ಮೊಮ್ಮಗ ರಾಯನ್ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಂಡ ನಟ ಸುಂದರ್ ರಾಜ್! ಏನದು ಗೊತ್ತಾ ನೋಡಿ…!!!

ಸ್ಯಾಂಡಲವುಡ್

ಸ್ಯಾಂಡಲ್ವುಡ್ ನಟ ಸುಂದರ್ ರಾಜ್ ಅವರದ್ದು ಕಲಾವಿದರ ಕುಟುಂಬ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚೆಗೆ ಚಿತ್ರದ ಈವೆಂಟ್ ಒಂದಕ್ಕೆ ಸಾತ್ ನೀಡಿದ್ದ ಸುಂದರ್ ರಾಜ್, ತಮ್ಮ ಮೊಮ್ಮಗ ರಾಯನ್ ರಾಜ್ ಸರ್ಜಾ ಬಗ್ಗೆ ಭವಿಷ್ಯ ನುಡಿದ್ದಿದ್ದಾರೆ.

ಸದ್ಯ ಸುಂದರ್ ರಾಜ್ ಹೇಳಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಜೊತೆಗೆ ಈ ವಿಷಯ ಕೇಳಿ ನತು ಮೇಘನಾ ರಾಜ್ ಕೂಡ ಬಹಳ ಭಾವುಕರಾಗಿದ್ದಾರೆ. ಹಾಗಾದರೆ ಸುಂದರ್ ರಾಜ್ ಹೇಳಿದ್ದೇನು ಎಂಬುದನ್ನು ತಿಳಿಸುತ್ತೇವೆ ಬನ್ನಿ..

ನಟಿ ಮೇಘನಾ ರಾಜ್ ದಕ್ಷಿಣ ಭಾರತ ಸಿನಿಮಾರಂಗದ ಟಾಪ್ ನಟಿಯರ ಪೈಕಿ ಒಬ್ಬರು. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಉತ್ತಮವಾಗಿ ಅಭಿನಯಿಸಿ ಬಹು ಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ನಟಿ ಮೇಘನಾ ಅವರು ಬೆಳೆದಿದ್ದು ಕೂಡ ಕಲಾವಿದರ ಕುಟುಂಬದಲೇ,

ಅಲ್ಲದೆ ನಟಿ ಮೇಘನಾ ರಾಜ್ ಸೊಸೆಯಾಗಿ ಸೇರಿದ್ದು ಕೂಡ ಕಲಾವಿದರ ಕುಟುಂಬಕ್ಕೆ. ಇನ್ನು ಈ ಎರಡು ಕುಟುಂಬಕ್ಕೂ ನಟನೆ ಎನ್ನುವುದು ರಕ್ತಗತವಾಗಿ ಬಂದಿದೆ. ಹಾಗಾಗಿ ಮೇಘನಾ ರಾಜ್ ಮಗ ರಾಯನ್ ಕೂಡ ನಟನಾ ಲೋಕಕ್ಕೆ ಬರುತ್ತಾನೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಈ ಹಿಂದೆ ಮೂಡಿತ್ತು.

ಇನ್ನು ಇದೀಗ ಮೇಘನಾ ರಾಜ್ ತಂದೆ ಸುಂದರ್ ರಾಜ್ ಸಿನಿ ಸಮಾರಂಭ ಒಂದರಲ್ಲಿ ಭಾಗಿಯಾಗಿದ್ದು, ಈ ವೇಳೆ ತಮ್ಮ ಮೊಮ್ಮಗ ಒಬ್ಬ ದೊಡ್ಡ ಸೂಪರ್ ಸ್ಟಾರ್ ಆಗುತ್ತಾನೆ ಎಂದು ಭವಿಷ್ಯ ನುಡಿದ್ದಿದ್ದಾರೆ. ಸದ್ಯ ಈ ಹೇಳಿಕೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸುನಾಮಿ ಕಿಟ್ಟಿ ಅವರ ಹೊಸ ಚಿತ್ರದ ಟ್ರೇಲರ್ ಲಾಂಚ್ ಸಮಾರಂಭಕ್ಕೆ ಬಂದ ಸುಂದರ್ ರಾಜ್, ಚಿತ್ರತಂಡಕ್ಕೆ ಶುಭ ಹಾರೈಸಿ, ಮಾಧ್ಯಮಗಳ ಮುಂದೆ ಮಾತನಾಡಿದ್ಡಾರೆ. ನನ್ನ ಕುಟುಂಬದಲ್ಲಿ ಎಲ್ಲರೂ ಕಲಾವಿದರೆ ಇದ್ದೇವೆ, ನಾನು, ನನ್ನ ಮಗಳು ಮೇಘನಾ ರಾಜ್, ಪ್ರಮೀಳಾ ಸೇರಿದಂತೆ

ಶಕ್ತಿ ಪ್ರಸಾದ್, ಚಿರಂಜೀವಿ ಸರ್ಜಾ, ಅರ್ಜುನ್ ಸರ್ಜಾ, ಧೃವ ಸರ್ಜಾ ಎಲ್ಲರೂ ಕಲಾವಿದರೆ. ಇದೀಗ ನನ್ನ ಮೊಮ್ಮಗ ಬಂದಿದ್ದಾನೆ. ಮುಂದೆ ಒಂದು ದಿನ ಅವನು ಕೂಡ ಸೂಪರ್ ಸ್ಟಾರ್ ಆಗುತ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *