ಸದ್ಯ ಎಲ್ಲಿ ನೋಡಿದರೂ ಯಾವ ಚಿತ್ರಮಂದಿರಗಳಲ್ಲಿ ನೋಡಿದರೂ ಸಹ ಕಾಂತಾರ ಸಿನಿಮಾದೇ ಹವಾ. ಕನ್ನಡದ ಕಾಂತಾರ ಸಿನಿಮಾ ಯಾವ ಮಟ್ಟಕ್ಕೆ ಹೋಗಿ ತಲುಪಿದೆ ಎಂದು ನಿಮ್ಮೆಲ್ಲರಿಗೂ ಈಗಾಗಲೇ ಗೊತ್ತೇ ಇದೆ. ಸದ್ಯ ಕಾಂತರಾ ಸಿನಿಮಾ ಪಾನಿ ಇಂಡಿಯಾ ಮಟ್ಟದಲ್ಲಿ ಸಹ ಸಾಕಷ್ಟು ಗುರುತಿಸಿಕೊಂಡಿದೆ.
ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಮೊದಮೊದಲು ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಜನರು ಈ ಸಿನಿಮಾವನ್ನು ಯಾವ ರೀತಿಯ ಒಪ್ಪಿಕೊಳ್ಳುತ್ತಾರೋ ಎಂದು ಚಿತ್ರತಂಡಕ್ಕೆ ಕೊಂಚ ಅನುಮಾನವಿತ್ತು ಆದರೆ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮೈಲು ಗಲ್ಲು ಸಾಧಿಸಿದೆ.
ಕಾಂತಾರ ಸಿನಿಮಾದ ಪ್ರತಿಯೊಂದು ದೃಶ್ಯ ಹಾಗೆ ಈ ಸಿನಿಮಾದ ಎಲ್ಲಾ ಹಾಡುಗಳು ಪ್ರೇಕ್ಷಕರ ಮನಸಿಗೆ ಬಹಳ ಹತ್ತಿರವಾಗಿದೆ. ಇನ್ನೂ ಕಾಂತರಾ ಸಿನಿಮಾದ ಕ್ಲೈಮಾಕ್ಸ್ ದೃಶ್ಯ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದೆ.
ಕಾಂತಾರ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಿರುವುದು ನಿಮ್ಮೆಲ್ಲರಿಗೂ ಗೊತ್ತೇ ಇದೆ. ಇನ್ನು ಕಾಂತಾರ ಸಿನಿಮಾ ಬೇರೆ ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಹಿಂದುಕ್ಕಿ ಮುಂದಕ್ಕೆ ಸಾಗುತ್ತಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಲೂಟಿ ಮಾಡುತ್ತಿದೆ.
ಸದ್ಯ ಕಾಂತಾರ ಸಿನಿಮಾದ ಯಶಸ್ಸಿನ ಹಿನ್ನೆಲೆ ಕಾಂತಾರ 2 ಬಗ್ಗೆ ಕೂಡ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ಇನ್ನು ರಿಷಬ್ ಶೆಟ್ಟಿ ಹಾಗೂ ಚಿತ್ರತಂಡಕ್ಕೆ ಅಭಿಮಾನಿಗಳು ಕಾಂತಾರ 2 ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಸಹ ಮಾಡಿದ್ದಾರೆ.
ಇನ್ನು ಕಾಂತಾರ ಬ್ಲಾಕ್ ಬಾಸ್ಟರ್ ಹಿಟ್ ಆಗಿದೆ, ಇದೀಗ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಹಾಗೂ ರಿಷಬ್ ಅವರ ಪತ್ನಿ ಪ್ರಗತಿ ಅವರು ಪ್ರವಾಸಕ್ಕೆ ತೆರಳಿದ್ದಾರೆ. ಸದ್ಯ ತಮ್ಮ ಪ್ರವಾಸದಲ್ಲಿ ಎಲ್ಲರೂ ಸಕತ್ ಎಂಜಾಯ್ ಮಾಡುತ್ತಿದ್ದು, ಅಲ್ಲಿನ ಕೆಲ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಒಂದು ತಿಂಗಳ ಕಾಲ ಕೇವಲ ತಮ್ಮ ಕುಟುಂಬಕ್ಕೆ ಸಮಯ ಕೊಡುವುದಾಗಿ ರಿಷಬ್ ಶೆಟ್ಟಿ ಹೇಳಿದ್ದು, ಆನಂತರ ಮತ್ತೆ ಸಿನಿಮಾ ಕೆಲಸಗಳನ್ನು ಶುರು ಮಾಡಿಕೊಳ್ಳಲಿದ್ದಾರಂತೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..