ಅದೆಷ್ಟೋ ಜನರ ಕಷ್ಟಗಳನ್ನು ನೋಡಿ ಅವರ ಸಹಾಯಕ್ಕೆ ಬಂದಂತಹ ಅದ್ಭುತ ವ್ಯಕ್ತಿ ಹಾಗೆ ಒಬ್ಬ ಅದ್ಭುತ ಹಾಗೂ ಅಮೋಘ ಕಳೆಯುಳ್ಳ ಕಲೆಗಾರ, ಅಭಿನಯಕ್ಕೆ ರಾಜ ಕುಮಾರ್, ಕರುನಾಡ ರತ್ನ ನಮ್ಮ ನಿಮ್ಮೆಲ್ಲರ ಅಪ್ಪು ಇಂದು ನಮ್ಮ ಜೊತೆಗಿಲ್ಲ. ಅವರನ್ನು ಕಳೆದುಕೊಂಡು ನಿಜಕ್ಕೂ ನಾವೆಲ್ಲರೂ ಅನಾಥರಾಗಿದ್ದೇವೆ.
ಚಿಕ್ಕವಯಸ್ಸಿನಲ್ಲೇ ಸಿನಿಮಾರಂಗಕ್ಕೆ ಬಂದ ಅಪ್ಪು ಅವರು ಆಗಲೇ ಅದ್ಭುತವಾಗಿ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅಂತಹ ಅದ್ಭುತ ನಟ ಇಂದು ನಮ್ಮ ಜೊತೆಗಿಲ್ಲ ಎನ್ನುವುದನ್ನು ಊಹಿಸಿದರೂ ಕೂಡ ನಿಜಕ್ಕೂ ಮನಸ್ಸಿಗೆ ತುಂಬಾ ಬೇಸರವಾಗುತ್ತಿದೆ.
ಎಂತಹ ಪಾತ್ರ ಕೊಟ್ಟರೂ ಸಹ ಅದಕ್ಕೆ ತಕ್ಕಂತೆ ಅಪ್ಪು ಅವರು ಅದ್ಭುತವಾಗಿ ಅಭಿನಯಿಸಿ ಸಾಕಷ್ಟು ಜನ ಮನ ಗೆದ್ದಿದ್ದಾರೆ. ಇಂದು ಅಪ್ಪು ಅವರನ್ನು ಜನ ಕೇವಲ ಅವರ ನಟನೆಗೆ ನೆನಪಿಟ್ಟುಕೊಳ್ಳುತ್ತಿಲ್ಲ, ಬದಲಿಗೆ ಒಬ್ಬ ಮನುಷ್ಯ ಬದುಕಿದರೆ ಅಪ್ಪು ಅವರ ರೀತಿ ಬದುಕಬೇಕು ಎನ್ನುವುದು ಅದೆಷ್ಟೋ ಜನರ ಅಭಿಪ್ರಾಯ.
ಹೌದು ಅಪ್ಪು ತಾವು ಬದುಕಿದ್ದ ಅಷ್ಟು ದಿನ ಯಾರಿಗೂ ತಿಳಿಯದಂತೆ ಅದೆಷ್ಟೋ ಜನರ ನೆರವಿಗೆ ಬಂದಿದ್ದಾರೆ. ಇನ್ನು ಅಪ್ಪು ಅಂತಹ ಅದ್ಭುತವ್ಯಕ್ತಿಯನ್ನು ಕಳೆದುಕೊಂಡು ಅದೆಷ್ಟೋ ಜನರು ಅನಾಥರಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇಂದಿಗೂ ಸಹ ಅಪ್ಪು ಎನ್ನುವ ಹೆಸರು ಕೇಳಿದರೆ ಎಲ್ಲರ ಕಣ್ಣಲ್ಲಿ ನೀರು ಬರುತ್ತದೆ.
ಇನ್ನು ಇತ್ತೀಚೆಗೆ ಗಂಧದಗುಡಿ ಗುಡಿ ಸಿನಿಮಾ ಬಿಡುಗಡೆಯಾಗಿ ಬಹಳ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಇನ್ನು ಈ ಸಿನಿಮಾ ನೋಡಿದ ಪ್ರತಿಯೊಬ್ಬರ ಕಣ್ಣಲ್ಲಿ ಸಹ ನೀರು ತುಂಬಿದ್ದು, ಅಪ್ಪು ಅವರನ್ನು ನೆನೆದು ಎಲ್ಲರೂ ಗೋಳಾಡುತ್ತಿದ್ದಾರೆ. ಗಂಧದಗುಡಿ ಅಪ್ಪು ಅವರ ಕನಸ್ಸಿನ ಸಿನಿಮಾ ಆಗಿತ್ತು.
ಇನ್ನು ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿ ಈಗಾಗಲೇ ಒಂದು ವರ್ಷ ಕಳೆದು ಹೋಗಿದೆ. ಆದರೂ ಸಹ ಇಂದಿಗೂ ಅದೆಷ್ಟೋ ಜನ ಅವರ ನೆನಪಿನಲ್ಲೆಯೇ ಇದ್ದಾರೆ. ಇಂದಿಗೂ ಸಹ ಅಪ್ಪು ಅವರನ್ನು ನೆನೆದು ಅವರ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ಸದ್ಯ ಅಪ್ಪು ಅವರ ಪುನೀತಪರ್ವ ಕಾರ್ಯಕ್ರಮದ ಒಂದು ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಪ್ಪು ಅವರನ್ನು ನೆನೆದು ಪ್ರತಿಯೊಬ್ಬರು ಸಹ ಕಣ್ಣೀರು ಹಾಕುತ್ತಿದ್ದಾರೆ. ನಿಜಕ್ಕೂ ಅಪ್ಪು ಅವರು ಇಷ್ಟು ಬೇಗ ಕರೆದುಕೊಂಡು ಆ ದೇವರು ಎಲ್ಲರಿಗೂ ಮೋಸ ಮಾಡಿದ್ದಾನೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..