ಮಹತ್ವದ ನಿರ್ಧಾರ ಕೈಗೊಂಡ ಪುನೀತ್ ಪತ್ನಿ ಅಶ್ವಿನಿ! ಏನಿದು ಗೊತ್ತಾ ನೀವೇ ನೋಡಿ!…

ಸ್ಯಾಂಡಲವುಡ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಗಂಧದಗುಡಿ ಸಿನಿಮಾವನ್ನು ಎಲ್ಲರೂ ನೋಡಿ ಕಣ್ತುಂಬಿಕೊಂಡಿದ್ದಾರೆ. ಈ ಗಂಧದಗುಡಿ ಸಿನಿಮಾವನ್ನು ಪ್ರತಿಯೊಬ್ಬ ಕನ್ನಡಿಗ ಸಹ ನೋಡಲೇ ಬೇಕು ಎಂದು ಅಪ್ಪು ಅವರು ಕನಸ್ಸು ಕಂಡಿದ್ದರು.

ಪುನೀತ್ ರಾಜ್ ಕುಮಾರ್ ಅವರ ಕನಸ್ಸಿನ ಪ್ರಾಜೆಕ್ಟ್ ಗಂಧದಗುಡಿ ಸಿನಿಮಾದಲ್ಲಿ ಅಪ್ಪು ಪ್ರತಿಯೊಬ್ಬ ಮನುಷ್ಯ ಪಾಲಿಸಬೇಕಾದ ಒಂದು ಸಂದೇಶವನ್ನು ನೀಡಿದ್ದಾರೆ. ಇದು ಪ್ರತಿಯೊಬ್ಬ ಕನ್ನಡಿಗನು ಆರ್ಥ ಮಾಡಿಕೊಳ್ಲಬೇಕು, ಇದನ್ನು ಪಾಲಿಸಬೇಕು ಎನ್ನುವುದು ಅವರ ಕೊನೆಯ ಆಸೆ.

ಹೀಗಾಗಿ ಅಪ್ಪು ಅವರ ಅನುಪಸ್ಥಿತಿಯಲ್ಲಿ ಅಶ್ವಿನಿ ಪುನೀತ್ ಅವರು ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಅಪ್ಪು ಅವರ ಉದ್ದೇಶ ಈ ಸಿನಿಮಾ ಪ್ರತಿಯೊಬ್ಬ ಕನ್ನಡಿಗರು ಸಹ ನೋಡಬೇಕು ಎನ್ನುವುದು. ಅದರಲ್ಲಿಯೂ ಮಕ್ಕಳು ಈ ಸಿನಿಮಾವನ್ನು ನೋಡಬೇಕು ಎನ್ನುವುದು.

ಅಪ್ಪು ಅವರ ಕನಸ್ಸಾಗಿತ್ತು. ಈಗಾಗಿ ನಾನು ಹಗಸ್ ಚಿತ್ರತಂಡ ಎಲ್ಲರೊಂದಿಗೆ ಚರ್ಚಿಸಿ, ವಿತರಕರು ಹಾಗೂ ಸಹಾಯಕರೊಂದಿಗೆ ಗಂಧದಗುಡಿ ಸಿನಿಮಾವನ್ನು ಸೋಮವಾರದಿಂದ ಶುಕ್ರವಾರದ ವರೆಗೂ ಸಿಂಗಲ್ ಸ್ಕ್ರೀನ್ ಗಳಲ್ಲಿ 56 ರೂಪಾಯಿಗಳಿಗೆ ಹಾಗೂ ಮಲ್ಟಿಫ್ಲೆಸ್ಸ್ ಗಳಲ್ಲಿ 112 ರೂಪಾಯಿಗಳಿಗೆ,

ಕರ್ನಾಟಕ ರಾಜ್ಯಾದ್ಯಂತ ದಿನದ ಎಲ್ಲಾ ಆಟಗಳನ್ನು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ನಮ್ಮ ಮಕ್ಕಳ ನಾಳೆಗಳಿಗಾಗಿ ಕಾಡನ್ನು ರಕ್ಷಿಸೋಣ. ಗಂಧದಗುಡಿಯನ್ನು ತೋರಿಸೋಣ ಜೈ ಹಿಂದ್ ಜಯ್ ಕರ್ನಾಟಕ. ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಈ ನಿರ್ಧಾರವನ್ನು ಎಲ್ಲರೂ ಮೆಚ್ಚಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಮನ್ಸೂರೆ ಅವರು ಸರ್ಕಾರ ಇದರ ಬಗ್ಗೆ ಯೋಚಿಸದೆ ಇದ್ದರೂ ಅಶ್ವಿನಿ ಪುನೀತ್ ಅವರು ಈ ಬಗ್ಗೆ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ಮಚ್ಚೆಗೆ ಬೇಕಾದಂತದ್ದು,

ನಿಮಗೆ ಧನ್ಯವಾದಗಳು ಪ್ರತಿ ಮಗು, ವಿದ್ಯಾರ್ಥಿ ಈ ಸಿನಿಮಾ ನೋಡುವಂತಾಗಲಿ ಎಂದು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ, ಹಾಗೆ ಈ ಪೋಸ್ಟ್ ಅನ್ನು ಲೈಕ್ ಮಾಡಿ ಶೇರ್ ಮಾಡಿ.

Leave a Reply

Your email address will not be published. Required fields are marked *