ಅಪ್ಪು ನಮ್ಮನ್ನು ಅಗಲಿ ಈಗಾಗಲೇ ವರ್ಷದ ಕಳೆದು ಹೋಗಿದೆ. ಇಷ್ಟು ದಿನಗಳು ಆದರು ಸಹ ಅವರಿಂದ ನಮ್ಮ ಜೊತೆಗಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅವರು ನನ್ನ ಜೊತೆ ಬದುಕೆ ಇದ್ದಾರೆ ಅವರನ್ನು ಒಂದೊಂದು ದಿನ ನಾವೆಲ್ಲ ನೋಡುತ್ತೇವೆ.
ಅವರ ಜೊತೆ ನಾವೆಲ್ಲ ಜೀವಿಸುತ್ತಿದ್ದೇವೆ ಎಂದೆ ಅನಿಸುತ್ತದೆ. ಅಪ್ಪು ಅವರ ಅದೆಷ್ಟೋ ಅಭಿಮಾನಿಗಳು ಇಂದಿಗೂ ಅವರ ನಿಧನ ಕನಸಾಗಿಯೇ ಇರಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಬಲಗೈಗೆ ಕೊಟ್ಟದಾನ ಎಡಗೈಗೆ ಗೊತ್ತಾಗಬಾರದು ಎಂಬ ನಾಲ್ನುಡಿ ಇದೆ.
ಇದನ್ನು ಪಾಲಿಸಿದ ಅಪ್ಪು ಅವರು ಅದೆಷ್ಟೋ ಜನರಿಗೆ ಸಹಾಯ ಹಸ್ತವನ್ನು ಚಾಚಿ ಯಾರಿಗೂ ಕಾಣದಂತೆ ಮಾಯವಾಗಿದ್ದಾರೆ. ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಅಗಲಿ ಇಷ್ಟು ದಿನಗಳಾದ ನಂತರ ಅವರು ಬರೆದಿರುವ ಡೈರಿ ಅಶ್ವಿನಿ ಅವರ ಕೈಗೆ ಸಿಕ್ಕಿದೆ. ಅಪ್ಪು ಅವರು ತಮ್ಮ ಡೈರಿಯಲ್ಲಿ ತಮ್ಮ ದಿನಚರಿಯ ಹಾಗೂ ಹೋಗುಗಳನ್ನು ಹಾಗೆ ತಮ್ಮ ಆಸೆ ಕನಸುಗಳನ್ನು ಬರೆದುಕೊಂಡಿದ್ದರಂತೆ.
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇದೀಗ ಅಪ್ಪು ಅವರ ಡೈರಿಯನ್ನು ರಿವೀಲ್ ಮಾಡಿದ್ದಾರೆ. ಅಪ್ಪು ಅವರು ತಮ್ಮ ಯಾವ ಯಾವ ಕನಸುಗಳನ್ನು ಈಡೇರಿಸಿಕೊಂಡಿದ್ದರು ಯಾವ ಯಾವ ಕನಸುಗಳನ್ನು ಕಟ್ಟಿಕೊಂಡಿದ್ದರು ಎಲ್ಲವೂ ಆ ಡೈರಿಯಲ್ಲಿ ಬರೆದಿದೆ.
ಅಪ್ಪು ಕುಟುಂಬದವರು ಆ ಡೈರಿಯನ್ನು ಓದಿದ ಬಳಿಕ ಆ ಕನಸುಗಳನ್ನು ನನಸು ಮಾಡಲು ಪಣತೊಟ್ಟಿದ್ದಾರೆ. ಗಂಧದ ಗುಡಿ ಸಿನಿಮಾ ಕೂಡ ಅಪ್ಪು ಅವರ ಕನಸುಗಳಲ್ಲಿ ಒಂದಾಗಿತ್ತು ಅದನ್ನು ಅರಿತ ಅಪ್ಪು ಕುಟುಂಬ ಇತ್ತೀಚಿಗೆ ಗಂಧದ ಗುಡಿ ಸಿನಿಮಾವನ್ನು ಬಿಡುಗಡೆ ಮಾಡಿತ್ತು.
ಅದೇ ರೀತಿ ಇದೀಗ ಅಪ್ಪು ಅವರ ಮತ್ತೊಂದು ಕನಸನ್ನು ದೊಡ್ಮನೆಯವರು ನನಸು ಮಾಡಲು ಮುಂದಾಗಿದ್ದಾರೆ. ಚಾಮರಾಜನಗರ ಗಡಿಯ ತಳವಾಡಿ ಸಮೀಪದ ಗಾಜನೂರಿನ ಡಾ. ರಾಜಕುಮಾರ್ ಅವರ ಆಡಿ ಬೆಳೆದ ಮನೆ ಇದೆ. ಇನ್ನು ಆ ಮನೆಯನ್ನು ದುರಸ್ತಿಗೊಳಿಸಿ ಮ್ಯೂಸಿಯಂ ಆಗಿ ಪರಿವರ್ತಿಸಲು ಡಾಕ್ಟರ್ ರಾಜ್ ಕುಟುಂಬದವರು ತೀರ್ಮಾನಿಸಿದ್ದಾರೆ.
ಗಾಜನೂರು ಹಾಗೂ ಅಲ್ಲಿನ ಮನೆ ಎಂದರೆ ಅಪ್ಪು ಅವರಿಗೆ ತುಂಬಾ ಅಚ್ಚು ಮೆಚ್ಚು. ಅಪ್ಪು ಅವರು ಆಗಾಗ ಆ ಮನೆಗೆ ಭೇಟಿ ನೀಡುತ್ತಿದ್ದರು. ಸದ್ಯ ಆ ಮನೆ ಕುಸಿಯುವ ಸ್ಥಿತಿಯಲ್ಲಿದೆ ಕಳೆದ ವರ್ಷ ಅಪ್ಪು ಅವರು ಆ ಮನೆಗೆ ಭೇಟಿ ನೀಡಿದಾಗ ಮನೆಯ ಸ್ಥಿತಿ ನೋಡಿ ಮನೆಯನ್ನು ದುರಸ್ತಿಗೊಳಿಸಲು ತೀರ್ಮಾನಿಸಿದ್ದರು. ಆದರೆ ಅದನ್ನು ಮಾಡುವ ಮೊದಲೇ ಅಪ್ಪು ಅವರು ಇಹ-ಲೋಕ ತ್ಯಜಿಸಿದ್ದಾರೆ. ಸದ್ಯ ಅಪ್ಪು ಅವರ ಕನಸನ್ನು ಅವರ ಮನೆಯವರು ಈಡೇರಿಸಲು ಪಣತೊಟ್ಟಿದ್ದಾರೆ.