90 ದಶಕದಲ್ಲಿ ಅದೆಷ್ಟೋ ಜನರ ಕನಸಿನ ರಾಣಿಯಾಗಿದ್ದ ನಟಿ ಎಂದರೆ ಅದು ನಟಿ ರಂಭಾ. ಹೆಸರಿಗೆ ತಕ್ಕಂತೆ ರಂಭೆಯತಹ ಸೌಂದರ್ಯ ಆಕೆಯದ್ದು. ಇನ್ನು ನಟಿ ರಂಭಾ ದಕ್ಷಿಣ ಭಾರತ ಸಿನಿಮಾರಂಗದ ಟಾಪ್ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.
ಕನ್ನಡ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ ಹಾಗೆ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ ಬಹು ಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ನಟಿ ರಂಭಾ. ಆಗಿನ ಕಾಲದಲ್ಲಿ ತಮ್ಮ ಸೌಂದರ್ಯದ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದರು.
ಇನ್ನು ನಟಿ ರಂಭಾ 2010 ರಲ್ಲಿ ಕೆನಡಾ ಮೂಲದ ಉದ್ಯಮಿಯ ಜೊತೆಗೆ ಮದುವೆಯಾದ ನಂತರ ಸಿನಿಮಾರಂಗದಿಂದ ಸಂಪೂರ್ಣ ದೂರ ಉಳಿದು ಬಿಟ್ಟರು. ಇನ್ನು ನಟಿ ರಂಭಾ ಅವರಿಗೆ ಮೂವರು ಮಕ್ಕಳಿದ್ದು, ಅದರಲ್ಲಿ ಇಬ್ಬರೂ ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದಾನೆ.
ಇನ್ನು ನಟಿ ರಂಭಾ ಅವರು ಸದ್ಯ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇನ್ನು ನಟಿ ರಂಭಾ ತಮ್ಮ ಪತಿ ಹಾಗೂ ಮಕ್ಕಳ ಜೊತೆಗೆ ವಿದೇಶದಲ್ಲಿ ನೆಲೆಸಿದ್ದಾರೆ. ಇನ್ನು ಇತ್ತೀಚೆಗೆ ನಟಿ ರಂಭಾ ಅವರ ಕಾರ್ ಆಕ್ಸಿ-ಡೆಂಟ್ ಆಗಿರುವ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಇನ್ನು ಆ ಕಾರ್ ನ ಫೋಟೋ ಸಹ ಬಹಳ ವೈರಲ್ ಆಗಿತ್ತು.
ಇನ್ನು ಈ ಬಗ್ಗೆ ಸ್ವತಃ ನಟಿ ರಂಭಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾರ್ ನ ಫೋಟೋ ಹಂಚಿಕೊಂಡು ನನ್ನ ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಹೋದ ಸಂದರ್ಭದಲ್ಲಿ ಎದುರಿಗೆ ಮತ್ತೊಂದು ಕಾರು ಬಂದು. ಈ ರೀತಿಯ ಘಟನೆ ನಡೆದಿದೆ. ನನಗೆ ಹಾಗೂ ನನ್ನ ಇಬ್ಬರೂ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ನನ್ನ ಮಗಳು ಸಾಶಾ ಇನ್ನು ಆಸ್ಪತ್ರೆಯಲ್ಲಿ ಇದ್ದಾಳೆ.
ನಮ್ಮ ಚೇತರಿಕೆಗಾಗಿ ಆ ದೇವರಲ್ಲಿ ಪ್ರಾರ್ಥಿಸಿ ಎಂದು ಬರೆದುಕೊಂಡಿದ್ದರು. ಇನ್ನು ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಇದೀಗ ನಟಿ ರಂಭಾ ಚೇತರಿಸಿಕೊಂಡಿದ್ದು, ಮತ್ತೆ ತಮ್ಮ ಇನ್ಸ್ಟಾಗ್ರಾಮ್ ಲೈವ್ ಬಂದು ತಮ್ಮ ಚೇತರಿಕೆಗಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇನ್ನು ನಾನು ಮತ್ತೆ ನನ್ನ ಮಕ್ಕಳು ಎಲ್ಲರೂ ಇದೀಗ ಹುಷಾರಾಗಿದ್ದೇವೆ, ಎಲ್ಲರೂ ಸೇಫ್ ಆಗಿದ್ದೇವೆ. ಇನ್ನು ಇದೀಗ ಮತ್ತೆ ಮನೆಗೆ ಮರಳಿದ್ದೇವೆ. ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿ ಎಂದು ಲೈವ್ ನಲ್ಲಿ ನಟಿ ರಂಭಾ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..