ಅಪ್ಪು ಅವರು ಬಹಳ ಸರಳ ಸ್ವಭಾವದವರು ಎನ್ನುವ ವಿಷಯ ನಮ್ಮೆಲ್ಲರಿಗೂ ಗೊತ್ತೇ ಇದೆ. ಯಾರನ್ನು ಸಹ ಅಪ್ಪು ಭೇದ ಭಾವ ಮಾಡುತ್ತಿರಲಿಲ್ಲ. ಯಾವಾಗಲೂ ಎಲ್ಲರನ್ನು ಒಂದೇ ಎನ್ನುವ ರೀತಿ ನೋಡುತ್ತಿದ್ದರು ಅಪ್ಪು. ಆದರೆ ಇದೀಗ ಅಪ್ಪು ನಮ್ಮನ್ನು ಬಿಟ್ಟು ಆ ದೇವರ ಬಳಿ ಹೋಗಿದ್ದಾರೆ.
ಅಪ್ಪು ಅವರು ಯಾವುದೇ ಸ್ಟೇಟಸ್ ನೋಡದೆ ಎಲ್ಲರಲ್ಲೂ ಸಾಮಾನ್ಯರಂತೆ ಬೆರೆತು ಹೋಗುತ್ತಿದ್ದರು. ಯಾವುದೇ ವ್ಯಕ್ತಿ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಸಹ ತಾನು ಎಷ್ಟೇ ಬ್ಯುಸಿ ಇದ್ದರೂ ಸಹ ಆ ಕಾರ್ಯಕ್ರಮಕ್ಕೆ ಹೋಗಿ ಬರುತ್ತಿದ್ದರು.
ಇದೀಗ ಅಪ್ಪು ಇಲ್ಲದೆ ಅವರ ಬದಲಿಗೆ ಎಲ್ಲೆಡೆ ಅಶ್ವಿನಿ ಪುನೀತ್ ಅವರು ಹೋಗುತ್ತಿದ್ದಾರೆ. ಇದೀಗ ಕರ್ನಾಟಕ ಕಂದಾಯ ಸಚಿವ ಆರ್ ಅಶೋಕ್ ಅವರು ಅಶ್ವಿನಿ ಅವರನ್ನು ಅಪ್ಪು ಹೆಸರಿನ ರಸ್ತೆ ಉದ್ಘಾಟನಾ ಕಾರ್ಯಕ್ರಮಕ್ಕೆ ಅಹ್ವಾನಿಸಿದ್ದರು. ಅಲ್ಲಿಗೆ ಅಶ್ವಿನಿ ಮೇಡಂ ಅವರು ಸಹ ಭೇಟಿ ನೀಡಿದ್ದಾರೆ.
ಇನ್ನು ಅಲ್ಲಿ ಅಶ್ವಿನಿ ಅವರ ಕೈಯಲ್ಲಿ ಉದ್ಘಾಟನೆ ಮಾಡಿಸಲು ಯೋಚಿಸಿದ್ದ ಅವರು, ಈ ವೇಳೆ ಸ್ಕ್ರೀನ್ ಎಳೆಯುವಂತೆ ಎಷ್ಟೇ ಹೇಳಿದರೂ ನೋ ಪ್ರಾಬ್ಲಮ್ ನೀವೇ ಮಾಡಿ ಎಂದು ಸರಳತೆ ತೋರಿಸಿದ್ದಾರೆ. ಸದ್ಯ ಅಶ್ವಿನಿ ಮೇಡಂ ಅವರ ಈ ಗುಣ ನೋಡಿ ಎಲ್ಲರೂ ಫಿದಾ ಆಗಿದ್ದಾರೆ.
ನಂತರ ಅಲ್ಲಿಯ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ. ನಂತರ ನನಗೆ ಕೊಂಚ ಕೆಲಸ ಇದೆ ಬರ್ತೀನಿ ಎಂದು ಹೇಳಿ ಅಶ್ವಿನಿ ಅವರು ಅಲ್ಲಿಂದ ಹೊರ ಬಂದಿದ್ದಾರೆ. ಅಶ್ವಿನಿ ಅವರ ಈ ಸರಳ ಭಾವ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಸದ್ಯ ಅಶ್ವಿನಿ ಅವರ ಈ ಗುಣ ಕಂಡು ನೆಟ್ಟಿಗರು ಹಾಡಿ ಹೋಗಳುತ್ತಿದ್ದಾರೆ. ಅಪ್ಪು ರೀತಿಯೇ ಅಶ್ವಿನಿ ಅವರು ಕೂಡ ಸರಳ ಸ್ವಭಾವದವರು, ಅಪ್ಪು ಅವರ ಛಾಯೆ ನಮಗೆ ಇದೀಗ ಅಶ್ವಿನಿ ಮೇಡಂ ಅವರಲ್ಲಿ ಕಾಣುತ್ತಿದೆ ಎಂದು ಸಾಕಷ್ಟು ಜನ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಅಶ್ವಿನಿ ಮೇಡಂ ಅವರ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ, ಇನ್ನು ಈ ಪೋಸ್ಟ್ ಅನ್ನು ತಪ್ಪದೆ ಶೇರ್ ಮಾಡಿ…