ಸ್ಯಾಂಡಲ್ವುಡ್ ಪದ್ಮಾವತಿ ನಟಿ ರಮ್ಯಾ ಕಳೆದ ಕೆಲವು ವರ್ಷಗಳಿಂದ ಚಿತ್ರರಂಗ ಹಾಗೂ ಸೋಶಿಯಲ್ ಮೀಡಿಯಾದಿಂದ ಸಂಪೂರ್ಣವಾಗಿ ದೂರವಾಗಿ ಬಿಟ್ಟಿದ್ದಾರೆ. ಇನ್ನು ಇತ್ತೀಚೆಗೆ ನಟಿ ರಮ್ಯಾ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಎನ್ನುವ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿತ್ತು.
ನಟಿ ರಮ್ಯಾ ಅವರು ಮತ್ತೆ ಸಿನಿಮಾರಂಗಕ್ಕೆ ಮಾಡುತ್ತಿದ್ದಾರೆ ಎನ್ನುವ ವಿಷಯ ತಿಳಿದಂತೆ ಅವರ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ನಟಿ ರಮ್ಯಾ ಯಾರ ಜೊತೆಗೆ ಸಿನಿಮಾ ಮಾಡುತ್ತಾರೆ, ಯಾವ ಸಿನಿಮಾ ಎನ್ನುವ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದ್ದವು.
ಇದೀಗ ಎಲ್ಲಾ ಪ್ರಶ್ನೆಗಳಿಗೂ ಕೊನೆಗೂ ಉತ್ತರ ಸಿಕ್ಕಿದೆ. ಹೌದು ನಟಿ ರಮ್ಯಾ ಇದೀಗ ಸ್ಯಾಂಡಲ್ವುಡ್ ನ ನಟ ರಾಕ್ಷಸ ಎಂದೇ ಖ್ಯಾತಿ ಪಡೆದಿರುವ ನಟ ಡಾಲಿ ಧನಂಜಯ ಅವರ ಜೊತೆಗೆ ಉತ್ತರಕಾಂಡ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಈ ವಿಷಯ ಎಲ್ಲೆಡೆ ವೈರಲ್ ಆಗುತ್ತಿದೆ.
ಇನ್ನು ಉತ್ತರಕಾಂಡ ಸಿನಿಮಾದಲ್ಲಿ ನಟ ಡಾಲಿ ಧನಂಜಯ ಜೊತೆಗೆ ನಟಿ ರಮ್ಯಾ ಅವರು ನಾಯಕಿಯಾಗಿ ನಟಿಸುತ್ತಿದ್ದು, ಈ ಸಿನಿಮಾವನ್ನು ನಿರ್ದೇಶಕ ರೋಹಿತ್ ಪದಕಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಈ ಸಿನಿಮಾದ ಮುಹೂರ್ತ ಇದೀಗ ನೆರವೇರಿದೆ.
ಇನ್ನು ಮತ್ತೊಂದು ಖುಷಿಯ ವಿಚಾರ ಏನೆಂದರೆ ಈ ಸಿನಿಮಾದ ಮುಹೂರ್ತದ ವೇಳೆ ಅಶ್ವಿನಿ ಪುನೀತ್ ಅವರು ಕೂಡ ಭಾಗಿಯಾಗಿದ್ದಾರೆ. ಇನ್ನು ನಟಿ ರಮ್ಯಾ ಅವರು ಮತ್ತೆ ಅಶ್ವಿನಿ ಪುನೀತ್ ಅವರು ಒಬ್ಬರನೊಬ್ಬರು ನೋಡಿ ಬಹಳ ಖುಷಿಯಾಗಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಪ್ಪು ಹಾಗೂ ಅಶ್ವಿನಿ ಜೊತೆಗೆ ನಟಿ ರಮ್ಯಾ ಅವರಿಗೆ ಉತ್ತಮ ಸ್ನೇಹವಿದೆ. ಇನ್ನು ರಮ್ಯಾ ಅವರು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚುತ್ತಿರುವುದು ಅಶ್ವಿನಿ ಪುನೀತ್ ಅವರಿಗೂ ಸಹ ಬಹಳ ಖುಷಿ ನೀಡಿದೆ. ಇನ್ನು ನಟ ಡಾಲಿ ಧನಂಜಯ ಹಾಗೂ ನಟಿ ರಮ್ಯಾ ಒಟ್ಟಾಗಿ ನಟಿಸುತ್ತಿರುವ ಉತ್ತರಕಾಂಡ ಸಿನಿಮಾ ಮುಹೂರ್ತದಲ್ಲಿ ಅಶ್ವಿನಿ ಪುನೀತ್ ಕೂಡ ಭಾಗಿಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ನಟಿ ರಮ್ಯಾ ಅವರು ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಿರುವುದು ಅಶ್ವಿನಿ ಅವರಿಗೂ ಸಹ ಬಹಳ ಖುಷಿ ನೀಡಿದೆ. ಇನ್ನು ಸದ್ಯ ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..