ಕರ್ನಾಟಕ ಕಾಂಗ್ರೆಸ್ ಪಕ್ಷದ ತುಮಕೂರಿನಲ್ಲಿ ಎಂ ಎಲ್ ಎ ಜಮೀರ್ ಅಹಮದ್ ಅವರ ಮಗ ಝೈದ್ ಖಾನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿರುವ ಬಗ್ಗೆ ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಝೈದ್ ಖಾನ್ ಹಾಗೂ ನಟಿ ಸೋನಾಲ್ ಮೊಂತೇರೋ ಅವರು ನಾಯಕಿಯಾಗಿ ಅಭಿನಯಿಸಿರುವ ಬನಾರಸ್ ಸಿನಿಮಾ.
ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮಿಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. ಇನ್ನು ಈ ಸಿನಿಮಾದ ಟ್ರೇಲರ್ ನೋಡಿ ಎಲ್ಲರೂ ಸಹ ಸಕತ್ ಫಿದಾ ಆಗಿದ್ದರು. ಇನ್ನು ಈ ಸಿನಿಮಾ ವೀಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಕೂಡ ಹುಟ್ಟು ಹಾಕಿದೆ. ಸದ್ಯ ಎಲ್ಲೆಡೆ ಈ ಸಿನಿಮಾದ ಚರ್ಚೆಗಳು ಶುರುವಾಗಿದೆ.
ಇನ್ನು ಝೈದ್ ಖಾನ್ ಅವರ ಬನರಾಸ್ ಸಿನಿಮಾ ಅವರ ಮೊದಲ ಸಿನಿಮಾ ಆಗಿದ್ದು, ಈ ಸಿನಿಮಾವನ್ನು ಬೆಲ್ ಬಾಟಮ್ ಖ್ಯಾತಿಯ ಜಯತೀರ್ಥ ಅವರು ನಿರ್ದೇಶನ ಮಾಡಿದ್ದಾರೆ. ಇನ್ನು ಈ ಸಿನಿಮಾ ಬಿಡುಗಡೆಗೂ ಮುನ್ನವೇ ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು.
ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಬಹಳ ಸದ್ದು ಮಾಡುತ್ತಿರುವಂತಹ ಸಿನಿಮಾ ಎಂದರೆ ಅದು ಬನಾರಸ್. ಎಲ್ಲಿ ನೋಡಿದರೂ ಬನಾರಸ್ ಸಿನಿಮಾದ ಪೋಸ್ಟರ್ ಗಳು ಹಾಗೆ ವಿಡಿಯೋ ಹಾಗೂ ಫೋಟೋಗಳು ಸೋಸಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದ್ದವು.
ಈ ಸಿನಿಮಾದ ಟ್ರೇಲರ್ ನೋಡಿದ ಪ್ರತಿಯೊಬ್ಬರು ಸಿನಿಮಾ ನೋಡಲೆ ಬೇಕು ಎನ್ನುವಷ್ಟು ಕಾತುರರಾಗಿದ್ದರು. ಸದ್ಯ ಬನಾರಸ್ ಸಿನಿಮಾ ನೆನ್ನೆ ಎಲ್ಲೆಡೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಇನ್ನು ಈ ಸಿನಿಮಾ ನೋಡಿದ ಪ್ರತಿಯೊಬ್ಬರು ಈ ಸಿನಿಮಾಗೆ ಬಾರಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇನ್ನು ಇದೀಗ ಬನಾರಸ್ ಸಿನಿಮಾವನ್ನು ರವಿಚಂದ್ರನ್ ಅವರ ಮಗ ಮನೋರಂಜನ್ ನೋಡಿದ್ದು, ಈ ಸಿನಿಮಾದಲ್ಲಿ ಝೈದ್ ಖಾನ್ ಅವರ ಅಭಿನಯಕ್ಕೆ ಫಿದಾ ಆಗಿದ್ದಾರೆ. ಇನ್ನು ಈ ಬಗ್ಗೆ ಅವರು ಮಾದ್ಯಮಗಳ ಬಳಿ ಮಾತನಾಡಿದ್ದು, ಈ ಸಿನಿಮಾದ ಒಂದು ಹಾಡಿನಲ್ಲಿ ಝೈದ್ ಖಾನ್ ಹಾಗೂ ನಾಯಕಿ ಸೋನಾಲ್ ಅವರ ರೋ-ಮ್ಯಾನ್ಸ್ ಗೆ ಫಿದಾ ಆಗಿದ್ದಾರೆ.
ಆಫ್ ಸ್ಕ್ರೀನ್ ಹಾಗೂ ಆನ್ ಸ್ಕ್ರೀನ್ ಎರಡರಲ್ಲೂ ಝೈದ್ ಹಾಗೂ ಸೋನಾಲ್ ಜೋಡಿ ತುಂಬಾ ಚೆನ್ನಾಗಿದೆ. ಈ ಸಿನಿಮಾ ನೋಡಿ ನನಗೆ ತುಂಬಾ ಖುಷಿಯಾಯ್ತು, ಮೊದಲ ಸಿನಿಮಾದಲ್ಲೇ ತುಂಬಾ ಅದ್ಭುತವಾಗಿ ನಟಿಸಿದ್ದಾನೆ ಎಂದಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..