ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ, ಅಷ್ಟಕ್ಕೂ ಆಗಿದ್ದೇನು ಗೊತ್ತಾ?… ನೋಡಿ

ಸ್ಯಾಂಡಲವುಡ್

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟರ ಪೈಕಿ ನಟ ಲೋಹಿತಾಶ್ವ ಕೂಡ ಒಬ್ಬರು. ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಕೊಡುಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಲೋಹಿತಾಶ್ವ ಕೇವಲ ಒಬ್ಬ ನಟ ಮಾತ್ರವಲ್ಲ ಒಬ್ಬ ಬರಹಗಾರ ಕೂಡ ಹೌದು. ಇನ್ನು ಕನ್ನಡ ಚಿತ್ರರಂಗದಲ್ಲಿ ಸುಮಾರು 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ ನಟ ಲೋಹಿತಾಶ್ವ.

ಕೇವಲ ಬೆಳ್ಳಿತೆರೆಯಲ್ಲಿ ಮಾತ್ರವಲ್ಲದೆ ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿ ನಟ ಲೋಹಿತಾಶ್ವ ಕಾಣಿಸಿಕೊಂಡಿದ್ದಾರೆ. ನಟ ಲೋಹಿತಾಶ್ವ ಮೂಲತಃ ರಂಗಭೂಮಿ ಕಲಾವಿದರು, ನಂತರ ಅವರಿಗೆ ಸಿನಿಮಾಗಳ ಅವಕಾಶ ದೊರೆಕಿತ್ತು. ಇನ್ನು ನಟ ಲೋಹಿತಾಶ್ವ ಸಾಕಷ್ಟು ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ.

ಶಂಕರ್ ನಾಗ್, ಅಂಬರೀಷ್, ವಿಷ್ಣುವರ್ಧನ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಅಲ್ಲದೆ ಅದೆಷ್ಟೋ ಸಿನಿಮಾಗಳಲ್ಲಿ ನಟ ಲೋಹಿತಾಶ್ವ ಅವರು ಮುಖ್ಯಮಂತ್ರಿ ಪಾತ್ರದಲ್ಲಿ ಮಿಂಚಿದ್ದಾರೆ. ಸಿನಿಮಾರಂಗದಲ್ಲಿ ವರ್ಷಗಳ ಕಾಲ ಅನುಭವ ಹೊಂದಿದ್ದಾರೆ.

ಸದ್ಯ ಲೋಹಿತಾಶ್ವ ಅವರಿಗೆ 80 ವರ್ಷ ವಯಸ್ಸಾಗಿತ್ತು, ಇನ್ನು ಅವರಿಗೆ ಕೊಂಚ ಆರೋಗ್ಯದ ಸಮಸ್ಯೆಯಿಂದಾಗಿ ಅವರನ್ನು ಆಸ್ಪತ್ರೆಗೆ ಧಾಖಲಿಸಲಾಗಿತ್ತು, ಇನ್ನೇನು ಅವರು ಚೇತರಿಸಿಕೊಳ್ಳುತ್ತಾರೆ ಎನ್ನುವಷ್ಟರಲ್ಲಿ ಅವರಿಗೆ ಹೃದ-ಯಾ-ಘಾ-ತವಾಗಿ ಐಸಿಯುನಲ್ಲಿ ಇರಿಸಲಾಯಿತು.

ಸುಮಾರು ಒಂದು ತಿಂಗಳಿಂದ ಅವರು ಐಸಿಯುನಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ನೆನ್ನೆ ನವೆಂಬರ್ 8 ರಂದು ಚಿಕಿತ್ಸೆಗೆ ಸ್ಪಂದಿಸದೆ ಅವರು ವಿಧಿ-ವಶ-ರಾಗಿದ್ದಾರೆ. ಇನ್ನು ಬೆಂಗಳೂರಿನ ಅವರ ನಿವಾಸಕ್ಕೆ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗಿದ್ದು,

ನೆನ್ನೆ ಸುಮಾರು 11 ಗಟೆಯವರೆಗೂ ಅವರ ಅಂತಿಮ ದರ್ಶನ ಪಡೆಯುವ ಭಾಗ್ಯ ಒದಗಿಸಲಾಗಿತ್ತು. ಇನ್ನು ಇಂದು ನವೆಂಬರ್ 12 ರಂದು ಬೆಳ್ಳಿಗೆ ಅವರ ಹುಟ್ಟೂರಾದ ತಮಕೂರಿನಲ್ಲಿ ಅವರ ಅಂತ್ಯ-ಕ್ರಿಯೆ ಮಾಡಲಾಗಿದೆ. ಸದ್ಯ ಕನ್ನಡದ ಮತ್ತೊಬ್ಬ ಅದ್ಭುತ ಕಲಾವಿದ ಬಾರದ ಲೋಕಕ್ಕೆ ಹೋಗಿದ್ದಾರೆ.

ಇನ್ನು ಇತ್ತೀಚೆಗೆ ಲೋಹಿತಾಶ್ವ ಅವರು ಸಿನಿಮಾಗಳಲ್ಲಿ ಅಷ್ಟಾಗಿ ನಟಿಸುತ್ತಿರಲಿಲ್ಲ. ಇನ್ನು ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಅನಾಥವಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..

Leave a Reply

Your email address will not be published. Required fields are marked *