ನಟ ಪುನೀತ್ ರಾಜಕುಮಾರ್ ಅವರು ನಿ*ಧ*ನರಾಗಿ ಅದಾಗಲೇ ಒಂದು ವರ್ಷ ಕಳೆದು ಹೋಗಿದೆ. ಮೊನ್ನೆ ತಾನೆ ಅವರ ಗಂಧದಗುಡಿ ಸಿನಿಮಾ ಬಿಡುಗಡೆಯಾಗಿದ್ದು, ಕರ್ನಾಟಕದ ಜನತೆ ಸಿನಿಮಾ ಮೆಚ್ಚಿಕೊಂಡು ಹಾಡಿ ಹೋಗಳಿದ್ದರು. ಇನ್ನು ಸದ್ಯ ಗಂಧದಗುಡಿ ಸಿನಿಮಾ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದೆ.
ತಮ್ಮ ಸರಳ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿರುವ ಸುಧಾ ಮೂರ್ತಿ ಅವರು ಕೂಡ ಗಂಧದಗುಡಿ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಇದೀಗ ಸುಧಾ ಮೂರ್ತಿಯವರು ಅಪ್ಪು ಅವರ ಮನೆಗೆ ಭೇಟಿ ನೀಡಿದ್ದು ಅಶ್ವಿನಿ ಹಾಗೂ ಮಕ್ಕಳನ್ನು ಭೇಟಿಯಾಗಿದ್ದಾರೆ.
ಇನ್ನು ಅಶ್ವಿನಿ ಅವರ ಬಳಿ ಮಾತನಾಡುತ್ತಾ ಕೊಂಚ ಸಮಯ ಅವರ ಮನೆಯಲ್ಲಿ ಕಳೆದಿದ್ದಾರೆ. ಇನ್ನು ಅಪ್ಪು ಅವರ ಬಾಲ್ಯದ ಸಿನಿಮಾಗಳನ್ನು ನೆನೆಯುತ್ತಾ, ಅವರನ್ನು ಕರೆಯುತ್ತಿದ್ದ ಹೆಸರುಗಳನ್ನು ನೆನಪು ಮಾಡಿಕೊಂಡು ಅಶ್ವಿನಿ ಅವರ ಜೊತೆ ಮಾತು ಮುಂದುವರೆಸಿದ್ದಾರೆ.
ಇನ್ನು ಅಪ್ಪು ಅವರ ಮೊದಲ ಮಗಳು ದೃತಿ ವಿದೇಶದಲ್ಲಿ ಓದುತ್ತಿರುವ ಕಾರಣ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಇನ್ನು ಅಪ್ಪು ಅವರ ಕಿರಿಯ ಮಗಳಾದ ವಂದಿತಾ ಅವರನ್ನು ಸುಧಾ ಮೂರ್ತಿಯವರು ಕರೆದು ಪಕ್ಕದಲ್ಲಿ ಕುಳಿಸಿಕೊಂಡು ಮುದ್ದು ಮಾಡಿದ್ದಾರೆ.
ನಿನ್ನನ್ನು ನೋಡಿದರೆ ಅಪ್ಪುಅವರನ್ನು ನೋಡಿದ ರೀತಿ ಆಗುತ್ತದೆ. ನೀನು ಅವರನ್ನು ಹೋಲುತ್ತೀಯಾ ಎನ್ನುವ ಮಾತುಗಳನ್ನು ಹೇಳಿದ್ದಾರೆ. ನೀನು ಸಹ ತಂದೆ ಹಾದಿಯಲ್ಲಿ ನಡೆಯಬೇಕು, ನಾವು ಒಳ್ಳೆಯವರಾಗಿದ್ದರೆ ನಾಲ್ಕು ಜನ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ.
ನಮ್ಮ ಬಳಿ ಎಷ್ಟೇ ಹಣ ಇದ್ದರೂ ಅದು ನಮ್ಮ ಜೊತೆ ಬರುವುದಿಲ್ಲ ನಾವು ಮಾಡಿದ ದಾನ ಧರ್ಮ ಪುಣ್ಯದ ಕೆಲಸಗಳು ನಮ್ಮ ಹೆಸರನ್ನು ಉಳಿಸುತ್ತದೆ. ಹೀಗಾಗಿ ಚೆನ್ನಾಗಿ ಓದಿ ತಂದೆಯ ಹೆಸರನ್ನು ಉಳಿಸಿ ಎಂದು ಸುಧಾ ಮೂರ್ತಿಯವರು ಅಪ್ಪು ಮಗಳಾದ ವಂದಿತಾ ಅವರಿಗೆ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ.
ಇನ್ನು ವಂದಿತಾ ಅವರು ಕೂಡ ಸುಧಾ ಮೂರ್ತಿಯವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು, ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..