ನಗುವಿನ ಒಡೆಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮರ-ಣೋತ್ತರವಾಗಿ ನೆನ್ನೆ ಕರ್ನಾಟಕ ರಾಜ್ಯ ಸರ್ಕಾರವೂ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಪ್ರಶಸ್ತಿಯನ್ನು ಸಿಎಂ ಬೊಮ್ಮಾಯಿ ಅವರು ಪುನೀತ್ ಪತ್ನಿ ಅಶ್ವಿನಿ ಪುನೀತ್ ಅವರಿಗೆ ಸನ್ಮಾನ ಮಾಡಿ ನೀಡಿದರು.
ಈ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಅಶ್ವಿನಿ ಪುನೀತ್ ತಮ್ಮ ಸದಾಶಿವನಾಗರದ ನಿವಾಸಕ್ಕೆ ಬಂದ ತಕ್ಷಣ ಕರ್ನಾಟಕ ರತ್ನ ಚಿನ್ನದ ಪದಕವನ್ನು ಪುನೀತ್ ರಾಜಕುಮಾರ್ ಅವರ ಫೋಟೋಗೆ ಅರ್ಪಿಸುವ ಮೂಲಕ ಸಂತಸಪಟ್ಟಿದ್ದಾರೆ ಇನ್ನು ವರ್ಷಗಳ ಬಳಿಕ ಅಶ್ವಿನಿ ಅವರು ಇಷ್ಟೊಂದು ಖುಷಿಪಟ್ಟಿದ್ದಾರೆ.
ಈ ಸಮಯದಲ್ಲಿ ಅಪ್ಪು ಮುದ್ದಿನ ಮಗಳು ವಂದಿತಾ ಅವರ ತಂದೆ ಅಪ್ಪು ಅವರ ಭಾವ ಚಿತ್ರಕ್ಕೆ ತಾಯಿ ಅಶ್ವಿನಿ ಜೊತೆಗೆ ಕರ್ನಾಟಕ ರತ್ನ ಚಿನ್ನದ ಪದಕವನ್ನು ಹಾಕಿದರು. ವರ್ಷಗಳ ಬಳಿಕ ಮೊದಲ ಬಾರಿಗೆ ಅಶ್ವಿನಿ ಅವರು ತುಂಬು ಹೃದಯದಿಂದ ಅವರ ಮುಖದ ಮೇಲೆ ನಗು ಕಾಣಿಸಿರುವುದು ನಿಜಕ್ಕೂ ಖುಷಿಯ ವಿಚಾರ.
ಸದ್ಯ ಅಶ್ವಿನಿ ಮೇಡಂ ಹಾಗೂ ವಂದಿತಾ ಇಬ್ಬರೂ ಕರ್ನಾಟಕ ರತ್ನ ಚಿನ್ನದ ಪದಕವನ್ನು ಅಪ್ಪು ಆವರ ಭಾವ ಚಿತ್ರಕ್ಕೆ ಹಾಕಿರುವುದು ಬಹಳ ವೈರಲ್ ಆಗಿದೆ. ಇನ್ನು ವಿಧಾನಸೌಧಾ ಬಳಿ ಅಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಹಾಗೂ ಸುಧಾ ಮೂರ್ತಿ,
ಜೊತೆಗೆ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಟಾಲಿವುಡ್ ನ ಟಾಪ್ ನಟ ಜ್ಯೂನಿಯರ್ ಎನ್ ಟಿ ಆರ್, ಹಾಗೂ ಡಾ. ಶಿವರಾಜ್ ಕುಮಾಡಿ ಹಾಗೆ ರಾಘವೇಂದ್ರ ರಾಜ್ ಕುಮಾರ್ ಭಾಗವಹಿಸಿದ್ದರು. ಇನ್ನು ಇವರ ಜೊತೆಗೆ ರಾಜ್ಯಸರ್ಕಾರದ ಪ್ರಮುಖರ ಸಮುಖದಲ್ಲಿ ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನ್ನು ಪ್ರಶಸ್ತಿ ಕೊಟ್ಟು ಗೌರವಿಸುವ ಸಮಯದಲ್ಲಿ ವಾತಾವರಣ ಬದಲಾಗಿ ಬಾರಿ ಮಳೆಯಾಯಿತು, ಆದರೂ ಸಹ ಅಲ್ಲಿದ್ದ ಪ್ರತಿಯೊಬ್ಬ ಅಪ್ಪು ಅಭಿಮಾನಿ ಹಲುಗಾಡದೆ ಅಲ್ಲೇ ನಿಂತು ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದರು. ಇದನ್ನೆಲ್ಲಾ ನೋಡಲು ಅಪ್ಪು ಅವರು ಇಲ್ಲ ಎನ್ನುವ ದುಃಖ ಎಲ್ಲರಿಗೂ ಸಹ ಕಾಡುತ್ತಿದೆ.
ಸದ್ಯ ಅಶ್ವಿನಿ ಹಾಗೂ ಅವರ ಮಗಳು ವಂದಿತಾ ಅಪ್ಪು ಅವರಿಗೆ ನೀಡಲಾದ, ಕರ್ನಾಟಕ ರತ್ನ ಪ್ರಶಸ್ತಿಯನ್ನು ತಮ್ಮ ಮನೆಯಲ್ಲಿದ್ದ ಅಪ್ಪು ಅವರ ಭಾವ ಚಿತ್ರಕ್ಕೆ ಅರ್ಪಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..