ಇಂದಿಗೆ ಚಿರು ಆಗಲಿ 2 ವರ್ಷ, ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡ ಮೇಘನಾರಾಜ್ ಏನದು ಗೊತ್ತ.? ನಿಜಕ್ಕೂ ಕಣ್ಣೀರು ಬರುತ್ತೆ ಈ ಮಾತುಗಳನ್ನು ಕೇಳಿದ್ರೆ.

ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್‌ ಮೋಸ್ಟ್ ಬ್ಯೂಟಿಫುಲ್ ಜೋಡಿಗಳಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಕೂಡ ಒಬ್ಬರು ಇವರಿಬ್ಬರೂ ಕೂಡ ಪರಸ್ಪರ ಸುಮಾರು ಹತ್ತು ವರ್ಷಗಳ ಕಾಲ ಪ್ರೀತಿಸಿ ತದನಂತರ ಎರಡು ವರ್ಷಗಳ ದಾಂಪತ್ಯ ಜೀವನವನ್ನು ನಡೆಸಿದ ಜೋಡಿ. ಇವರಿಬ್ಬರೂ ಕೂಡ ಅನ್ಯ ಧರ್ಮದವರು ಆಗಿದ್ದರೂ ಕೂಡ ಪ್ರೀತಿಗೆ ಯಾವುದೇ ಧರ್ಮದ ಕಟ್ಟುಪಾಡುಗಳಿಲ್ಲ ಎಂಬುದನ್ನು ತೋರಿಸಿಕೊಟ್ಟವರು. ಎರಡು ಕುಟುಂಬದ ಸಮ್ಮತಿಯನ್ನು ಪಡೆದು ಹಿಂದೂ ಸಂಪ್ರದಾಯದಂತೆ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಎರಡರಂತೆ ಕೂಡ ಮದುವೆಯಾದ ಜೋಡಿ. ಅಷ್ಟೇ ಅಲ್ಲದೆ ಬಹಳಷ್ಟು ಯುವಕ ಮತ್ತು ಯುವತಿಯರಿಗೆ ಯಾವ ಧರ್ಮದವರಾದರೂ ಸರಿ ಹೇಗೆ ಒಟ್ಟಾಗಿ ಜೀವನವನ್ನು ಸಾಗಿಸಬಹುದು ಎಂಬುದನ್ನು ತೋರಿಸಿಕೊಟ್ಟ ವ್ಯಕ್ತಿ.

ಮೇಘನಾ ರಾಜ್ ಅವರು ಚಿರಂಜೀವಿ ಅವರನ್ನು ಎಷ್ಟು ಇಷ್ಟಪಡುತ್ತಿದ್ದರು ಅಂದರೆ ಚಿರು ಅವರು ಅಗಲಿದಾಗ ಅವರು ನಡೆದುಕೊಂಡ ರೀತಿಯಲ್ಲಿ ಎಲ್ಲರಿಗೂ ಕೂಡ ತಿಳಿಯುತ್ತದೆ. ತುಂಬಾ ಕಷ್ಟದ ಸಮಯದಲ್ಲಿ ಮೇಘಾನ ಚಿರು ಅವರನ್ನು ಕಳೆದುಕೊಂಡರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಚಿರು ಅಗಲಿದಾಗ ಮೇಘನಾ ನಾಲ್ಕು ತಿಂಗಳ ಗರ್ಭಿಣಿ ಈ ಸಮಯದಲ್ಲಿ ಪತಿ ತನ್ನೊಟ್ಟಿಗೆ ಇರಬೇಕು ಅಂತ ಎಲ್ಲರೂ ಕೂಡ ಬಯಸುತ್ತಾರೆ. ಆದರೆ ಇಂತಹ ಸಮಯದಲ್ಲಿ ಸಂತಸ ಕೊಡುವುದನ್ನು ಬಿಟ್ಟು ಮೇಘನಾ ರಾಜ್ ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಯಿತು ಅಷ್ಟೇ ಅಲ್ಲದೆ ಇಂತಹ ಪರಿಸ್ಥಿತಿ ಯಾವ ಹೆಣ್ಣು ಮಕ್ಕಳಿಗೂ ಕೂಡ ಬರಬಾರದು ಅಂತ ಇಡೀ ಕರುನಾಡ ಜನತೆ ಮಾತನಾಡಿಕೊಂಡಿದ್ದರು. ಚಿರು ಅವರ ಅಗಲಿಕೆಯ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ರಾಜಕುಟುಂಬ ಮತ್ತು ಸರ್ಜಾ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಕರುನಾಡಿಗೆ ತುಂಬಲಾರದ ನ’ಷ್ಟ ಅಂತನೇ ಹೇಳಬಹುದು.

ಚಿರು ಅವರ ಸ್ವಭಾವ ಎಂತಹದು ಅಂತ ಸ್ಯಾಂಡಲ್ ವುಡ್ ನಲ್ಲಿ ಇರುವಂತಹ ಪ್ರತಿಯೊಬ್ಬ ನಟನಟಿಯರಿಗೂ ಕೂಡ ಗೊತ್ತು ಬಹಳ ಸೌಮ್ಯ ಸ್ವಭಾವದವರು ಅಷ್ಟೇ ಅಲ್ಲದೆ ತುಂಬಾನೇ ಸರಳ ಜೀವನವನ್ನು ಅನುಸರಿಸಿಕೊಂಡಿದ್ದರು ಸ್ನೇಹಿತರಿಗಾಗಿ ಏನನ್ನು ಬೇಕಾದರೂ ಕೂಡ ಮಾಡಲು ಸಿದ್ಧವಾಗಿದ್ದರು. ಚಿರುಗೆ ಧ್ರುವ ಸರ್ಜಾ ಅಂದರೆ ಬಹಳನೇ ಪ್ರೀತಿ ಅವರನ್ನು ತಮ್ಮನಂತೆ ನೋಡುತ್ತಿರಲಿಲ್ಲ ಒಬ್ಬ ಸ್ನೇಹಿತನಂತೆ ಕಾಣುತ್ತಿದ್ದರು ಅಷ್ಟೇ ಅಲ್ಲದೆ ತನ್ನ ಮಗನಂತೆ ಸಾಕುತ್ತಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಒಂದು ಕುಟುಂಬದಲ್ಲಿ ಹಿರಿಯಮಗ ಹೇಗಿರಬೇಕು ಆ ರೀತಿಯಾಗಿ ಎಲ್ಲ ರೀತಿಯಾದಂತಹ ಜವಾಬ್ದಾರಿಯನ್ನು ಹಾಗೂ ಪತ್ನಿಗೆ ಒಳ್ಳೆಯ ಪತಿಯಾಗಿ ಹಾಗೂ ತಮ್ಮ ಅಭಿಮಾನಿಗಳಿಗೆ ಒಬ್ಬ ಮಾರ್ಗದರ್ಶಕನಾಗಿ ನಿಂತಿದ್ದರು.

ಆದರೆ ಯಾರ ಕೆಟ್ಟದೃಷ್ಟಿ ಬಿತ್ತೋ ಏನೋ ಗೊತ್ತಿಲ್ಲ ಚಿರು ಅವರು ಕೇವಲ 38 ನೇ ವಯಸ್ಸಿಗೆ ವಿ’ಧಿ’ವ’ಶರಾಗುತ್ತಾರೆ ಈ ಒಂದು ಅಕಾಲಿಕ ಮ’ರ’ಣ ನಿಜಕ್ಕೂ ಕೂಡ ನಂಬಲು ಸಾಧ್ಯವಾಗಲಿಲ್ಲ. ಕೇವಲ ಎರಡೇ ಎರಡು ವರ್ಷ ದಾಂಪತ್ಯ ಜೀವನವನ್ನು ನಡೆಸಿ ಇನ್ನು ಕೂಡ ತಮ್ಮ ಮಗುವನ್ನು ಒಂದು ಬಾರಿಯೂ ಕೂಡ ನೋಡದೆ ಇಹಲೋಕ ತ್ಯಜಿಸಿದ್ದು ಮಾತ್ರ ತುಂಬಾನೇ ಕ’ಹಿಘಟನೆ. ಈ ಘಟನೆ ನಡೆದು ಇಲ್ಲಿಗೆ ಎರಡು ವರ್ಷವಾಗಿದೆ ಹೌದು ಕಳೆದ ಎರಡು ವರ್ಷಗಳ ಹಿಂದೆ ಇದೇ ದಿನಾಂಕದಂದು ಚಿರು ಅವರು ಮನೆಯಲ್ಲಿ ಕುಸಿದು ಬಿದ್ದಿದ್ದರು. ಈ ಸಮಯದಲ್ಲಿ ಕುಟುಂಬಸ್ಥರು ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದರು ಆದರೆ ಒಂದು ಗಂಟೆ 30 ನಿಮಿಷದ ಸಮೀಪದಲ್ಲಿ ಅವರು ಕೊನೆಯುಸಿರೆಳೆದರು ಎಂಬ ಮಾಹಿತಿ ಹೊರಬಿದ್ದಿದೆ. ಈ ವಿಚಾರ ಕೇಳುತ್ತಿದ್ದ ಹಾಗೆ ಇಡೀ ಕರ್ನಾಟಕವೇ ಒಂದು ಕ್ಷಣ ನಿಶ್ಯಬ್ದವಾಗಿ ಹೋಯಿತು. ಅದರಲ್ಲಿಯೂ ಕೂಡ ಮೇಘನಾ ರಾಜ್ ಅವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಈಗ ಮೇಘನಾ ರಾಜ್ ಅವರು ತಮ್ಮ ಪತಿಯನ್ನು ನೆನಪಿಸಿಕೊಂಡು ಅವರ ಜೊತೆ ಇದ್ದಂತಹ ಫೋಟೋ ಒಂದನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಭಾವನಾತ್ಮಕ ಸಾಲುಗಳನ್ನು ಕೂಡ ಬರೆದುಕೊಂಡಿದ್ದಾರೆ ಈ ಸಾಲುಗಳನ್ನು ನೋಡಿದಂತಹ ಅಭಿಮಾನಿಗಳು ಹಾಗೂ ಚಿರಂಜೀವಿ ಸರ್ಜಾ ಅವರ ಆಪ್ತ ಸ್ನೇಹಿತರು ಒಂದು ಕ್ಷಣ ಕಣ್ಣೀರು ಇಟ್ಟಿದ್ದಾರೆ. ಅಷ್ಟಕ್ಕೂ ಮೇಘನಾ ರಾಜ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಏನು ಬರೆದುಕೊಂಡಿದ್ದಾರೆ ಎಂಬುವುದನ್ನು ನೋಡುವುದಾದರೆ. “ನೀನು ಮತ್ತು ನಾನು ಶಾಶ್ವತ ಈ ಭೂಮಿ ಇರುವ ತನಕವು ಕೂಡ ನಾವಿಬ್ಬರೂ ಒಟ್ಟಾಗಿ ಇರುತ್ತೇವೆ ಶಾರೀರಿಕವಾಗಿ ನೀವು ಇಲ್ಲದೆ ಇದ್ದರೂ ಕೂಡ ಮಾನಸಿಕವಾಗಿ ನನ್ನ ಹೃದಯದಲ್ಲಿ ಸದಾಕಾಲ ನೀವು ಜೀವಂತವಾಗಿ ಇರುತ್ತೀರ, ನನ್ನನ್ನು ನಿಮ್ಮಷ್ಟು ಪ್ರೀತಿಸಿದವರು ಯಾರು ಇಲ್ಲ ಹಾಗೆ ನಿಮ್ಮಂತೆ ಇರುವವರನ್ನು ನಾನು ಈ ಜೀವನದಲ್ಲಿ ಎಂದಿಗೂ ಯಾರನ್ನೂ ಕಂಡಿಲ್ಲ, ನೀನೆ ನನ್ನ ಪ್ರಪಂಚ ನೀನೆ ನನ್ನ ಸರ್ವಸ್ವ ಚಿರು ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ನನ್ನುಸಿರು ಇರುವರೆಗೂ ಕೂಡ ನನ್ನ ಪ್ರೀತಿ ನಿನಗೆ ಮಾತ್ರ ಸೀಮಿತ”

ಈ ರೀತಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡು ತಮ್ಮ ಪತಿಯೊಂದಿಗೆ ಇದ್ದಂತಹ ಫೋಟೋವೊಂದನ್ನು ಮೇಘನರಾಜ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದಂತಹ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಇನ್ನೂ ಕೆಲವೊಂದಷ್ಟು ಅಭಿಮಾನಿಗಳು ದೇವರಿಗೆ ಶಾಪವನ್ನು ಕೂಡ ಹಾಕಿದ್ದಾರೆ. ಏಕೆಂದರೆ ಇಷ್ಟು ಅನ್ಯೋನ್ಯತೆಯಿಂದ ಕೂಡಿದಂತಹ ದಂಪತಿಗಳನ್ನು ಯಾಕೆ ದೂರ ಮಾಡಿದೆ ಎಂದು ದೇವರನ್ನು ಶಪಿಸುತ್ತಿದ್ದಾರೆ. ಇನ್ನು ಮೇಘನಾ ಅವರ ಫೋಟೋಗಳನ್ನು ನೋಡಿದಂತಹ ಸ್ಯಾಂಡಲ್ ವುಡ್‌ ಹಲವಾರು ಸೆಲೆಬ್ರಿಟಿಗಳು ಹಾಗೂ ಸ್ಟಾರ್ ನಟ ನಟಿಯರು ಈ ಫೋಟೋಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಆದರೂ ಮೇಘಾನ ಅವರಿಗೆ ಇಷ್ಟು ಚಿಕ್ಕ ವಯಸ್ಸಿಗೆ ಇಂತಹ ನೋ’ವು ಕೊಟ್ಟಿದ್ದು ನಿಜಕ್ಕೂ ಶೋಚನೀಯ ಅಂತನೇ ಹೇಳಬಹುದು. ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಈ ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಮಾಹಿತಿ ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ.

 

Leave a Reply

Your email address will not be published. Required fields are marked *