ಮನೆ ಮುಂದೆ ಅಭಿಮಾನಿ ಕೊಟ್ಟ ಸರ್ಪ್ರೈಸ್ ನೋಡಿ ಶಾಕ್ ಆದ ಅಶ್ವಿನಿ ಪುನೀತ್ ನೋಡಿ ವಿಡಿಯೋ..!!!

ಸ್ಯಾಂಡಲವುಡ್

ಅಪ್ಪು ಅವರು ಇದೀಗ ನಮ್ಮ ಜೊತೆಗಿಲ್ಲ ಆದರೆ ಅವರ ನೆನಪುಗಳು ಮಾತ್ರ ಸದಾ ನಮ್ಮಲ್ಲಿ ಇದ್ದೇ ಇರುತ್ತದೆ. ಅದೆಷ್ಟೋ ಕನ್ನಡಿಗರು ಅಪ್ಪು ಅವರನ್ನು ತಮ್ಮ ಮನೆ ಮಗನಾಗಿ ಭಾವಿಸಿದ್ದರು. ಆದರೆ ಅಪ್ಪು ಅವರನ್ನು ಕಳೆದುಕೊಂಡು ಅವರೆಲ್ಲ ಅನಾಥರಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಅದೆಷ್ಟೇ ಪ್ರಯತ್ನಿಸಿದರೂ ಸಹ ಅಪ್ಪು ಅವರು ಇಲ್ಲ ಎನ್ನುವ ನೋವಿಂದ ಹೊರಬರಲು ಎಲ್ಲರಿಗೂ ತುಂಬಾ ಕಷ್ಟವಾಗುತ್ತಿದೆ. ಇನ್ನು ಅದೆಷ್ಟು ಜನ ಅಪ್ಪು ಅವರನ್ನು ನೆನೆದು ಇಂದಿಗೂ ಸಹ ಕಣ್ಣೀರು ಹಾಕುತ್ತಿದ್ದಾರೆ, ಮತ್ತೆ ಹುಟ್ಟಿ ಬನ್ನಿ ಅಪ್ಪು ಎಂದು ಸಾಕಷ್ಟು ಜನ ಗೋಳಾಡುತ್ತಿದ್ದಾರೆ.

ಅಪ್ಪು ಅವರ ಹೆಸರಿನಲ್ಲಿ ಅವರ ಅಭಿಮಾನಿಗಳು ದಿನಕ್ಕೊಂದು ಕೆಲಸ ಮಾಡುತ್ತಿರುತ್ತಾರೆ. ಅಪ್ಪು ಅವರು ತೋರಿಸಿದ ಹಾದಿಯಲ್ಲಿ ಅದೆಷ್ಟು ಜನ ನಡೆಯುತ್ತಿದ್ದಾರೆ. ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ಇಂದಿಗೂ ಅವರ ಅಭಿಮಾನಿಗಳು ನಡೆಸಿಕೊಂಡು ಹೋಗುತ್ತಿದ್ದಾರೆ.

ಸದ್ಯ ಇದೀಗ ಅಪ್ಪು ಅವರ ಹೆಸರಿನಲ್ಲಿ ಅವರಅಭಿಮಾನಿಗಳು ಮತ್ತೊಂದು ಕೆಲಸ ಮಾಡಿದ್ದು, ಸದ್ಯ ಇದನ್ನು ನೋಡಿ ಅಶ್ವಿನಿ ಅವರು ಬಹಳ ಖುಷಿಯಾಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲಾಗುತ್ತಿದೆ.

ಹೌದು ಅಪ್ಪು ಅವರ ಅಭಿಮಾನಿಗಳು ಸದಾ ಅವರ ಹೆಸರಿನಲ್ಲಿ ಯಾವುದಾದರೂ ಒಂದು ಕೆಲಸ ಮಾಡಿ ಎಲ್ಲರಿಗೂ ಶಾಕ್ ನೀಡುತ್ತಲೇ ಇರುತ್ತಾರೆ. ಇದೀಗ ಎಲ್ಲಾ ಆಟೋ ಚಾಲಕರು ಸೇರಿಕೊಂಡು ತಮ್ಮ ಆಟೋಗಳನ್ನು ಅಪ್ಪು ಅವರ ಭಾವಚಿತ್ರದೊಂದಿಗೆ ಹಾಗು ಹೂವುಗಳೊಂದಿಗೆ ಅಲಂಕರಿಸಿದ್ದಾರೆ.

ಇನ್ನು ಈ ರೀತಿ ತಮ್ಮ ಆಟೋಗಳನ್ನು ಸಂಪೂರ್ಣವಾಗಿ ಅಲಂಕರಿಸಿ ಅದನ್ನು ಅಪ್ಪು ಅವರ ಮನೆಯ ಮುಂದೆ ತಂದು ನಿಲ್ಲಿಸಿದ್ದಾರೆ. ಇನ್ನು ಅಶ್ವಿನಿ ಅವರನ್ನು ಕರೆದು ಅದನ್ನೆಲ್ಲ ತೋರಿಸಿದ್ದಾರೆ. ಅಶ್ವಿನಿ ಅವರು ಅಭಿಮಾನಿಗಳ ಈ ಪ್ರೀತಿ ನೋಡಿ ಬಹಳ ಖುಷಿಪಟ್ಟಿದ್ದಾರೆ. ಇನ್ನು ಅವರ ಜೊತೆಗೆ ಫೋಟೋ ಸಹ ಕ್ಲಿಕ್ಕಿಸಿದ್ದಾರೆ.

ಅಲ್ಲಿದ್ದ ಕೆಲವರು ಅಶ್ವಿನಿ ಅವರಿಗೆ ಇದೇ ರೀತಿ ಇನ್ನಷ್ಟು ಮಾಡುತ್ತೇವೆ ಎಂದಿದ್ದಾರೆ ಅದಕ್ಕೆ ಅಶ್ವಿನಿ ಅವರವರಿಗೆ ಧನ್ಯವಾದಗಳು ಸಹ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲಾಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave a Reply

Your email address will not be published. Required fields are marked *