ನಮ್ಮ ದೇಶದ ರಾಷ್ಟ್ರಪತಿಯವರು ಕಾರಿನಲ್ಲಿ ಬರುತ್ತಿದ್ದರು, ಇದನ್ನು ನೋಡಿ ಅಲ್ಲಿದ್ದ ಒಬ್ಬ ಸಾಧಾರಣ ಟ್ರಾಫಿಕ್ ಪೊಲೀಸ್ ಅವರನ್ನು ನಿಲ್ಲಿಸಿದ್ದಾರೆ. ಇದನ್ನು ನೋಡಿ ಅಲ್ಲಿದ್ದ ಅಷ್ಟು ಜನರು ಬೆರಗಾಗಿದ್ದಾರೆ. ಇನ್ನು ರಾಷ್ಟ್ರಪತಿ ಅವರ ಗ-ನ್ ಮ್ಯಾನ್ ಗಳು ಸರಸರನೆ ಕಾರನ್ನು ಇಳಿದು, ಕಾರನ್ನು ಅಡ್ಡ ಹಾಕಲು ಕಾರಣ ಕೇಳಿದ್ದಾರೆ.
ಇನ್ನು ಆ ಟ್ರಾಫಿಕ್ ಪೊಲೀಸ್ ತಾನು ರಾಷ್ಟ್ರಪತಿ ಕಾರನ್ನು ಅಡ್ಡ ಹಾಕಲು ಕಾರಣ ತಿಳಿಸಿದಾಗ, ಅಲ್ಲಿದ್ದ ಎಲ್ಲರೂ ಶಾಕ್ ಆಗಿದ್ದಾರೆ. ಇಷ್ಟು ದೊಡ್ಡ ಶಾಕಿಂಗ್ ಘಟನೆ ನಡೆದಿದ್ದು ಎಲ್ಲಿ? ಅಷ್ಟಕ್ಕೂ ಆ ಟ್ರಾಫಿಕ್ ಪೊಲೀಸ್ ಕಾರನ್ನು ಅಡ್ಡ ಹಾಕಿದ್ದು ಏಕೆ? ಅದಕ್ಕೆ ಆತ ಕೊಟ್ಟ ಕಾರಣ ಏನು ಎಲ್ಲವನ್ನು ತಿಳಿಸುತ್ತೇವೆ ಮುಂದಕ್ಕೆ ಓದಿ..
ಈ ಟ್ರಾಫಿಕ್ ಪೋಲುಸ್ ನ ಹೆಸರು ಎಂ ಎಲ್ ನಿಜಲಿಂಗಪ್ಪ, ಹಲವಾರು ವರ್ಷಗಳಿಂದ ಬೆಂಗಳೂರಿನ ಟ್ರಿನಿಟಿ ಸರ್ಕಲ್ ಗೆ ಇವರೇ ಟ್ರಾಫಿಕ್ ಇನ್ಸ್ಪೆಕ್ಟರ್. ತುಂಬಾ ಬ್ಯುಸಿಯಾಗಿರುವ ದಿನಕ್ಕೆ ಲಕ್ಷ ಗಟ್ಟಲೆ ವಾಹನಗಳು ಓಡಾಡುವ ಬೆಂಗಳೂರು ನಗರದಲ್ಲಿ ಯಾವಾಗಲೂ ಟ್ರಾಫಿಕ್ ಹೆಚ್ಚಾಗಿಯೇ ಇರುತ್ತದೆ.
ಇನ್ನು ಶನಿವಾರ ವೀಕೆಂಡ್ ಆಗಿರುವ ಕಾರಣ ಟ್ರಾಫಿಕ್ ಇನ್ನಷ್ಟು ಜಾಸ್ತಿಯಾಗಿತ್ತು, ಇನ್ನು ಅಂದು ಮೆಟ್ರೋ ಗ್ರೀನ್ ಲೈನ್ ಉದ್ಘಾಟನೆಯ ಕಾರ್ಯಕ್ರಮಕ್ಕೆ ಆಗಿನ ರಾಷ್ಟ್ರಪತಿಯಾಗಿದ್ದ ಪ್ರಣವ್ ಮುಕ್ರಜಿಯವರು ತಮ್ಮ ತಂಡದ ಜೊತೆಗೆ ವೇಘವಾಗಿ ಬರುತ್ತಿದ್ದರು. ಬೆಂಗಳೂರು ಪೊಲೀಸರು ಕೂಡ ಅವರ ಹಿಂದೆ ಅವರ ಕಾವಲಾಗಿ ಬರುತ್ತಿದ್ದರು.
ಇನ್ನು ವೇಗವಾಗಿ ರಾಷ್ಟ್ರಪತಿಯವರು ಬರುತ್ತಿದ್ದ ಕಾರುಗಳನ್ನು ನೋಡಿ, ಇನ್ನೊಂದು ಕಡೆ ಅದೇ ವೇಳೆ ಒಂದು ಆಂಬ್ಯು-ಲೆನ್ಸ್ ಸೈರನ್ ಹಾಕಿಕೊಂಡು ಬರುತ್ತಿರುವುದನ್ನು ನಿಜಲಿಂಗಪ್ಪ ನೋಡಿ, ಅವರು ರಾಷ್ಟ್ರಪತಿಯವರ ವಾಹನಕ್ಕೆ ಕೈ ಅಡ್ಡ ಹಾಕಿ ನಿಲ್ಲಿಸುವಂತೆ ಹೇಳಿದ್ದಾರೆ.
ಕಾರ್ ನಿಲ್ಲಿಸಿದ ತಕ್ಷಣ ಅಲ್ಲಿದ್ದ ಗ-ನ್ ಮ್ಯಾನ್ ಗಳು ಆ ವ್ಯಕ್ತಿಯನ್ನು ಕಾರಣ ಕೇಳಿದ್ದಾರೆ. ಇದಕ್ಕೆ ಆತ ಸರ್, ಅಲ್ಲಿ ಒಂದು ಎಂಬ್ಯುಲೆನ್ಸ್ ಬರುತ್ತಿರುವುದನ್ನು ನಾನು ನೋಡಿದೆ, ಆ ಆಂಬ್ಯುಲೆನ್ಸ್ ನಲ್ಲಿ ಒಬ್ಬ ಪೆಶೆಂಟ್ ಸಾ-ವು ಬದುಕಿನ ನಡುವೆ ಒದ್ದಾಡುತ್ತಿರುವುದನ್ನು ನೀಡಿ ನಿಮ್ಮ ಕಾರನ್ನು ನಿಲ್ಲಿಸಿದೆ ಎಂದಿದ್ದಾರೆ.
ಈ ವಿಷಯ ಪ್ರಣವ್ ಮುಖರ್ಜಿ ಅವರಿಗೂ ಸಹ ಗೊತ್ತಾಗಿ ತಕ್ಷಣ ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡುವಂತೆ ಆದೇಶ ನೀಡಿದ್ದಾರೆ. ಸದ್ಯ ನಿಜಲಿಂಗಪ್ಪ ಮಾಡಿರುವ ಕೆಲಸ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ನಿಜಲಿಂಗಪ್ಪ ಅವರ ಪ್ರಾಮಾಣಿಕತೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..