ಸ್ನೇಹಿತರೆ ಕನ್ನಡದ ಬಹು ಬೇಡಿಕೆ ನಟಿಯರಲ್ಲಿ ನಟಿ ಆಧಿತಿ ಪ್ರಭುದೇವ ಕೂಡ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಜನಮನ ಗೆದ್ದಿರುವ ನಟಿ ಅಧಿತಿ ಪ್ರಭುದೇವ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಕಿರುತೆರೆಯ ನಾಗಿಣಿ ಧಾರವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಅಧಿತಿ ಪ್ರಭುದೇವ ನಂತರ ಬೆಳ್ಳಿತೆರೆಗೆ ಕಾಲಿಟ್ಟು, ಧೈರ್ಯಮ್ ಸಿನಿಮಾದಲ್ಲಿ ಅಜಯ್ ರಾವ್ ಜೋತೆಗೆ ಕಾಣಿಸಿಕೊಂಡರು. ಬಳಿಕ ಬಜಾರ್, ಸಿಂಗ , ಒಂಬತ್ತನೇ ದಿಕ್ಕು, ಓಲ್ಡ್ ಮಾಂಕ್ ಮುಂತಾದ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ಅಧಿತಿ ಪ್ರಭುದೇವ ಹಾಗೂ ನಟ ಚಿರಂಜೀವಿ ಸರ್ಜಾ ಒಟ್ಟಾಗಿ ನಟಿಸಿದ್ದ ಸಿಂಗ ಚಿತ್ರದ ಶ್ಯಾನೆ ಟಾಪಗೌಳೆ ಹಾಡು ಸಾಕಷ್ಟು ವೈರಲ್ ಆಗಿತ್ತು. ನಂತರ ನಟಿ ಅಧಿತಿ ಪ್ರಭುದೇವ ಅವರಿಗೆ ಹತ್ತು ಹಲವು ಅವಕಾಶಗಳು ಹರಿದು ಬಂದಿದ್ದವು. ಅನೇಕ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ನಟಿ ಅಧಿತಿ ಪ್ರಭುದೇವ ಅವರ ನಿಶ್ಚಿತಾರ್ಥ ಸುದ್ದಿ ಹೊರಬಿದ್ದಿತ್ತು.
ಚಿತ್ರರಂಗದಲ್ಲಿ ಸಕ್ರಿಯರಾಗುತ್ತಿರುವ ಸಮಯದಲ್ಲಿ ನಟಿಯ ಮದುವೆ ತೀರ್ಮಾನ ಕೆಲವು ವರ್ಗದ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿತ್ತು. ಇನ್ನು ಕೆಲವು ಅಭಿಮಾನಿಗಳು ಈ ವಿಷಯ ತಿಳಿದು ಬಾರಿ ಖುಷಿ ಪಟ್ಟಿದ್ದರು. ಸದ್ಯ ಈ ಜೋಡಿಯ ಮದುವೆಯ ಬಗ್ಗೆ ಮತ್ತೊಂದು ಅಪಡೆಟ್ ಸಿಕ್ಕಿದೆ. ಏನಿದು ನೋಡೋಣ ಬನ್ನಿ..
ಯಶಸ್ವಿ ಎಂಬುವವರ ಜೊತೆ ನಟಿ ಅದಿತಿ ಪ್ರಭುದೇವ ಹಸೆ ಮಣೆ ಏರುತ್ತಿದ್ದಾರೆ. ಇನ್ನು ಸದ್ಯ ಈ ಜೋಡಿಯ ಮದುವೆಯ ದಿನಾಂಕ ನಿಗದಿಯಾಗಿದೆ. ಹೌದು ಇದೆ ತಿಂಗಳು ಅಂದರೆ ನವೆಂಬರ್ 27 ರಂದು ಈ ಜೋಡಿಯ ಮದುವೆಯ ದಿನಾಂಕ ನಿಗಧಿಯಾಗಿದೆ.
ಇನ್ನು ಈ ಜೋಡಿಯ ಮದುವೆಗೆ ಒಂದು ತಿಂಗಳು ಸಮಯ ಕೂಡ ಇಲ್ಲವಾಗಿದ್ದು, ಇನ್ನು ಸದ್ಯ ನಟಿ ಅಧಿತಿ ಪ್ರಭುದೇವ ಹಾಗೂ ಯಶಸ್ ಇಬ್ಬರೂ ತಮ್ಮ ಮದುವೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಫಿಕೊಳ್ಳುವಲ್ಲಿ ಸಕತ್ ಬ್ಯುಸಿಯಾಗಿದ್ದಾರೆ. ಇನ್ನು ಈ ತಮ್ಮ ಮದುವೆ ಶಾಪಿಂಗ್ ಕೆಲಸಗಳನ್ನು ಸಹ ಶುರು ಮಾಡಿಕೊಂಡಿದ್ದಾರೆ.
ಇನ್ನು ಯಶಸ್ ಹಾಗೂ ಅಧಿತಿ ಪ್ರಭುದೇವ ಅವರ ಮದುವೆಯ ಆಮಂತ್ರಣ ಪತ್ರ ಕೂಡ ಇದೀಗ ಎಲ್ಲರಿಗೂ ಲಭ್ಯವಾಗಿದೆ. ಇನ್ನು ಈ ಫೋಟೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಲಾವಿದರು ಸೇರಿದಂತೆ ಅಭಿಮಾನಿಗಳು ಈ ಜೋಡಿಗೆ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ.