ಡ್ರೋನ್ ಕಂಪನಿ ಓಪನ್ ಮಾಡ್ತೀನಿ ಕೆಲಸ ಇಲ್ದೇ ಇರೋರಿಗೆ ಕೆಲಸ ಕೊಡ್ತೀನಿ ಎಂದ ಡ್ರೋನ್ ಪ್ರತಾಪ್! ನೋಡಿ ವಿಡಿಯೋ!..

curious

ಕೆಲವು ತಿಂಗಳ ಹಿಂದೆ ಸೋಷಿಯಲ್ ಮೀಡಿಯಾ ಮಾತ್ರವಲ್ಲದೆ ಇಡೀ ಕರ್ನಾಟಕದ ಮಾಧ್ಯಮಗಳಲ್ಲಿ ಸದ್ದು ಮಾಡಿದ ಹೆಸರು ಎಂದರೆ ಅದು ಡ್ರೋನ್ ಪ್ರತಾಪ್. ತಾನು ಯಾರ ಸಹಾಯ ಇಲ್ಲದೆ ಡ್ರೋನ್ ಮಾಡಿ ವಿದೇಶದಲ್ಲಿ ನಮ್ಮ ಭಾರತವನ್ನು ಪ್ರತಿನಿಧಿಸುತ್ತಿರುವುದಾಗಿ ಸಾಕಷ್ಟು ಸುದ್ದಿಯಾಗಿತ್ತು.

ಕೆಲವು ದಿನಗಳ ನಂತರ ಈ ವ್ಯಕ್ತಿ ಒಬ್ಬ ಮೊಸಗಾರ ಆತ ಹೇಳಿದ್ದೆಲ್ಲಾ ಸುಳ್ಳು ಎನ್ನುವ ಸುದ್ದಿ ಕೂಡ ಕೇಳಿ ಬಂದಿತ್ತು. ಇನ್ನು ಈ ಸುದ್ದಿ ವೈರಲ್ ಆಗುತ್ತಲೇ ಡ್ರೋನ್ ಪ್ರತಾಪ್ ಅವರನ್ನು ಸಾಕಷ್ಟು ಜನ ಸಾಕಷ್ಟು ರೀತಿ ಟ್ರೋಲ್ ಮಾಡಿದ್ದರು. ಸದ್ಯ ಇಷ್ಟು ದಿನ ಸುಮ್ಮನಿದ್ದ ಡ್ರೋನ್ ಪ್ರತಾಪ್ ಇದೀಗ ಮತ್ತೊಮ್ಮೆ ಒಂದು ವಿಡಿಯೋ ಮಾಡಿ ಸುದ್ದಿಯಾಗಿದ್ದಾರೆ. ಹಾಗಾದರೆ ಡ್ರೋನ್ ಪ್ರತಾಪ್ ವಿಡಿಯೋದಲ್ಲಿ ಹೇಳಿದ್ದೇನು ನೀವೇ ನೋಡಿ…

ಡ್ರೋನಾರ್ ಕೇರೋ ಸ್ಪೇಸ್ ಎನ್ನುವ ಕಂಪನಿಯನ್ನು ಶುರು ಮಾಡುತ್ತಿದ್ದೇನೆ, ಬೆಂಗಳೂರು, ನಾಸಿಕ್, ಪೂಣೆ, ತುಳೆ ಈ ನಾಲ್ಕು ನಗರಗಳಲ್ಲಿ ಈ ಕಂಪನಿ ಶುರು ಮಾಡುತ್ತಿದ್ದೇವೆ. ನಾವು ವ್ಯವಸಾಯಕ್ಕೆ ಉಪಯೋಗಿಸುವಂತಹ ಡ್ರೋನ್ ಗಳನ್ನು ತಯಾರು ಮಾಡುತ್ತಿದ್ದೇವೆ.

ಇನ್ನು ಈಗಾಗಲೆ ಸಾಕಷ್ಟು ಆರ್ಡರ್ ಗಳು ಕೂಡ ಬಂದಿದೆ. ಇನ್ನು ಈ ಬಗ್ಗೆ ನಾವು ಸೋಷಿಯಲ್ ಮಿಡಿಯಾದಲ್ಲಿ ಅಂದರೆ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಖಾತೆಗಳನ್ನು ತೆರೆದಿದ್ದೇವೆ, ಹೆಚ್ಚಿನ ಮಾಹಿತಿಗಳಿಗಾಗಿ ಅದನ್ನು ಫಾಲೋ ಮಾಡಿ. ಇದರ ಮುಖ್ಯ ಉದ್ದೇಶ ಈಗಿನ ಯುವ ಪೀಳಿಗೆಗೆ ಒಂದು ಅವಕಾಶ ಮಾಡಿಕೊಡಬೇಕು ಎನ್ನುವುದು.

ಇನ್ನು ನಾವು ಈಗಾಗಲೇ 2 ಡ್ರೋನ್ ಗಳನ್ನು ತಯಾರಿಸಿದ್ದೇವೆ. ಇನ್ನು ಶೀಘ್ರದಲ್ಲೇ ಇದನ್ನು ಮಾರುಕಟ್ಟೆಗೆ ರಿಲೀಸ್ ಮಾಡಲಿದ್ದೇವೆ, ಬೇಕಾದವರು ಇದನ್ನು ಕೊಂಡು ಕೊಳ್ಳಬಹುದು. ನನ್ನ ಮುಖ್ಯ ಉದ್ದೇಶ ಡ್ರೋನ್ ಗಳನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಬಳಸಬೇಕು.

ಅದನ್ನು ವಿನಾಶಕ್ಕೆ ಬಳಸಬಾರದು, ಇನ್ನು ಈ ಡ್ರೋನ್ ಗಳನ್ನು ಮನುಷ್ಯನ ಉಪಯೋಗಕ್ಕೆ ಬಳಸಬೇಕು ಎನ್ನುವುದು ನನ್ನ ಉದ್ದೇಶ. ಇನ್ನು ಹಲವಾರು ಜನ ಹಲವಾರು ಬಗೆಯ ರೀತಿ ನನ್ನನ್ನು ಟ್ರೋಲ್ ಮಾಡಿದ್ದರು, ಮಾಡುತ್ತಾರೆ ಆದರೆ ಅದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.

ನಾನು ನಿಮಗೆ ನನ್ನ ಕೆಲಸದ ಮುಖಾಂತರ ಉತ್ತರ ನೀಡುತ್ತೇನೆ. ಟ್ರೋಲ್ ಮಾಡುವವರಿಗೆ ನಾನು ಏನು ಹೇಳುವುದಕ್ಕೆ ಇಷ್ಟ ಪಡುವುದಿಲ್ಲ. ನನ್ನನ್ನು ಪ್ರೀತಿಸುವ ಜನರಿದ್ದಾರೆ ಅಷ್ಟೇ ನನಗೆ ಸಾಕು ಎಂದಿದ್ದಾರೆ ಡ್ರೋನ್ ಪ್ರತಾಪ್. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *