ಕನ್ನಡ ಚಿತ್ರರಂಗದಲ್ಲಿ ಸದ್ಯ ಸಂಚಲನ ಸೃಷ್ಟಿಸಿರುವ ಸಿನಿಮಾ ಎಂದರೆ ಅದು ಕಾಂತಾರ. ಕಾಂತಾರ ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೂ ವೀಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುವುದರ ಜೊತೆಗೆ ಬೇರೆ ಎಲ್ಲಾ ಸಿನಿಮಾಗಳ ಧಾಖಲೆಯನ್ನು ಒಂದೊಂದಾಗಿ ಮುರಿಯುತ್ತಿದೆ.
ಇನ್ನು ಈ ಸಿನಿಮಾ ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದ್ದು, ಬೇರೆ ಭಾಷೆಯ ಜನರು ಕೂಡ ರಿಷಬ್ ಅವರ ಅಭಿನಯಕ್ಕೆ ಫಿದಾ ಆಗಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಯಶಸ್ಸಿನ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಇನ್ನು ಕಾಂತಾರ ಸಿನಿಮಾ ಇದೀಗ ತುಳು ಭಾಷೆಯಲ್ಲಿ ಸಃ ಶೀಘ್ರವೇ ಬಿಡುಗಡೆಯಾಗುತ್ತಿದೆ.
ಇದೀಗ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಅವರು ಇದೀಗ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥನ ದರ್ಶನ ಪಡೆದುಕೊಂಡಿದ್ದಾರೆ. ಇನ್ನು ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿರುವ ಹಿಂದಿನ ರಹಸ್ಯವನ್ನ ಮಾಧ್ಯಮದವರ ಬಳಿ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಈ ದಂಪತಿ ಹೇಳಿದ್ದೇನು ನೋಡೋಣ ಬನ್ನಿ…
ಸಾಕಷ್ಟು ದಿನಗಳಿಂದ ಧರ್ಮಸ್ಥಳಕ್ಕೆ ಭೇಟಿ ಮಾಡಬೇಕು ಎಂದು ದಿನಗಳ ಲೆಕ್ಕ ಹಾಕುತ್ತಿದ್ದೆವು. ಕಾಂತಾರ ಸಿನಿಮಾದ ಶೂಟಿಂಗ್ ಸಮಯದಲ್ಲಿ ಬಂದು ಹೋಗಿದ್ದೆವು. ಅದಾದ ನಂತರ ನಾನು ತುಂಬಾ ಬ್ಯುಸಿಯಾಗಿದ್ದ ಕಾರಣ ಬರಲು ಸಾಧ್ಯವಾಗಿರಲಿಲ್ಲ.
ಇನ್ನು ಇದೀಗ ಕೊನೆಗೂ ಕಾಲ ಕೂಡಿ ಬಂದಿದೆ. ಇನ್ನು ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದು ಹಾಗೆ ಹೆಗ್ಡೆ ಅವರ ದರ್ಶನ ಕೂಡ ಪಡೆದುಕೊಂಡೆವು. ಇನ್ನು ಕಾಂತಾರಾ ಶೀಘ್ರದಲ್ಲೇ ತುಳು ಭಾಷೆಯಲ್ಲಿ ಸಹ ಬಿಡುಗಡೆಯಾಗಿದೆ ಎನ್ನುವ ಮಾಹಿತಿ ಸಹ ರಿಷಬ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ.
ಇನ್ನು ಹಾಗೆ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಅವರು ಸಹ ಮಾತನಾಡಿದ್ದು, ಸಿನಿಮಾ ಬಿಡುಗಡೆಯಾದ ಮೇಲೆ ಒಮ್ಮೆ ಬರಬೇಕು ಎಂದುಕೊಂಡಿದ್ದೆವು, ಆದರೆ ಇಂದು ಆ ಕಾಲ ಕೂಡಿ ಬಂದಿದೆ. ಇನ್ನು ಕಾಂತರ ಸಿನಿಮಾ ನೋಡಿದರೆ ದೇವರ ಸಿನಿಮಾ ನೋಡಿದಷ್ಟೇ ಖುಷಿಯಾಗುತ್ತದೆ.
ಇನ್ನು ಹೆಗ್ಡೆ ಅವರು ಸಹ ಈ ಸಿನಿಮಾ ನೋಡಿದ್ದಾರೆ. ಇನ್ನು ಈ ಬಗ್ಗೆ ಹೆಗ್ಡೆ ಅವರು ಸಹ ಮಾತನಾಡುತ್ತಿದ್ದರು. ಇನ್ನು ಹೆಗ್ಡೆ ಅವರು ಸಿನಿಮಾ ನೋಡಿರುವುದು ಆ ದೇವರೇ ಸಿನಿಮಾ ನೋಡಿದಷ್ಟು ಖುಷಿಯಾಗುತ್ತಿದೆ. ಇನ್ನು ಆ ದೇವಾರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಕೇಳಿ ಕೊಳ್ಳುತ್ತೇನೆ ಎಂದಿದ್ದಾರೆ.