ವೇದಿಕೆ ಮೇಲೆ ಅಶ್ವಿನಿ ಪುನೀತ್ ಅವರ ಎದುರು ಚಿರು ಸಾ-ವಿನ ರಹಸ್ಯ ಬಿಚ್ಚಿಟ್ಟ ಸುಂದರ್ ರಾಜ್!… ಹೇಳಿದ್ದೇನು ಗೊತ್ತಾ ನೋಡಿ

ಸ್ಯಾಂಡಲವುಡ್

ಅಪ್ಪು ಅವರು ನಮ್ಮ ಜೊತೆಗಿಲ್ಲ ಎನ್ನುವುದು ಇಂದಿಗೂ ಸಹ ಎಲ್ಲರಿಗೂ ಬೇಸರ ಉಂಟು ಮಾಡುತ್ತದೆ. ಅದೆಷ್ಟೋ ಜನರ ನೆರವಿಗೆ ನಿಂತಿದ್ದರು. ಅದೆಷ್ಟೋ ಜನರ ಕಷ್ಟಗಳನ್ನು ಪರಿಹರಿಸುವಲ್ಲಿ ಅವರು ಮುಂದಿದ್ದರು. ಆದರೆ ಇದೀಗ ಅಪ್ಪು ಇಲ್ಲದೆ ಸಾಕಷ್ಟು ಜನರು ಅನಾಥರಾಗಿದ್ದಾರೆ.

ಸದ್ಯ ಅಪ್ಪು ಅವರು ಇಲ್ಲದೆ ಇದ್ದರೂ ಅವರು ನಡೆದುಹೋದಂತಹ ದಾರಿಯಲ್ಲಿ ಇದೀಗ ಅವರ ಅಭಿಮಾನಿಗಳು ನಡೆಯುತ್ತಿದ್ದಾರೆ. ಹೌದು ಅಪ್ಪು ಅವರ ಅಭಿಮಾನಿಗಳು ಇದೀಗ ಅಪ್ಪು ಅವರ ಹೆಸರಿನಲ್ಲಿ ದಿನಕ್ಕೊಂದು ಸಾಮೂಜಿಕ ಕೆಲಸ ಮಾಡುತ್ತಾ, ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

ಇನ್ನು ಈ ರೀತಿಯ ಕೆಲಸಗಳಿಗೆ ಅದೆಷ್ಟೋ ಕಲಾವಿದರು ಹಾಗೂ ದೊಡ್ಡ ದೊಡ್ಡ ಉದ್ಯಮಿಗಳು ಸಹ ಕೈ ಜೋಡಿಸಿದ್ದಾರೆ. ಇನ್ನು ಇತ್ತೀಚೆಗೆ ಅಪ್ಪು ಅವರ ಹೆಸರಿನಲ್ಲಿ ಕಾವೇರಿ ಆಸ್ಪತ್ರೆಯವರು ಅಪ್ಪು ಹೆಲ್ತ್ ಕಾರ್ಡ್ ನೀಡುತ್ತಿರುವ ವಿಷಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿತ್ತು.

ಇನ್ನು ಈ ಕಾರ್ಡ್ ಬಳಸಿಕೊಂಡು ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದ್ದರು. ಇನ್ನು ಈ ಕಾರ್ಯಕ್ರಮಕ್ಕೆ ಅಶ್ವಿನಿ ಅವರನ್ನು ಮುಖ್ಯ ಅಥಿತಿಯಾಗಿ ಆಹ್ವಾನಿಸಲಾಗಿತ್ತು. ಇನ್ನು ಇದೆ ಕಾರ್ಯಕ್ರಮಕ್ಕೆ ನಟಿ ಮೇಘನಾ ರಾಜ್ ತಂದೆ ಸುಂದರ್ ರಾಜ್ ಕೂಡ ಅಥಿತಿಯಾಗಿ ಆಗಮಿಸಿದ್ದಾರೆ.

ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಅಪ್ಪು ರೀತಿಯೇ ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ಕೂಡ ಚಿಕ್ಕ ವಯಸ್ಸಿನಲ್ಲೆ ಬಾರದ ಲೋಕಕ್ಕೆ ಹೋಗಿದ್ದಾರೆ. ಇನ್ನು ಇದೀಗ ಅಪ್ಪು ಅವರ ಹೆಸರಿನ ಹೆಲ್ತ್ ಕಾರ್ಡ್ ವಿತರಣೆ ಕಾರ್ಯಕ್ರಮಕ್ಕೆ ಬಂದಿದ್ದ ಸುಂದರ್ ರಾಜ್, ಚಿರು ಅವರನ್ನು ನೆನೆದು ಬೇಸರಗೊಂಡಿದ್ದಾರೆ.

ವೇದಿಕೆ ಮೇಲೆ ಮಾತನಾಡುತ್ತಾ ಸುಂದರ್ ರಾಜ್ ಅಪ್ಪು ಅವರ ಹೆಸರಿನ ಹೆಲ್ತ್ ಕಾರ್ಡ್ ಬಡವರಿಗೆ ಬಹಳ ಉಪಯೋಗವಾಗಲಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಎಲ್ಲರಿಗೂ ತಿಳಿಸಿದ್ದಾರೆ. ಹೀಗೆ ಮಾತನಾಡುತ್ತಾ ಸುಂದರ್ ರಾಜ್ ಅವರು ತಮ್ಮ ಅಳಿಯ ಚಿರಂಜೀವಿ ಸರ್ಜಾ ಅವರನ್ನು ನೆನೆದು ಬೇಸರಗೊಂಡಿದ್ದಾರೆ.

ಸದ್ಯ ಚಿರು ಅವರನ್ನು ನೆನದು ಸುಂದರ್ ರಾಜ್ ವೇದಿಕೆ ಮೇಲೆ ಭಾವುಕರಾಗಿದ್ದಾರೆ. ಕೋವಿಡ್ ಸಮಯದಲ್ಲಿ ಎಲ್ಲರೂ ಬೆಡ್ ಸಿಗದೆ ಒದ್ದಾಡುತ್ತಿದ್ದರು, ಅಂದು ನಮಗೆ ಸ್ವಲ್ಪ ಬೇಗ ಒಂದು ಬೆಡ್ ಸಿಕ್ಕಿದರೆ, ಇಂದು ಈ ಸ್ಥಿತಿ ಇರುತ್ತಿರಲಿಲ್ಲ ಎಂದಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

Leave a Reply

Your email address will not be published. Required fields are marked *