ಅಪ್ಪು ಅವರನ್ನು ಕಳೆದುಕೊಂಡ ನಂತರ ಎಲ್ಲರೂ ಬಹಳ ಬೇಸರರಾಗಿದ್ದಾರೆ. ಇನ್ನು ಅಪ್ಪು ಅವರ ಹೆಸರಿನಲ್ಲಿ ಅವರ ಅಭಿಮಾನಿಗಳು ದಿನಕ್ಕೊಂದು ಕೆಲಸ ಮಾಡುತ್ತಿರುತ್ತಾರೆ. ಇನ್ನು ಇದೀಗ ಒಬ್ಬ ಮಹಿಳೆ ಮಾಡಿರುವ ಕೆಲಸ ನೋಡಿ ಸ್ವತಃ ಅಶ್ವಿನಿ ಅವರು ಬಹಳ ಖುಷಿ ಪಟ್ಟಿದ್ದಾರೆ.
ಅಪ್ಪು ಅವರ ಒಬ್ಬ ದೊಡ್ಡ ಅಭಿಮಾನಿ ಇದೀಗ ಅಪ್ಪು ಅವರ ಒಂದು ದೊಡ್ಡ ಪೈಂಟಿಂಗ್ ಅನ್ನ ಬರೆದುಕೊಂಡು ಇದೀಗ ಅಪ್ಪು ಅವರ ಮನೆಗೆ ಬಂದು ಅಶ್ವಿನಿ ಮೇಡಂ ಅವರನ್ನು ಭೇಟಿ ಮಾಡಿ, ಈ ಪೈಂಟಿಂಗ್ ಅನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ನೋಡಿ ಅಶ್ವಿನಿ ಮೇಡಂ ಬಹಳ ಖುಷಿ ಪಟ್ಟಿದ್ದಾರೆ.
ಅಭಿಮಾನಿ ತಂಡ ಅಪ್ಪು ಅವರ ಸುಂದರವಾದ ಫೋಟೋ ನೋಡಿ ಅಶ್ವಿನಿ ಮೇಡಂ ಅವರಿಗೆ ಬಹಳ ಸಂತೋಷವಾಗಿದೆ. ಜೊತೆಗೆ ಅಭಿಮಾನಿಯ ಜೊತೆಗೆ ನಿಂತು ಅಶ್ವಿನಿ ಅವರು ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಇನ್ನು ಅಭಿಮಾನಿ ತಂದಿದ್ದ ಆ ಪೋಟಿವನ್ನು ಅಶ್ವಿನಿ ಅವರು ಅಪ್ಪು ಅವರ ಫೋಟೋ ಮುಂದೆ ಇಟ್ಟಿದ್ದಾರೆ. ನೀವು ಈ ಪೈಂಟಿಂಗ್ ಅನ್ನು ಬಹಳ ಸುಂದರವಾಗಿ ಮಾಡಿದ್ದೀರಿ, ಈ ಫೋಟೋ ತುಂಬಾ ಸುಂದರವಾಗಿದೆ. ಈ ಪೈಂಟಿಂಗ್ ನನ್ನ ಮನೆಯಲ್ಲಿ ಸದಾ ಇರುತ್ತದೆ ಎಂದು ಅಭಿಮಾನಿಗಳಿಗೆ ಅಶ್ವಿನಿ ಮೇಡಂ ತಿಳಿಸಿದ್ದಾರೆ.
ಬಹಳ ದಿನಗಳ ಹಿಂದೆಯೇ ಈ ಪೈಂಟಿಂಗ್ ಮಾಡಿ ಅಶ್ವಿನಿ ಅವರನ್ನು ಭೇಟಿ ಮಾಡಿ, ಈ ಪೈಂಟಿಂಗ್ ಕೊಡಲು ಕಾಯುತ್ತಿದ್ದರಂತೆ ಈ ಅಭಿಮಾನಿ ಆದರೆ ಅಶ್ವಿನಿ ಅವರು ಬಹಳ ಬ್ಯುಸಿ ಇದ್ದ ಕಾರಣ ಅವರನ್ನು ಭೇಟಿ ಮಾಡುವ ಅವಕಾಶ ಈ ಅಭಿಮಾನಿಗೆ ಸಿಕ್ಕಿರಲಿಲ್ಲ. ಕೊನೆಗೂ ಅಶ್ವಿನಿ ಅವರನ್ನು ಭೇಟಿ ಮಾಡಿದ್ದಾರೆ.
ಅಶ್ವಿನಿ ಅವರನ್ನು ಭೇಟಿ ಮಾಡಿ ಅವರಿಗೆ ತಾನು ಅಪ್ಪು ಅಭಿಮಾನಿ ಎಂದು ತಿಳಿಸಿ, ತಾವು ಮಾಡಿದ ಅಪ್ಪು ಅವರ ಪೈಂಟಿಂಗ್ ಅನ್ನು ನೀಡಿದ್ದಾರೆ. ಈ ಪೈಂಟಿಂಗ್ ನೋಡಿತ್ತಲೇ ಅಶ್ವಿನಿ ಅವರು ಬಹಳ ಖುಷಿ ಪಟ್ಟಿದ್ದಾರೆ. ಇನ್ನು ಆ ಅಭಿಮಾನಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ.
ಅಪ್ಪು ಅವರ ರಾಜಕುಮಾರ ಸಿನಿಮಾದ ಪೋಸ್ಟರ್ ಅನ್ನು ಈ ಅಭಿಮಾನಿ ಪೈಂಟಿಂಗ್ ಆಗಿ ಬಿಡಿಸಿದ್ದಾರೆ. ಇನ್ನು ಈ ಫೋಟೋದಲ್ಲಿ ಅಪ್ಪು ಅವರು ಬಹಳ ಸುಂದರವಾಗಿ ಕಾಣುತ್ತಿದ್ದು, ಸದ್ಯ ಈ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..