ಚಿಕ್ಕವಯಸ್ಸಿನಲ್ಲೇ ತನ್ನ ಚುರುಕು ಮಾತುಗಳಿಂದ ಅದೆಷ್ಟೋ ಜನರ ಹೃದಯ ಗೆದ್ದಿರುವ ಪುಟಾಣಿ ಎಂದರೆ ಅದು ಮಾಸ್ಟರ್ ಆನಂದ್ ಮಗಳು ವಂಶಿಕಾ ಅಂಜನಿ ಕಶ್ಯಪ. ಮಾಸ್ಟರ್ ಆನಂದ್ ರೀತಿಯೇ ಇಷ್ಟು ಚಿಕ್ಕ ವಯಸ್ಸಿನಲ್ಲೇ ವಂಶಿಕಾ ಕೂಡ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾಳೆ.
ಯಾವುದೇ ಕಾರ್ಯಕ್ರಮವಾದರೂ ಇದೀಗ ವಂಶಿಕಾ ಅದರಲ್ಲಿ ಭಾಗಿಯಾಗುವ ಮೂಲಕ ಆ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸುತ್ತಾಳೆ. ಇನ್ನು ಸದ್ಯ ವಂಶಿಕಾ ಕಿರುತೆರೆಯ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಸಹ ಎಂಟ್ರಿ ಕೊಟ್ಟಿದ್ದಾಳೆ.
ಕಲರ್ಸ್ ಕನ್ನಡ ವಾಹಿನಿಯ ನಮ್ಮಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಗಳನ್ನು ಸತತವಾಗಿ ಗೆದ್ದು ವಂಶಿಕಾ ಕನ್ನಡಿಗರ ಮನೆಮಗಳಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ವಂಶಿಕಾ ಅವರ ಕ್ರೇಜ್ ಇದೀಗ ಎಷ್ಟರ ಮಟ್ಟಕ್ಕೆ ಬೆಳೆದಿದೆ ಎನ್ನುವುದು ನಿಮ್ಮೆಲ್ಲರಿಗೂ ಸಹ ಗೊತ್ತೇ ಇರುತ್ತದೆ.
ವಂಶಿಕಾ ಅವರ ಅಭಿನಯ ಹಾಗೂ ಚಟಪಟ ಮಾತುಗಳು ಯಾರಿಗೆ ತಾನೇ ಇಷ್ಟ ಆಗುವುದಿಲ್ಲ ಹೇಳಿ. ಇದೀಗ ವಂಶಿಕಾ ನಿರೂಪಣೆಗೂ ಸಹ ಎಂಟ್ರಿ ಕೊಟ್ಟಿರುವುದು ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ನಿರಂಜನ್ ದೇಶ್ ಪಾಂಡೆ ಜೊತೆಗೆ ವಂಶಿಕಾ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಅನ್ನು ಬಹಳ ಅದ್ಭುತವಾಗಿ ನಿರೂಪಣೆ ಮಾಡುತ್ತಿದ್ದಾರೆ.
ಇನ್ನು ವಂಶಿಕಾ ಅವರು ಕೂಡ ಅಪ್ಪು ಅವರ ದೊಡ್ಡ ಅಭಿಮಾನಿ, ಈ ಬಗ್ಗೆ ಸ್ವತಃ ವಂಶಿಕಾ ಹಲವಾರು ಬಾರಿ ಮಾತನಾಡಿದ್ದಾರೆ. ಇನ್ನು ವಂಶಿಕಾ ಅವರು ಇದೀಗ ಅಶ್ವಿನಿ ಮೇಡಂ ಅವರನ್ನು ಭೇಟಿ ಮಾಡಿದ್ದು, ಇದೀಗ ಅಶ್ವಿನಿ ಅವರು ವಂಶಿಕಾ ಅವರನ್ನು ಮುದ್ದಾಡಿದ್ದಾರೆ.
ಅಪ್ಪು ಅವರ ಗಂಧದಗುಡಿ ಸಿನಿಮಾವನ್ನು ಶಾಲಾಮಕ್ಕಳೆಲ್ಲಾ ವೀಕ್ಷಿಸುತ್ತಿದ್ದರು. ಇನ್ನು ಇದೆ ವೇಳೆ ವಂಶಿಕಾ ತಮ್ಮ ತಾಯಿಯ ಜೊತೆಗೆ ಅಲ್ಲಿಗೆ ಬಂದಿದ್ದಾರೆ. ಇನ್ನು ಸಿನಿಮಾ ಮುಗಿದ ಕೊನೆಯಲ್ಲಿ ಮಕ್ಕಳನ್ನು ಭೇಟಿ ಮಾಡಲು ಸ್ವತಃ ಅಶ್ವಿನಿ ಮೇಡಂ ಬಂದಿದ್ದಾರೆ.
ಆಶ್ವಿನಿ ಪುನೀತ್ ಅವರನ್ನು ನೋಡಿ ಅಲ್ಲಿದ್ದ ಎಲ್ಲಾ ಮಕ್ಕಳು ಬಹಳ ಖುಷಿ ಪಟ್ಟಿದ್ದಾರೆ. ಹಾಗೆ ಅಶ್ವಿನಿ ಅವರಿಗೆ ಗುಲಾಬಿ ಹೂವನ್ನು ನೀಡಿದ್ದಾರೆ. ಇನ್ನು ವಂಶಿಕಾ ಕೂಡ ಅಶ್ವಿನಿ ಪುನೀತ್ ಅವರಿಗೆ ಗುಲಾಬಿ ಹೂ ನೀಡಿದ್ದು, ವಂಶಿಕಾಳನ್ನು ಕಂಡು ಅಶ್ವಿನಿ ಅವರನ್ನು ಮುದ್ದಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.