ಬಿಗ್ ಬಾಸ್ ಸೀಸನ್ 9 ರಲ್ಲಿ ಆರು ವಾರಗಳ ಕಾಲ ಮನೆಯಲ್ಲಿದ್ದ ಸಾನಿಯಾ ಅಯ್ಯರ್ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಾಸ್ಕ್ ಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಸಾನಿಯಾ ಬಿಗ್ ಬಾಸ್ ಮನೆಯಲ್ಲಿ ಕೆಲವೇ ಕೆಲವು ಸ್ಪರ್ಧಿಗಳ ಜೊತೆಗೆ ಕಾಣಿಸಿಕೊಳ್ಳುತ್ತಿದ್ದರು.
ಇನ್ನು ಆಗಾಗ ಸಾನಿಯಾ ತಮ್ಮ ಚುಚ್ಚು ಮಾತುಗಳ ಮೂಲಕ ಇತರ ಸ್ಪರ್ಧಿಗಳ ಕೆಂಗಣ್ಣಿಗೂ ಸಹ ಗುರಿಯಾಗಿದ್ದರು. ಇದೀಗ ಸಾನಿಯಾ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಸಾನಿಯಾ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವುದು ನಿಜಕ್ಕೂ ಎಲ್ಲರಿಗೂ ಕೂಡ ದೊಡ್ಡ ಶಾಕ್ ನೀಡಿದೆ.
ಬಿಗ್ ಬಾಸ್ ಮನೆಯೊಳಗಿದ್ದಾಗ ಸಾನಿಯಾ ಅವರು ರೂಪೇಶ್ ಶೆಟ್ಟಿ ಅವರ ಜೊತೆಗೆ ಹೆಚ್ಚು ಗುರುತಿಸಿಕೊಂಡಿದ್ದರು. ರೂಪೇಶ್ ಶೆಟ್ಟಿ ಅವರೊಡನೆ ಓಟಿಟಿ ಸೀಸನ್ ನಲ್ಲಿ ಬೆಸ್ಟ್ ಫ್ರೆಂಡ್ ಆಗಿದ್ದ ಸಾನಿಯಾ ಅಯ್ಯರ್ ಟಿವಿ ಸೀಸನ್ ನಲ್ಲಿ ಅವರನ್ನು ಇನ್ನಷ್ಟು ಹಚ್ಚಿಕೊಂಡಿದ್ದರು. ಇಬ್ಬರು ಲವ್ ಬರ್ಡ್ಸ್ ಗಳ ಹಾಗೆ ಮನೆಯೊಳಗಿದ್ದರು. ಆದರೆ ಈಗ ಸಾನಿಯಾ ಅವರು ಮನೆಯಿಂದ ಹೊರ ಬಂದ ನಂತರ..
ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯೊಳಗೆ ಒಬ್ಬಂಟಿಯಾಗಿದ್ದಾರೆ. ಸಾನಿಯಾ ಅವರನ್ನು ನೆನೆದು ರೂಪೇಶ್ ಶೆಟ್ಟಿ ಅವರು ಕಣ್ಣೀರು ಹಾಕಿದ್ದಾರೆ. ಸಾನ್ಯಾ ನನ್ನನ್ನು ತುಂಬಾ ಕೇರ್ ಮಾಡುತ್ತಿದ್ದಳು ಎಂದು ಕಣ್ಣೀರು ಹಾಕಿದ್ದಾರೆ. ಇತ್ತ ಸಾನ್ಯಾ ಅವರು ರೂಪೇಶ್ ಶೆಟ್ಟಿ ಅವರಿಗೆ ತಮ್ಮ ಕೈಯಲ್ಲಿದ್ದ ಉಂಗುರವನ್ನು ನೆನಪಾಗಿ ನೀಡಿ ಮನೆಯಿಂದ ಹೊರಬಂದಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಸುದೀಪ್ ಅವರೊಡನೆ ವೇದಿಕೆಯ ಮೇಲೆ ಮಾತನಾಡಿ, ಹಲವು ವಿಚಾರ ಹಂಚಿಕೊಂಡರು. ಸಾನಿಯಾ ಅವರ ಬಗ್ಗೆ ಹೇಳುವುದಾದರೆ, ಬಾಲನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಸಾನಿಯಾ, ಹೆಚ್ಚು ಗುರುತಿಸಿಕೊಂಡಿದ್ದು, ಪುಟ್ಟಗೌರಿ ಮದುವೆ ಧಾರವಾಹಿ ಮೂಲಕ. ಅದಾದ ನಂತರ ಕೆಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕೂಡ ಪಾಲ್ಗೊಂಡಿದ್ದರು.
ನಂತರ ಬಿಗ್ ಬಾಸ್ ಓಟಿಟಿ ಸೀಸನ್ ಗೆ ಎಂಟ್ರಿ ಕೊಟ್ಟ, ಸಾನಿಯಾ ಅವರು ಬ್ಯೂಟಿ ವಿತ್ ಬ್ರೇನ್ಸ್ ಎಂದು ಹೆಸರು ಪಡೆದಿದ್ದರು. ಯಾವುದೇ ಟಾಸ್ಕ್ ಬಂದರು ರೂಲ್ಸ್ ಗೆ ಮೊದಲ ಆದ್ಯತೆ ಕೊಡುತ್ತಿದ್ದ ಸಾನ್ಯಾ ಅವರು ಟಾಸ್ಕ್ ಗಳಲ್ಲಿ ಬಹಳ ಚೆನ್ನಾಗಿ ಆಡುತ್ತಿದ್ದರು, ಹಲವು ಟಾಸ್ಕ್ ಗಳಲ್ಲಿ ವಿನ್ನರ್ ಸಹ ಆಗಿದ್ದರು. ಅದರಿಂದಲೇ ಟಿವಿ ಸೀಸನ್ ಗೆ ಕೊನೆಯವರೆಗು ಇರಬೇಕೆಂದು ಆಸೆಯಿಂದ ಎಂಟ್ರಿ ಕೊಟ್ಟ ಸಾನಿಯಾ,
ಆರನೇ ವಾರಕ್ಕೆ ಹೊರಬಂದಿದ್ದಾರೆ. ಸಾನಿಯಾ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಇವರಿಗೆ ಸಿಕ್ಕಿರುವ ಸಂಭಾವನೆ ಎಷ್ಟು ಎಂದು ಚರ್ಚೆಯಾಗುತ್ತಿದ್ದು, ಓಟಿಟಿ ಸೀಸನ್ ನಲ್ಲಿ 6 ವಾರ, ಟಿವಿ ಸೀಸನ್ ನಲ್ಲಿ 6 ವಾರ ಇದ್ದರು ಸಾನಿಯಾ. ಒಂದು ವಾರಕ್ಕೆ 30 ಸಾವಿರದ ಹಾಗೆ, 12 ವಾರಕ್ಕೆ ಸಾನಿಯಾ ಅವರಿಗೆ 3,60,000 ರೂಪಾಯಿ ಸಂಭಾವನೆ ಸಿಕ್ಕಿದ್ದು, ಸಧ್ಯಕ್ಕೆ ಈ ವಿಚಾರ ಭಾರಿ ಚರ್ಚೆಯಾಗುತ್ತಿದೆ.