ಅಪ್ಪು ಅವರ ಕರ್ನಾಟಕ ಪ್ರಶಸ್ತಿಗೆ ರಾಘಣ್ಣ ಅವರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?…

ಸ್ಯಾಂಡಲವುಡ್

ಪುನೀತ್ ರಾಜ್ ಕುಮಾರ್ ಅವರಿಗೆ ಇದೀಗ ಕರ್ನಾಟಕ ಸರ್ಕಾರ ಗೌರವಾನ್ವಿತ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ನು ಈ ವಿಷಯ ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಈ ಪ್ರಶಸ್ತಿಯನ್ನು ಅಪ್ಪು ಪರವಾಗಿ ಅವರ ಪತ್ನಿ ಅಶ್ವಿನಿ ಪಡೆದಿದ್ದಾರೆ.

ಹೌದು ನೆನ್ನೆ ನವೆಂಬರ್ 1 ಎಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ, ಈ ಅದ್ಭುತ ದಿನದಂದು ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ್ದಾರೆ. ಇನ್ನು ಈ ಪ್ರಶಸ್ತಿಯನ್ನು ಅಶ್ವಿನಿ ಅವರು ಪಡೆದಿದ್ದಾರೆ.

ಇನ್ನು ಈ ಕಾರ್ಯಕ್ರಮಕ್ಕೆ ಸಾಕಷ್ಟು ಮಂದಿ ಭಾಗಿಯಾಗಿದ್ದರು. ದೊಡ್ಮನೆಯ ಸದಸ್ಯರಾದ ಶಿವಣ್ಣ ಹಾಗೂ ಅವರ ಪತ್ನಿ ಗೀತಕ್ಕಾ ಜೊತೆಗೆ ರಾಘಣ್ಣ ಮತ್ತು ಯುವ ರಾಜ್ ಕುಮಾರ್ ಸೇರಿದಂತೆ ದೊಡ್ಮನೆಯ ಪ್ರತಿಯೊಬ್ಬ ಸದಸ್ಯರು ಭಾಗಿಯಾಗಿದ್ದರು.

ಇನ್ನು ಸ್ಟಾರ್ ನಟರಾದ ರಜನಿಕಾಂತ್ ಹಾಗೆ ನಟ ಜ್ಯೂನಿಯರ್ ಎನ್ ಟಿ ಆರ್ ಕೂಡ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಅಪ್ಪು ಅವರ ಬದಲಿಗೆ ಅಶ್ವಿನಿ ಅವರು ಈ ಪ್ರಶಸ್ತಿ ಪಡೆದಿದ್ದು, ಅವರು ಈ ವೇಳೆ ಬಹಕ ಭಾವುಕರಾಗಿದ್ದಾರೆ. ಇನ್ನು ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇನ್ನು ಕರ್ನಾಟಕ ರತ್ನ ಪ್ರಶಸ್ತಿ ನಮ್ಮ ಕರ್ನಾಟಕದ ಕೇವಲ 10 ಮಂದಿಗೆ ಮಾತ್ರ ಲಭಿಸಿದ್ದು, ದೊಡ್ಮನೆಯಿಂದ ಈ ಹಿಂದೆ ಡಾ ರಾಜ್ ಕುಮಾರ್ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು, ಇದೀಗ ಈ ಪ್ರಶಸ್ತಿಯನ್ನು ಅಪ್ಪು ಅವರಿಗೆ ನೀಡಿರುವುದು ನಿಜಕ್ಕೂ ಹೆಮ್ಮೆ ಪಡಬೇಕಾದಂತಹ ವಿಚಾರ.

ಇನ್ನು ಈ ಬಗ್ಗೆ ಮಾತನಾಡಿದ ರಾಘಣ್ಣ ಅವರು 30 ವರ್ಷಗಳ ಹಿಂದೆ ನಮ್ಮ ತಂದೆಯವರಿಗೆ ಈ ಪ್ರಶಸ್ತಿ ನೀಡಲಾಗಿತ್ತು. ಇನ್ನು ಇದೀಗ ಈ ಪ್ರಶಸ್ತಿ ಅಪ್ಪು ಅವರಿಗೆ ನೀಡಿರುವುದು ನಿಜಕ್ಕೂ ತುಂಬಾ ಖುಷಿಯಾಗುತ್ತಿದೆ. ಇನ್ನು ಎಷ್ಟೇ ಜೋರು ಮಳೆ ಬಂದರೂ ಸಹ ನಿಂತು ಕಾರ್ಯಕ್ರಮ ನೋಡಿದ ಪ್ರತಿಯೊಬ್ಬ ಅಭಿಮಾನಿಗೂ ಸಾಷ್ಟಾಂಗ ನಮಸ್ಕಾರಗಳು ಎಂದಿದ್ದಾರೆ.

ಇನ್ನು ಅಪ್ಪು ಅವರ ಗಂಧದಗುಡಿ ಸಿನಿಮಾದ ಬಗ್ಗೆ ಮಾತನಾಡಿದ ರಾಘಣ್ಣ ಆ ಸಿನಿಮಾದಲ್ಲಿ ಪ್ರಾಣಿಪಕ್ಷಿಗಳ ರಕ್ಷಣೆ ಹಾಗೆ ಪ್ಲಾಸ್ಟಿಗೆ ಬಳಿಕೆಯನ್ನು ಕಡಿಮೆ ಮಾಡಬೇಕು ಎನ್ನುವ ಅಂಶ ಇದೆ ಇದನ್ನು ಪ್ರತಿಯೊಬ್ಬರು ಕಲಿಯಬೇಕು ಎಂದಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *