ರೂಪೇಶ್ ಶೆಟ್ಟಿ ಫುಲ್ ಖುಷ್ : ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲಿದ್ದಾರೆ ಸಾನ್ಯಾ ಅಯ್ಯರ್!… ನೋಡಿ

Bigboss News

ಬಿಗ್ ಬಾಸ್ ಸೀಸನ್ 9 ಕಾರ್ಯಕ್ರಮ ಶುರುವಾಗಿ ಈಗಾಗಲೇ ಆರು ವಾರಗಳು ಕಳೆದು ಹೋಗಿದೆ. ಇದೀಗ 7 ನೆ ವಾರ ಚಾಲ್ತಿಯಲ್ಲಿದೆ. ಇದೀಗ ಬಿಗ್ ಬಾಸ್ ಶುರುವಾಗಿ ಅರ್ಧ ಜರ್ನಿ ಮುಗಿದಿರುವುದರಿಂದ ಬಿಗ್ ಬಾಸ್ ವೀಕ್ಷಕರು ವೈಲ್ಡ್ ಕಾರ್ಡ್ ಎಂಟ್ರಿ ನೀರಿಕ್ಷೇ ಮಾಡುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲಿ ಈ ಬಾರಿ ಬಿಗ್ ಬಾಸ್ ಗೆ ಯಾವ ಸ್ಪರ್ಧಿ ವೈಲ್ಡ್ ಕಾರ್ಡ್ ಆಗಿ ಬರಬಹುದು ಎನ್ನುವ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇದೆ. ಇನ್ನು ಈ ಬಾರಿ ವೈಲ್ಡ್ ಕಾರ್ಡ್ ಸ್ಪರ್ಧಿ ಬಂದರೆ ಅವರು ನವೀಣರಾಗಿರುತ್ತಾರಾ ಅಥವಾ,

ಪ್ರವೀಣರಾಗಿರುತ್ತಾರ ಎನ್ನುವ ಸಾಕಷ್ಟು ಪ್ರಶ್ನೆಗಳು ಇದೀಗ ಅಭಿಮಾನಿಗಳಲ್ಲಿ ಮೂಡಿದೆ. ಇನ್ನು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ ಯಾವಾಗ ಬರುತ್ತಾರೆ ಗೊತ್ತಿಲ್ಲ. ಆದರೆ ಸಾನಿಯಾ ಅಯ್ಯರ್ ಬಿಗ್ ಬಾಸ್ ಮನೆಗೆ ಮತ್ತೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮರಳಿದ್ದಾರಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡಿದೆ.

ಇದು ಯಾರ ಬಾಟಲ್ ಎಂದು ಊಹಿಸಿ, ಬೆಸ್ಟ್ ಫ್ರೆಂಡ್ ನಿನ್ನನ್ನು ಮತ್ತೆ ನೋಡಲು ನಾನು ಕಾಯುತ್ತಿದ್ದೇನೆ ಎಂದು ರೂಪೇಶ್ ಶೆಟ್ಟಿ ಅವರ ಬಾಟಲ್ ಹಿಡಿದು, ಸಾನ್ಯ ಅಯ್ಯರ್ ಸೋಷಿಯಲ್ ಮಿಡಿಯಾದಲ್ಲಿ, ತಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಹಾಗಾದರೆ ಬಿಗ್ ಬಾಸ್ ಮನೆಗೆ ಸಾನ್ಯಾ ಅಯ್ಯರ್ ಮತ್ತೆ ಹೋಗುತ್ತಿದ್ದಾರಾ ಎನ್ನುವ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಸಾನ್ಯಾ ಅಯ್ಯರ್ ಯಾವುದೇ ಮಾಧ್ಯಮದ ಮುಂದೆ ಕಾಣಿಸಿಕೊಂಡಿಲ್ಲ.

ಇದನ್ನೆಲ್ಲಾ ನೋಡಿದ ನೆಟ್ಟಿಗರು ಬಿಗ್ ಬಾಸ್ ಗೆ ಸಾನ್ಯ ಅಯ್ಯರ್ ಮತ್ತೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಡುತ್ತಾರೆ ಎಂದು ಊಹಿಸಿದ್ದಾರೆ. ಇನ್ನು ಟ್ವಿಟರ್ ನಲ್ಲಿ ಬ್ರಿಂಗ್ ಬ್ಯಾಕ್ ಸಾನಿಯಾ ಅಯ್ಯರ್ ಎನ್ನುವ ಟ್ವಿಟ್ ಸಾಕಷ್ಟು ಟ್ರೆಂಡಿಂಗ್ ನಲ್ಲಿದೆ. ಸಾನಿಯಾ ಅಯ್ಯರ್ ಅವರನ್ನು ಮತ್ತೆ ಬಿಗ್ ಬಾಸ್,

ಮನೆಗೆ ಕರೆ ತನ್ನಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಅಭಿಮಾನಿಗಳ ಬೇಡಿಕೆ ಈಡೇರುತ್ತಾ ಕಾದು ನೋಡಬೇಕು. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ, ಹಾಗೆ ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ…

Leave a Reply

Your email address will not be published. Required fields are marked *