ಅಪ್ಪು ಸರ್ ಅವರ ಸಿನಿಮಾ ನೋಡೋಕೋಸ್ಕರ ಕನ್ನಡ ಕಳಿತುಕೊಂಡೆ ಬಂಗಾಲಿ ಹುಡುಗಿಯ ನೋವಿನ ಮಾತು ಒಮ್ಮೆ ನೋಡಿ ಕಣ್ಣಲ್ಲಿ ನೀರು ಬರುತ್ತೆ…!!!

ಸ್ಯಾಂಡಲವುಡ್

ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಟನೆ ಅವರ ಮಾತು ಅವರ ಮುದ್ದಾದ ಮುಖ ಹಾಗೆ ಅವರ ನಗು ಈ ಎಲ್ಲದಕ್ಕೂ ಅಭಿಮಾನಿಗಳಿದ್ದಾರೆ. ಅಪ್ಪು ಒಬ್ಬ ಅದ್ಭುತ ನಟ ಮಾತ್ರ ಅಲ್ಲ, ಒಬ್ಬ ಅದ್ಭುತ ವ್ಯಕ್ತಿ ಕೂಡ ಹೌದು. ಅಂತಹ ಅದ್ಭುತ ಮನುಷ್ಯ ಇಂದು ನಮ್ಮ ಜೊತೆಗಿಲ್ಲ ಎಂದರೆ ನಿಜಕ್ಕೂ ಬೇಸರವಾಗುತ್ತಿದೆ.

ಅಪ್ಪು ಅವರಿಗೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲಿ ಅಲ್ಲದೆ ದೇಶಾದ್ಯಂತ ಅಭಿಮಾನಿ ಬಳಗ ಇರುವುದು ನಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಆದರೆ ಇದೀಗ ಬೆಂಗಾಲಿಯ ಒಬ್ಬ ಮಹಿಳೆ ಅಪ್ಪುಅವರ ಗಂಧದಗುಡಿ ಸಿನಿಮಾ ನೋಡಲು ಬಂದಿದ್ದಾರೆ.

ಅಲ್ಲದೆ ಈ ಮಹಿಳೆ ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿದ್ದು, ಅಪ್ಪು ಅವರಿಗಾಗಿ ಕನ್ನಡ ಭಾಷೆಯನ್ನು ಕಲಿತು ಕನ್ನಡ ಸಿನಿಮಾಗಳನ್ನು ಸಹ ನೋಡಲು ಆರಂಭಿಸಿದ್ದಾರೆ. ಇನ್ನು ತಾನು ಅಪ್ಪು ಅವರನ್ನು ಹೇಗೆ ಇಷ್ಟ ಪಟ್ಟಿದ್ದು ಎನ್ನವುದನ್ನು ಸ್ವತಃ ಈ ಮಹಿಳೆ ಮಾಧ್ಯಮದವರ ಬಳಿ ಮಾತನಾಡಿದ್ದಾರೆ.

ನಾನು ಪೂಜಾ ವಿಶ್ವಾಸ್ ನಾನು ಮೂಲತಃ ಬೆಂಗಾಲಿಯವರು, ನಾನು 2010ರಲ್ಲಿ ಬೆಂಗಳೂರಿಗೆ ಬಂದೆ. ಅಪ್ಪು ಅವರ ಮನಪುರಂ ಗೋಲ್ಡ್ ಲೋನ್ ಪೋಸ್ಟರ್ ನೋಡಿದ ತಕ್ಷಣ ನಾನು ಅಪ್ಪು ಅವರ ಅಭಿಮಾನಿಯಾಗಿ ಬಿಟ್ಟೆ. ಕನ್ನಡ ಭಾಷೆಗೆ ಹಾಗೂ ಕನ್ನಡ ಸಿನಿಮಾಗಳಿಗೆ ಅಪ್ಪು ಅವರೇ ಇನ್ಸ್ಪಿರೇಷನ್. ನಾನು ಕನ್ನಡ ಕಲಿಯಲು ಮುಖ್ಯ ಕಾರಣ ಅಪ್ಪು ಸರ್.

ನಾನು ಅಪ್ಪವರಿಗಾಗಿ ಕನ್ನಡ ಕಲಿತೆ, ನಾನು ಕನ್ನಡ ಕಲಿಯಲು ಅಪ್ಪು ಅವರೇ ನನಗೆ ಇನ್ಸ್ಪಿರೇಷನ್. ನಾನು ಅಪ್ಪು ಅವರಿಗೆ ಕೇವಲ ಅಭಿಮಾನ ಅಲ್ಲ ನಾನು ಅವರ ಹುಚ್ಚು ಅಭಿಮಾನಿ. ನನಗೆ ಅಪ್ಪು ಸರ್ ಅವರ ಮುಖ ತುಂಬಾ ಇಷ್ಟ, ಅವರ ಮುಖ ನೋಡಿದ ತಕ್ಷಣ ನಾನು ಅವರ ಅಭಿಮಾನಿಯಾಗಿ ಬಿಟ್ಟೆ.

ನಾನು ಮೊದಲು ಅವರನ್ನು ಮನಪುರಂ ಗೋಲ್ಡ್ ಲೋನ್ ಪೋಸ್ಟಲ್ ನಲ್ಲಿ ನೋಡಿ ಅವರ ಅಭಿಮಾನಿಯಾಗಿಬಿಟ್ಟೆ. ನಂತರ ಅವರ ಹೆಸರು ಪುನೀತ್ ರಾಜಕುಮಾರ್ ಎಂದು ನನಗೆ ತಿಳಿಯಿತು ಅಂದಿನಿಂದ ಅವರೆಲ್ಲ ಸಿನಿಮಾಗಳನ್ನು ನಾನು ನೋಡಿದ್ದೇನೆ. ಇನ್ನು ಗಂಧದಗುಡಿ ಸಿನಿಮಾವನ್ನು 10 ಬಾರಿ ನೋಡಲಿದ್ದೇನೆ.

ಅಪ್ಪು ಅವರ ಡ್ಯಾನ್ಸ್ ಅವರ ಮುಖ ಅವರ ನಗು ಅವರ ಆಕ್ಟಿಂಗ್ ಎಲ್ಲವೂ ನನಗೆ ತುಂಬಾ ಇಷ್ಟ. ಒಮ್ಮೆಯಾದರೂ ಅವರನ್ನು ಭೇಟಿ ಮಾಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅಪ್ಪು ನನ್ನ ಇನ್ಸ್ಪಿರೇಷನ್ ಎಂದಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *