ಅಪ್ಪು ವರ್ಷದ ಪುಣ್ಯ ತಿಥಿಗೆ ಹಿರಿಯ ಮಗಳು ಬರದಿದ್ದಕ್ಕೆ ಶಿವಣ್ಣ ಹೇಳಿದ್ದು ಕೇಳಿ ಕಣ್ಣೀರಿಟ್ಟ ಧೃತಿ ಏನದು‌ ನೋಡಿ…!!!

ಸ್ಯಾಂಡಲವುಡ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿರುವ ವಿಷಯ ನಿಮ್ಮೆಲ್ಲರಿಗೂ ಗೊತ್ತಿದೆ. ಅಪ್ಪು ಅವರ ಇಬ್ಬರು ಹೆಣ್ಣು ಮಕ್ಕಳು ಸಹ ತಮ್ಮ ತಂದೆ ಆಸೆಯಂತೆ ತಮ್ಮ ವಿದ್ಯಾಭ್ಯಾಸದಲ್ಲಿ ಬಹಳ ಆಸಕ್ತಿ ಹೊಂದಿದ್ದಾರೆ. ಇನ್ನು ಅಪ್ಪು ಅವರ ಬದುಕಿದ್ದಾಗ ತಮ್ಮ ಮಕ್ಕಳನ್ನು ನೋಡಿ ಬಹಳ ಎಮ್ಮೆ ಪಡುತ್ತಿದ್ದರು.

ಇನ್ನು ಅಪ್ಪು ಅವರು ತಮ್ಮ ಮಕ್ಕಳ ಜೊತೆ ತಂದೆಯಾಗಿ ಮಾತ್ರವಲ್ಲದೆ ಒಬ್ಬ ಸ್ನೇಹಿತನ ರೀತಿ ಕೂಡ ನಡೆದುಕೊಳ್ಳುತ್ತಿದ್ದರು. ಇನ್ನು ನನ್ನ ಮಕ್ಕಳನ್ನು ತನ್ನ ತಾಯಿಯಂತೆ ಸ್ಟ್ರಾಂಗ್ ಮಹಿಳೆಯಾಗಿ ನೋಡಲು ನಾನು ಬಯಸುತ್ತೇನೆ ಎಂದು ಅಪ್ಪು ಸಾಕಷ್ಟು ಬಾರಿ ಹೇಳಿಕೊಂಡಿದ್ದರು.

ಮೊನ್ನೆ ತಾನೆ ಅಪ್ಪು ಅವರು ನಿ*ಧ*ನರಾಗಿ ಒಂದು ವರ್ಷ ಪೂರೈಸಿದೆ. ಇನ್ನು ಅಪ್ಪು ಅವರ ಪುಣ್ಯತಿಥಿಗೆ ದೊಡ್ಮನೆಯ ಪ್ರತಿಯೊಬ್ಬ ಸದಸ್ಯರು ಭಾಗಿಯಾಗಿದ್ದರು. ಆದರೆ ಅಪ್ಪು ಅವರ ಹಿರಿಯಮಗಳಾದ ಧೃತಿಯವರು ಮಾತ್ರ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ.

ಇನ್ನು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಸಹ ನಡೆದಿತ್ತು. ಧೃತಿಯವರು ಅಪ್ಪು ಅವರ ಪುಣ್ಯ ಸ್ಮರಣೆಗೆ ಬರದೇ ಇರಲು ಅಸಲಿ ಕಾರಣ ಏನಿರಬಹುದು ಎಂದು ಸಾಕಷ್ಟು ಚರ್ಚೆಗಳು ನಡೆದಿದ್ದವು. ಕೊನೆಗೂ ಈ ಎಲ್ಲ ಪ್ರಶ್ನೆಗೂ ಉತ್ತರ ಸಿಕ್ಕಿದೆ, ಹಾಗಾದರೆ ಬನ್ನಿ ತಿಳಿಸುತ್ತೇವೆ..

ಅಪ್ಪು ಅವರಿಗೆ ತಮ್ಮ ಇಬ್ಬರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು ಎನ್ನುವ ಆಸೆ ಇತ್ತು. ಇನ್ನು ಇದೇ ಕಾರಣದಿಂದ ತಮ್ಮ ಹಿರಿಯ ಮಗಳಾದ ದೃತಿ ಅವರನ್ನು ವಿದೇಶಕ್ಕೂ ಸಹ ಕಳಿಸಿದ್ದರು ಅಪ್ಪು. ಇನ್ನು ಧೃತಿ ಅವರು ಸಹ ತಮ್ಮ ತಂದೆಯ ಆಸೆಯನ್ನು ಪೂರೈಸಲು ತಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಇನ್ನು ಧೃತಿ ಅವರಿಗೆ ವರ್ಷದ ಪರೀಕ್ಷೆ ಇದ್ದ ಕಾರಣ ಅವರು ಅಪ್ಪು ಅವರ ಪುಣ್ಯ ಸ್ಮರಣೆಗೆ ಬರಲು ಸಾಧ್ಯವಾಗಿಲ್ಲ. ಇನ್ನು ಧೃತಿಯವರಿಗೆ ಶಿವಣ್ಣ ಹಾಗೂ ಅಶ್ವಿನಿ ಮೇಡಂ ಅವರು ಕರೆ ಮಾಡಿ ನೀನು ನಿನ್ನ ಪರೀಕ್ಷೆಯ ಕಡೆ ಗಮನಹರಿಸು ನೀನು ಇಲ್ಲಿ ಬರುವುದಕ್ಕಿಂತ ಅಲ್ಲೇ ಇದ್ದು, ಪರೀಕ್ಷೆ ಚೆನ್ನಾಗಿ ಮಾಡಿದರೆ ನಿನ್ನ ತಂದೆಗೆ ತುಂಬಾ ಖುಷಿಯಾಗುತ್ತದೆ.

ಇನ್ನು ಅದೇ ಅವರ ಆಸೆ ಕೂಡ ಆಗಿದೆ, ಎನ್ನುವ ಮಾತುಗಳನ್ನು ಹೇಳಿದ್ದಾರಂತೆ ಶಿವಣ್ಣ. ಹಾಗೆ ಶಿವಣ್ಣ ಅವರ ಮಾತುಗಳನ್ನು ಕೇಳಿ ದೃತಿ ಬಹಳ ಕಣ್ಣೀರು ಹಾಕಿದ್ದಾರೆ. ಆಗ ಅಶ್ವಿನಿ ಅವರು ಧೃತಿ ಅವರಿಗೆ ಸಮಾಧಾನಪಡಿಸಿ ಪರೀಕ್ಷೆ ಮುಗಿದ ತಕ್ಷಣ ಬಂದು ನಿಮ್ಮ ತಂದೆಯ ಆಶೀರ್ವಾದ ಪಡೆದು ಕೋ, ಹಾಗೆ ನಿಮ್ಮ ತಂದೆಯ ಆಸೆಯನ್ನು ಪೂರೈಸು ಎಂದು ಧೈರ್ಯ ತುಂಬಿದ್ದಾರೆ.

Leave a Reply

Your email address will not be published. Required fields are marked *