ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಹೋಗಿ ಇದೀಗ ಒಂದು ವರ್ಷ ಕಳೆದುಹೋಗಿದೆ. ಆದರೂ ಅವರ ಅವರು ಇಲ್ಲದ ನೋವು ಪ್ರತಿಯೊಬ್ಬರ ಮನದಲ್ಲಿ ಇಂದಿಗೂ ಹಾಗೆ ಇದೆ. ಅಪ್ಪು ಅವರನ್ನು ಕಳೆದುಕೊಂಡು ಸಾಕಷ್ಟು ಜನ ತುಂಬಾ ಪರದಾಡುತ್ತಿದ್ದಾರೆ.
ಯಾರಿಗಾದರೂ ಕಷ್ಟ ಎಂದು ತಿಳಿದರೆ ಸಾಕು ಅವರ ಕಷ್ಟಕ್ಕೆ ಸ್ಪಂದಿಸುತ್ತಿದ್ದ ಮೊದಲ ವ್ಯಕ್ತಿ ನಮ್ಮ ಪವರ್ ಸ್ಟಾರ್. ಅಂತಹ ದೇವರಂತಹ ಮನುಷ್ಯನನ್ನು ಕಳೆದುಕೊಂಡು ನಿಜಕ್ಕೂ ಅವರನ್ನೇ ನಂಬಿದ್ದ ಅದೆಷ್ಟೋ ಜನ ಅನಾಥರಾಗಿದ್ದಾರೆ. ಅಪ್ಪು ಅವರನ್ನು ಮರೆಯಲಾಗದೆ ಇಂದಿಗೂ ಸಹ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
ಇನ್ನು ಇತ್ತೀಚೆಗೆ ಅಪ್ಪು ಅವರ ಒಂದು ವರ್ಷದ ಪುಣ್ಯ ಸ್ಮರಣೆ ನಡೆಸಲಾಗಿತ್ತು. ಇನ್ನು ಈ ದಿನ ಅಪ್ಪು ಅವರ ಸಮಾಧಿಯ ಬಳಿ ಲಕ್ಷಗಟ್ಟಲೆ ಜನರು ಅವರನ್ನು ಒಮ್ಮೆ ಕಣ್ತುಂಬ ನೋಡಿ ಅವರ ಸಮಾಧಿಗೆ ಪೂಜೆ ಸಲ್ಲಿಸಲು ಕಾಯುತ್ತಿದ್ದರು. ಈ ವೇಳೆ ಸಹ ಅವರನ್ನು ನೆನೆದು ಅದೆಷ್ಟೋ ಜನ ಕಣ್ಣೀರು ಹಾಕಿದ್ದರು.
ಇನ್ನು ಅಪ್ಪು ಅವರ ಗಂಧದಗುಡಿ ಸಿನಿಮಾ ಇತ್ತೀಚೆಗೆ ತೆರೆಯ ಮೇಲೆ ಅದ್ದೂರಿಯಾಗಿ ಅಪ್ಪಳಿಸಿದೆ. ಇನ್ನು ಈ ಸಿನಿಮಾ ಯಾರು ಊಹಿಸಿರದಂತೆ ದಿನದಿಂದ ದಿನಕ್ಕೆ ಕಲೆಕ್ಷನ್ ಮಾಡುತ್ತಾ ಬಾಕ್ಸ್ ಆಫೀಸ್ ಲೂಟಿ ಮಾಡುತ್ತಿದೆ. ಇನ್ನು ಅಪ್ಪು ಅವರನ್ನು ತೆರೆ ಮೇಲೆ ನೋಡಿದರೆ ಮನಸ್ಸಿಗೆ ತುಂಬಾ ದುಃಖವಾಗುತ್ತಿದೆ.
ಇನ್ನು ಮುಂದೆ ಅಪ್ಪು ಅವರನ್ನು ನೋಡಲು ಸಾಧ್ಯವಿಲ್ಲ. ಅವರು ಇನ್ನು ನಮ್ಮ ಜೊತೆಗಿರುವುದಿಲ್ಲ ಈ ಎಲ್ಲವನ್ನೂ ಊಹಿಸಲು ಸಹ ತುಂಬಾ ಕಷ್ಟವಾಗುತ್ತಿದೆ. ಅಪ್ಪು ಅವರ ಒಂದೊಂದು ಮಾತು ಅವರ ನಡತೆ ಅವರ ಗುಣ ಎಲ್ಲವೂ ಸಹ ಇಂದಿಗೂ ಕಣ್ಮುಂದೆ ಬಂದು ಹೋಗುತ್ತದೆ.
ಇದೀಗ ಒಬ್ಬ ಮಹಿಳೆ ಅಪ್ಪು ಅವರ ಹೆಸರಿನ ಜೈಕಾರ ಹಾಕುತ್ತಾ, ಮತ್ತೆ ಹುಟ್ಟಿ ಬನ್ನಿ ಅಪ್ಪು ಎಂದು ಕಣ್ಣೀರು ಹಾಕಿದ್ದಾರೆ. ಅಪ್ಪು ಅವರನ್ನು ನೆನೆದು ಎಲ್ಲರೂ ಕಣ್ಣೀರು ಹಾಕುವುದನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಆದರೆ ಈ ಮಹಿಳೆಯ ಕಣ್ಣೀರಿಗೆ ಎಲ್ಲರೂ ಕರಗಿದ್ದಾರೆ.
ಅಪ್ಪು ಅವರು ಮತ್ತೆ ಹುಟ್ಟಿ ಬರಬೇಕು, ನಮ್ಮಂತವರ ಕಷ್ಟಗಳನ್ನು ಕೇಳಲು ಅವರು ಮತ್ತೆ ಹುಟ್ಟಿ ಬರಬೇಕು. ಅಪ್ಪು ಮತ್ತೆ ಹುಟ್ಟಿ ಬನ್ನಿ ಅಪ್ಪು ಎಂದು ಕಣ್ಣೀರು ಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..