ಮೊದಲ ಬಾರಿಗೆ ಲೈವ್ ಬಂದು ಫ್ಯಾನ್ಸ್ ಗೆ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ?.. ನೋಡಿ‌ ವಿಡಿಯೋ…!!!

ಸ್ಯಾಂಡಲವುಡ್

ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಅವರಿಗೆ ಇದೀಗ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವ ಬಗ್ಗೆ ನಿಮ್ಮೆಲ್ಲರಿಗೂ ಸಹ ಗೊತ್ತಿದೆ. ಇನ್ನು ಈ ಕಾರ್ಯಕ್ರಮಕ್ಕೆ ಲಕ್ಷಗಳಲ್ಲಿ ಅಭಿಮಾನಿಗಳು ಹಾಜರಾಗಿದ್ದರು. ಅಪ್ಪು ಅವರ ಬದಲಾಗಿ ಈ ಪ್ರಶಸ್ತಿಯನ್ನು ಅಶ್ವಿನಿ ಅವರು ಸ್ವೀಕರಿಸಿದ್ದರು.

ಇನ್ನು ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಅಭಿಮಾನಿಗಳ ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೆ ಇನ್ಫೋಸಿಸ್ ಸ್ಥಾಪಕಿ ಸುಧಾ ಮೂರ್ತಿ ಅಲ್ಲದೆ ದಕ್ಷಿಣಭಾರತದ ಚಿತ್ರರಂಗದ ಸ್ಟಾರ್ ಕಲಾವಿದರಾಗಿರುವ ರಜನಿಕಾಂತ್ ಹಾಗೂ ಜೂನಿಯರ್ ಎನ್ಟಿಆರ್ ಕೂಡ ಭಾಗವಹಿಸಿದ್ದರು.

ಅಪ್ಪು ಅವರ ನಮ್ಮ ಜೊತೆಗಿಲ್ಲದ ಕಾರಣ ಅವರ ಬದಲಿಗೆ ಅಶ್ವಿನಿ ಅವರು ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು. ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಪ್ಪು ಪತ್ನಿಯ ಅಶ್ವಿನಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನ ಕೂಡ ಮಾಡಿದ್ದರು.

ಅಶ್ವಿನಿ ಅವರು ಪ್ರಶಸ್ತಿ ಪಡೆದುಕೊಳ್ಳುವ ವೇಳೆ ಅಪ್ಪು ಅವರನ್ನು ನೆನೆದು ಬಹಳ ಭಾಹುಕರಾಗಿದ್ದರು. ಇಂತಹ ಅದ್ಭುತ ಪ್ರಶಸ್ತಿಯನ್ನು ಪಡೆದುಕೊಳ್ಳಲು ಅಪ್ಪು ಇಲ್ಲವಲ್ಲ ಎಂದು ಸಾಕಷ್ಟು ಜನ ಕಣ್ಣೀರು ಹಾಕಿದ್ದರು. ಅಪ್ಪು ಅವರಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ನೀಡಿದರು ಸಹ ಕಡಿಮೆ ಆಗುತ್ತದೆ ಎಂದು ಸಾಕಷ್ಟು ಜನ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.

ಇನ್ನು ಪ್ರಶಸ್ತಿ ಪಡೆದುಕೊಂಡು ಮನೆಗೆ ಹೋದ ತಕ್ಷಣ ಅಶ್ವಿನಿಯವರು ಕರ್ನಾಟಕ ರತ್ನ ಚಿನ್ನದ ಪದಕವನ್ನು ಅಪ್ಪು ಅವರ ಭಾವಚಿತ್ರಕ್ಕೆ ಅರ್ಪಿಸಿದ್ದಾರೆ ಹೌದು. ಅಶ್ವಿನಿ ಹಾಗೂ ಅವರ ಮಗಳು ವಂದಿತ ಅಪ್ಪು ಅವರ ಭಾವಚಿತ್ರಕ್ಕೆ ಚಿನ್ನದ ಪದಕವನ್ನು ಹಾಕಿ ಖುಷಿಪಟ್ಟಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿತ್ತು.

ಇನ್ನು ಅಶ್ವಿನಿ ಅವರು ಇದೀಗ ಮೊದಲ ಬಾರಿಗೆ ಲೈಫ್ ಬಂದು ಅಭಿಮಾನಿಗಳ ಜೊತೆ ಸಂಪರ್ಕ ಬೆಳೆಸಿದ್ದಾರೆ. ಹೌದು ಅಶ್ವಿನಿ ಅವರು ಸೋಶಿಯಲ್ ಮೀಡಿಯಾವನ್ನು ಅಷ್ಟಾಗಿ ಬಳಿಸುವುದಿಲ್ಲ. ಹಾಗಾದರೆ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದ ಅಶ್ವಿನಿ ಅವರು ಹೇಳಿದ್ದೇನು ನೋಡೋಣ ಬನ್ನಿ..

ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ ನಮ್ಮ ಕರ್ನಾಟಕ ಸರ್ಕಾರ ಹಾಗೆ ಎಲ್ಲಾ ಅಭಿಮಾನಿ ದೇವರುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಜೈ ಹಿಂದ್ ಜೈ ಕರ್ನಾಟಕ ಮಾತೆ ಎಂದು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *