆ ನವೆಂಬರ್ 1 ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಪ್ಪು ಅವರಿಗೆ ಈ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕರ್ನಾಟಕದ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೀಡಿ ಗೌರವಿಸಿದ್ದಾರೆ. ಇನ್ನು ಅಪ್ಪು ಪರವಾಗಿ ಈ ಪ್ರಶಸ್ತಿಯನ್ನು ಅವರ ಪತ್ನಿ ಅಶ್ವಿನಿ ಮೇಡಂ ಅವರು ಪಡೆದಿದ್ದಾರೆ.
ನಿಜಕ್ಕೂ ಈ ಪ್ರಶಸ್ತಿ ಅಪ್ಪು ಅವರಿಗೆ ಸಲ್ಲಬೇಕಾಗಿದೆ. ಅಂತಹ ಅದ್ಭುತ ವ್ಯಕ್ತಿಗೆ ಈ ಪ್ರಶಸ್ತಿ ಕೂಡ ತುಂಬಾ ಚಿಕ್ಕದು, ಇದಕ್ಕಿಂತ ಯಾವುದಾದರೂ ದೊಡ್ಡ ಪ್ರಶಸ್ತಿ ಇದ್ದರೆ ಅದನ್ನು ಅಪ್ಪು ಅವರಿಗೆ ಕೊಡಬೇಕು ಎನ್ನುವುದು ಅವರ ಅಭಿಮಾನಿಗಳ ಅಭಿಪ್ರಾಯ.
ಇನ್ನು ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಕಲಾವಿದರ ಜೊತೆಗೆ ಅನೇಕ ಬೇರೆ ಭಾಷೆಯ ಕಲಾವಿದರು ಸಹ ಭಾಗಿಯಾಗಿದ್ದರು. ರಜನಿಕಾಂತ್, ಜ್ಯೂನಿಯರ್ ಎನ್ ಟಿ ಆರ್, ಸುಧಾ ಮೂರ್ತಿ ಎಲ್ಲರೂ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇನ್ನು ಅಪ್ಪು ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಾ ಅಶ್ವಿನಿ ಅವರು ಭಾವುಕರಾಗಿದ್ದಾರೆ, ಕಣ್ಣೀರು ಹಾಕಿತ್ತಲೇ ಎಲ್ಲರಿಗೂ ಧನ್ಯವಾದಗಳನ್ನು ಕೋರಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ, ಹಾಗೆ ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…