ಸದ್ಯ ಅಶ್ವಿನಿ ಪುನೀತ್ ಅವರು ಬಹಳ ಖುಷಿಯಲ್ಲಿದ್ದಾರೆ. ಹೌದು ಇದೀಗ ಅಶ್ವಿನಿ ಪುನೀತ್ ಅವರ ಮುಖದ ಮೇಲೆ ಅವರ ಮನೆಗೆ ಬಂದಿರುವ ಒಬ್ಬ ಸದಸ್ಯ ಖುಷಿ ತರಿಸಿದ್ದಾರೆ. ಅಷ್ಟಕ್ಕೂ ಯಾರಿದು ಎಂದು ನೋಡುವ ಕುತೂಹಲ ನಿಮಗೂ ಇದ್ದರೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..
ಪ್ರತಿಷ್ಠಿತ ಕಾವೇರಿ ಆಸ್ಪತ್ರೆ, ಸಾಯಿ ಸಂಗಮ್ ಡೈಯಗ್ನೊಸ್ಟಿಕ್ಸ್ ಹಾಗೂ ಹೆಲ್ತ್ ಕೇರ್ ವತಿಯಿಂದ ಅಪ್ಪು ಅವರ ಹೆಸರಿನಲ್ಲಿ ಹೆಲ್ತ್ ಪ್ಯಾಕೇಜ್ ಕಾರ್ಡ್ ಅನ್ನು ಕೊಡುತ್ತಿದ್ದಾರೆ. ಈ ಒಂದು ಕಾರ್ಡ್ ಮಾಡಿಸಿಕೊಳ್ಳುವುದರಿಂದ ಬಡವರಿಗೆ ತುಂಬಾ ಅನುಕೂಲವಾಗುತ್ತದೆ.
ನೆನ್ನೆ ಭಾನುವಾರ ಸಂಜೆ ಈ ಕಾರ್ಯಕ್ರಮದ ವಿಸ್ತರಣೆ ಮಾಡಲಾಗಿದೆ. ಅಪ್ಪು ಹೆಸರಿನ ಈ ಹೆಲ್ತ್ ಕಾರ್ಡ್ ಅನ್ನು ಐದು ಸಾವಿರ ಕುಟುಂಬಗಳಿಗೆ ನೀಡಲಾಗುತ್ತಿದೆ. ಈ ಒಂದು ಹೆಲ್ತ್ ಕಾರ್ಡ್ ಗೆ ಅಪ್ಪು ಅಮರ ಪ್ರಿವಿಲೇಜ್ ಹೆಲ್ತ್ ಕಾರ್ಡ್ ಎಂದು ಹೆಸರಿಡಲಾಗಿದೆ.
ಈ ಒಂದು ಕಾರ್ಡ್ ಅನ್ನು ಮಾಡಿಸಿಕೊಂಡರೆ, ಆರ್ಥಿಕವಾಗಿ ದುರ್ಭಲವಾಗಿರುವ ಸದ್ಯಸ್ಯರು ಉಚಿತವಾಗಿ ಶ-ಸ್ತ್ರ ಚಿಕಿತ್ಸೆಯನ್ನು ಕಾವೇರಿ ಅಸ್ಪತ್ರೆಯಲ್ಲಿ ಮಾಡಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಇನ್ನಿತರ ಸೌಲಭ್ಯಗಳನ್ನು ಸಹ ಪಡೆದುಕೊಳ್ಳಬಹುದು.
ಹೌದು ಕೇವಲ ಕಾವೇರಿ ಆಸ್ಪತ್ರೆಯಲ್ಲಿ ಮಾತ್ರವಲ್ಲ, ಯಾವುದೇ ಆಸ್ಪತ್ರೆಯಲ್ಲಿ ಸಹ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು ಎನ್ನಲಾಗುತ್ತಿದೆ. ಇನ್ನು ಈ ಕಾರ್ಡ್ ಅನ್ನು ಯಾರಾದರೂ ಕುಟುಂಬದವರು ಆರ್ಥಿಕವಾಗಿ ಸರಿ ಇಲ್ಲದಿದ್ದರೆ, ಅವರು ಈ ಕಾರ್ಡ್ ನ ಸಂಪೂರ್ಣ ಲಾಭ ಪಡೆಯಬಹುದು.
ಜಯನಗರದಲ್ಲಿರುವ ಸಾಯಿ ಸಂಗಮ ಹೆಲ್ತ್ ಕೇರ್ ಗೆ ಭೇಟಿ ನೀಡಿ ಯಾರು ಬೇಕಾದರೂ ಈ ಕಾರ್ಡ್ ಅನ್ನು ಮಾಡಿಸಿಕೊಳ್ಳಬಹುದು. ಇನ್ನು ಈ ಕಾರ್ಯಕ್ರಮಕ್ಕೆ ಈ ತಂಡದವರು ಸ್ವತಃ ಅಪ್ಪು ಪತ್ನಿ ಅಶ್ವಿನಿ ಅವರನ್ನು ಆಹ್ವಾನಿಸಿದ್ದಾರೆ. ಇನ್ನು ಅಪ್ಪು ಹೆಸರಿನಲ್ಲಿ ನಡೆಯುತ್ತಿರುವ ಈ ಕೆಲಸ ನೋಡಿ,
ಅಶ್ವಿನಿ ಅವರು ಕೂಡ ಬಹಳ ಸಂತಸ ಪಟ್ಟಿದ್ದಾರೆ. ಇನ್ನು ತಂಡದವರಿಗೆ ಆಲ್ ಧೀ ಬೆಸ್ಟ್ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೀರಿ, ಹೀಗೆ ಇದನ್ನು ಮುಂದುವರೆಸಿಕೊಂಡು ಹೋಗಿ ಎಂದು ಶುಭಾಶಯಗಳು ತಿಳಿಸಿದ್ದಾರೆ ಅಶ್ವಿನಿ ಪುನೀತ್. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..