ಬಿಗ್ ಬಾಸ್ ಕನ್ನಡ ಓಟಿಟಿ ಕಾರ್ಯಕ್ರಮದಲ್ಲಿ ಸಾನಿಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಆತ್ಮೀಯರಾದರು. ಬಿಗ್ ಬಾಸ್ ಕನ್ನಡ 8 ರಲ್ಲಿ ಸಹ ಇಬ್ಬರ ಆತ್ಮೀಯತೆ ಅದೇ ರೀತಿ ಮುಂದುವರೆಯಿತು. ಇದೀಗ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಅವರು ಎಲಿಮಿನೇಟ್ ಆಗಿದ್ದಾರೆ ಎಂದು ವಿಷಯ ತಿಳಿದ ತಕ್ಷಣ ರೂಪೇಶ್ ಶೆಟ್ಟಿ ಅವರನ್ನು ನೆನದು ಕಣ್ಣೀರು ಹಾಕಿದರು. ಮಿಸ್ ಯೂ ಸಾನಿಯಾ ಎಂದು ಒಂದು ಬಟ್ಟೆ ಮೇಲೆ ಬರೆದು ಅದನ್ನು ತಮ್ಮ ಹಣೆಯ ಮೇಲೆ ಕಟ್ಟಿಕೊಂಡು, ಇನ್ನು ತಮ್ಮ ಕೆನ್ನೆ ಮೇಲೆ ಹಾರ್ಟ್ ಶೇಪ್ ಪೈಂಟ್ ಮಾಡಿಸಿಕೊಂಡು,
ಸಾನಿಯಾ ಅವರ ಹೆಸರು ಬರೆಯಿಸಿಕೊಂಡರು. ಹಾಗಾದರೆ ರೂಪೇಶ್ ಶೆಟ್ಟಿ ಅವರು ಸಾನಿಯಾ ಅಯ್ಯರ್ ಅವರನ್ನು ಮದುವೆಯಾಗುತ್ತಾರಾ ಎನ್ನುವ ಒಂದು ಸಂಶಯ ಬಿಗ್ ಬಾಸ್ ಮನೆಯಲ್ಲಿರುವ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ಅವರಿಗೆ ಬಂದಿದೆ.
ಸದ್ಯ ಈ ಪ್ರಶ್ನೆಯನ್ನು ಪ್ರಶಾಂತ್ ಸಂಬರ್ಗಿ ನೇರವಾಗಿ ರೂಪೇಶ್ ಶೆಟ್ಟಿ ಅವರ ಬಳಿ ಕೇಳಿದ್ದಾರೆ. ಸದ್ಯ ಈ ಪ್ರಶ್ನೆಗೆ ರೂಪೇಶ್ ಶೆಟ್ಟಿ ಕೊಟ್ಟ ಉತ್ತರ ಏನು ಗೊತ್ತಾ? ಹಾಗಾದರೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತವೆ, ಈ ಪುಟವನ್ನು ಮುಂದಕ್ಕೆ ಓದಿ…
ಪ್ರಶಾಂತ್ ಸಂಬರ್ಗಿ ರೂಪೇಶ್ ಶೆಟ್ಟಿ ಅವರ ಬಳಿ ಬಂದು, ನಿನಗೆ ಒಂದು ಸೀರಿಯಸ್ ಪ್ರಶ್ನೆ ಕೇಳ್ತೀನಿ, ನಿಮ್ಮ ಕುಟುಂಬದವರು ಬಂದು ಸಾನಿಯಾ ಅವರನ್ನು ಒಪ್ಪಿಕೊಂಡರೆ, ಮುಂದಿನ ಮೂರು ವರ್ಷಗಳಲ್ಲಿ ಸಾನಿಯಾಳನ್ನು ಮದುವೆಯಾಗುತ್ತಿಯಾ ಎಂದಿದ್ದಾರೆ.
ಇನ್ನು ಇದಕ್ಕೆ ಉತ್ತರಿಸಿದ ರೂಪೇಶ್ ನಾನು ಇದರ ಬಗ್ಗೆ ಇನ್ನು ಯೋಚಿಸಿಲ್ಲ. ಇದಕ್ಕೆ ಪ್ರಶಾಂತ್ ಸಂಬರ್ಗಿ, ನಾಳೆ ನಾಳಿದ್ದು ಅಲ್ಲ, ಮುಂದಿನ ಮೂರು ವರ್ಷಗಳಲ್ಲಿ ಸಾನಿಯಾಳನ್ನು ನಿನ್ನ ಬಾಳ ಸಂಗಾತಿಯಾಗಿ ಕಾಣುವ ದೃಷ್ಠಿ ಕೋಣ ಇದಿಯಾ ಎಂದು ಮರು ಪ್ರಶ್ನೆ ಮಾಡಿದ್ದಾರೆ.
ಇನ್ನು ಇದಕ್ಕೆ ರೂಪೇಶ್ ಶೆಟ್ಟಿ, ಇನ್ನು ಯೋಚಿಸಲ್ಲ ಎಂದಿದ್ದಾರೆ. ಇದಕ್ಕೆ ರೂಪೇಶ್ ರಾಜಣ್ಣ, ಆ ಸಾಧ್ಯತೆ ಇದಿಯಾ ಎಂದು ಕೇಳಿದಾಗ, ನೋ ಎಂದು ಹೇಳಲ್ಲ, ಆದರೂ ಆಗಬಹುದು ಎನ್ನುವ ರೀತಿ ಉತ್ತರಿಸಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…