ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಅವರು ಅವಳಿಗಂಡು ಮಕ್ಕಳಿಗೆ ಜನ್ಮ ಕೊಟ್ಟಿರುವುದು ನಿಮ್ಮೆಲ್ಲರಿಗೂ ಗೊತ್ತೇ ಇದೆ. ಕೆಲ ತಿಂಗಳ ಹಿಂದೆ ನಟಿಯ ಅಮೂಲ್ಯ ಅವರು ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಇರುವ ನಟಿ ಅಮೂಲ್ಯ.
ತಾವು ಗರ್ಭಿಣಿ ಆದಾಗಿನಿದ್ದರೂ ಇಂದಿನವರೆಗೂ ತಮ್ಮ ಎಲ್ಲಾ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆದಾಗ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತಿದ್ದರು. ಸದ್ಯ ನಟಿ ಅಮೂಲ್ಯವಾದದು ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.
ನಟಿ ಅಮೂಲ್ಯ ಅವರು ತಮ್ಮ ಮಕ್ಕಳಿಗೆ ತುಂಬಾ ಅರ್ಥಗರ್ಭಿತ ಸುಂದರ ಹೆಸರುಗಳನ್ನು ಇಟ್ಟಿದ್ದು, ತಮ್ಮ ಅವಳಿ ಮಕ್ಕಳ ನಾಮಕರಣ ಸಮಾರಂಭವನ್ನು ಬಹಳ ಅದ್ದೂರಿಯಾಗಿ ನೆರವೇರಿಸಿದ್ದಾರೆ. ಈ ನಾಮಕರಣ ಸಮಾರಂಭಕ್ಕೆ ಚಿತ್ರರಂಗದ ಅನೇಕ ಕಲಾವಿದರು ಭಾಗಿಯಾಗಿದ್ದರು.
ಇನ್ನು ಈ ನಾಮಕರಣ ಸಮಾರಂಭಕ್ಕೆ ಡಿ ಬಾಸ್ ದರ್ಶನ್ ಅವರು ಸಹ ಭಾಗಿಯಾಗಿದ್ದು ಅವಳಿ ಮಕ್ಕಳಿಗೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಹಾಗಾದರೆ ಡಿ ಬಾಸ್ ದರ್ಶನ್ ಕೊಟ್ಟ ಉಡುಗೊರೆ ಏನು ನೋಡೋಣ ಬನ್ನಿ.
ಸ್ಯಾಂಡಲ್ ವುಡ್ ಗೊಂಬೆ ಅಮೂಲ್ಯ ತಮ್ಮ ಕೌಟುಂಬಿಕ ಜೀವನದಲ್ಲಿ ಬಹಳ ಬಿಜಿಯಾಗಿದ್ದಾರೆ. ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಅಮೂಲ್ಯ ತಮ್ಮ ಮಕ್ಕಳ ಲಾಲನೆ ಪಾಲನೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಇದೀಗ ನಟಿ ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ನಾಮಕರಣ ಶಾಸ್ತ್ರ ಮಾಡಿದ್ದಾರೆ.
ತಮ್ಮ ಮಕ್ಕಳಿಗೆ ಅಥರ್ವ್ ಮತ್ತು ಆದರ್ವ್ ಎಂಬ ಹೆಸರುಗಳನ್ನು ಇಟ್ಟಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ನ ಕಲಾವಿದರು ಮತ್ತು ಸ್ನೇಹಿತರು ಸಾಕ್ಷಿಯಾಗಿದ್ದಾರೆ. ಮುದ್ದಾದ ಮಕ್ಕಳಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದ ಮುಖಾಂತರ ಶುಭ ಹಾರೈಸಿದ್ದಾರೆ.
ಇನ್ನು ಈ ಕಾರ್ಯಕ್ರಮಕ್ಕೆ ದರ್ಶನ್ ಕೂಡ ಆಗಮಿಸಿದ್ದು ಮಕ್ಕಳನ್ನು ನೋಡಿ ಮುಂದಾಗಿದ್ದಾರೆ. ಹಾಗೆ ಮಕ್ಕಳಿಗೆ ಚಿನ್ನದ ಬಳೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ದರ್ಶನ್ ಆಗಮನದಿಂದ ಅಮೂಲ್ಯ ಹಾಗೂ ಜಗದೀಶ್ ದಂಪತಿ ಬಹಳ ಸಂತಸಪಟ್ಟಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ….