ಜೀ ಕನ್ನಡ ವಾಹಿನಿ ತನ್ನ ಪ್ರೇಕ್ಷಕರ ಮನ ಗೆಲ್ಲಲು ಮೊದಲಿನಿಂದಲೂ ಯಾವುದಾದರೂ ಹೊಸ ಪ್ರಯತ್ನ ಮಾಡುತ್ತಲೇ ಇರುತ್ತದೆ. ಹಾಗೆ ಜೀ ಕನ್ನಡ ವಾಹಿನಿಯಲ್ಲಿ ಬರುವ ಬಹುತೇಕ ಎಲ್ಲಾ ದಾರವಾಹಿಗಳು ವೀಕ್ಷಕರ ಮನಸ್ಸಿಗೆ ಬಹಳ ಹತ್ತಿರವಾಗಿದೆ.
ಇದೇ ರೀತಿ ತನ್ನ ವಿಭಿನ್ನ ಕಥೆಯ ಮೂಲಕ ವೀಕ್ಷಕರ ಮನಸ್ಸಿಗೆ ಬಹಳ ಹತ್ತಿರವಾಗಿದ್ದ ಧಾರಾವಾಹಿ ಎಂದರೆ ಬ್ರಹ್ಮಗಂಟು. ಬ್ರಹ್ಮಗಂಟು ಧಾರವಾಹಿ ಪ್ರಸಾರವಾದ ಮೊದಲ ದಿನದಿಂದಲೂ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇನ್ನು ಈ ಧಾರಾವಾಹಿಯ ಪ್ರತಿಯೊಂದು ಪಾತ್ರ ಕೂಡ ಅಷ್ಟೇ ಜನಪ್ರಿಯತೆ ಪಡೆದುಕೊಂಡಿತ್ತು.
ಇನ್ನು ಈ ಧಾರಾವಾಹಿಯ ವಿಭಿನ್ನವಾದ ಕಥೆ ವೀಕ್ಷಕರಿಗೆ ಬಹಳ ಇಷ್ಟವಾಗಿತ್ತು. ಹೌದು ಒಬ್ಬ ದಪ್ಪ ಇರುವ ಹುಡುಗಿಯನ್ನು ತಂದೆಯ ಒಪ್ಪಿಗೆಯ ಮೇಲೆ ತನಗೆ ಇಷ್ಟವಿಲ್ಲದಿದ್ದರೂ ನಾಯಕ ಮದುವೆಯಾಗುತ್ತಾನೆ. ನಂತರ ಆ ಹುಡುಗಿ ಯಾವ ರೀತಿ ತನ್ನ ಗಂಡ ಹಾಗೂ ಅವರ ಮನೆಯವರನ್ನು ಒಲಿಸಿಕೊಳ್ಳುತ್ತಾಳೆ ಎನ್ನುವುದು ಧಾರವಾಹಿಯ ಕಥೆಯಾಗಿತ್ತು.
ಇನ್ನು ಈ ಧಾರಾವಾಹಿಯ ಮುಖ್ಯ ಹೈಲೈಟ್ ಎಂದರೆ, ಧಾರವಾಹಿಯ ನಾಯಕಿ ಪಾತ್ರಧಾರಿ ಗುಂಡಮ್ಮ, ಗೀತಾ ಭಟ್. ನಾಯಕಿ ಎಂದರೆ ತೆಳ್ಳಗಿರಬೇಕು, ಬೆಳ್ಳಗಿರಬೇಕು, ಸುಂದರವಾಗಿರಬೇಕು ಎನ್ನುವ ಸ್ಟಿರಿಯೋಟೈಪ್ ಅನ್ನು ಮುರಿದ ನಟಿ ಎಂದರೆ ಅದು ಗೀತಾ ಭಟ್.
ಗೀತಾ ಅವರು ತಾನು ದಪ್ಪ ಇದ್ದರೂ ಸಹ ಈ ಧಾರಾವಾಹಿಯಲ್ಲಿ ಅದ್ಭುತವಾಗಿ ಆ ಪಾತ್ರಕ್ಕೆ ತಕ್ಕಂತೆ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಇನ್ನು ಈ ಧಾರವಾಹಿಯ ನಂತರ ಗೀತಾ ಅವರು ಬಿಗ್ ಬಾಸ್ ಮನೆಗೂ ಸಹ ಎಂಟ್ರಿ ಕೊಟ್ಟಿದ್ದರು.
ಸದ್ಯ ಗೀತಾ ಅವರು ವರ್ಕ್ವಟ್ ಮೂಲಕ ತಮ್ಮ ಲುಕ್ ಅನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ. ಹೌದು ಗೀತಾ ಅವರು ಇದೀಗ ಬಾರಿ ಕಸರತ್ತು ಮಾಡಿ ತಮ್ಮ ದೇಹದ ಸಂಪೂರ್ಣ ತೂಕ ಇಳಿಸಿಕೊಂಡು, ಸ್ಲೀಮ್ ಆಗಿ ಬದಲಾಗಿದ್ದಾರೆ. ಸದ್ಯ ತಾನು ಬ್ರಹ್ಮಗಂಟು ಗುಂಡಮ್ಮ ಎನ್ನುವುದನ್ನು ಕಂಡು ಹಿಡಿಯಲು ಆಗುವುದಿಲ್ಲ ಅಷ್ಟರ ಮಟ್ಟಿಗೆ ಬದಲಾಗಿದ್ದಾರೆ.
ಸದ್ಯ ಗೀತಾ ಅವರು ಸ್ಲೀಮ್ ಆಗಿ ಹೊಸ ಗ್ಲಾಮರಸ್ ಫೋಟೋ ಶೂಟ್ ಮಾಡಿಸಿದ್ದಾರೆ. ಸದ್ಯ ಈ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…