ಅಭಿಮಾನಿಗಳಿಗೆ ಮತ್ತೆ ಸಿಹಿಸುದ್ದಿ ನೀಡಿದ ಡಿ-ಬಾಸ್

ಸ್ಯಾಂಡಲವುಡ್

ದರ್ಶನ್ ಅವರನ್ನು ಸ್ಯಾಂಡಲ್ ವುಡ್‌ ಕಿಂಗ್ ಎಂದೆ ಹೇಳಬಹುದು ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವಂತಹ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಹೆಸರನ್ನು ಮಾಡಿದ್ದಾರೆ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ದರ್ಶನ್ ಅವರಿಗೆ ಅಭಿಮಾನಿಗಳು ಇಂದಿಗೂ ಸಹ ಹೆಚ್ಚುತ್ತಲೇ ಇದ್ದಾರೆ. ದರ್ಶನ್ ಅವರ ಚಿತ್ರಗಳನ್ನು ನೋಡಲು ಸಾಕಷ್ಟು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ದರ್ಶನ್ ಅವರ ತಂದೆ ತೂಗುದೀಪ್ ಶ್ರೀನಿವಾಸ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ ಇವರು ಖಳನಾಯಕನಾಗಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ತೂಗುದೀಪ್ ಶ್ರೀನಿವಾಸ್ ಎಂದರೆ ಎಲ್ಲರಿಗೂ ಸಹ ಗೊತ್ತೇ ಇರುತ್ತದೆ. ದರ್ಶನ್ ಅವರು ತೂಗುದೀಪ್ ಶ್ರೀನಿವಾಸ್ ಅವರ ಹಿರಿಯ ಮಗ, ದರ್ಶನ್ ಅವರು ಚಿತ್ರರಂಗಕ್ಕೆ ಬರುವಂತಹ ಸಂದರ್ಭದಲ್ಲಿ ಸಾಕಷ್ಟು ರೀತಿಯಾದ ಕಷ್ಟಗಳನ್ನು ಎದುರಿಸಿದ್ದಾರೆ ದರ್ಶನ್ ಅವರು ಚಿತ್ರರಂಗಕ್ಕೆ ಬರುವುದು ತೂಗುದೀಪ್ ಶ್ರೀನಿವಾಸ್ ಅವರಿಗೆ ಇಷ್ಟ ಇರುವುದಿಲ್ಲ.

ದರ್ಶನ್ ಅವರ ಜನ್ಮನಾಮ ಹೇಮಂತ್ ಕುಮಾರ್ ನಂತರದಲ್ಲಿ ಇವರು ದರ್ಶನ್ ಎಂದು ಅವರ ಹೆಸರನ್ನು ಬದಲಾಯಿಸಿ ಕೊಳ್ಳುತ್ತಾರೆ. ದರ್ಶನ್ ಅವರು 1977 ರಂದು ಫೆಬ್ರವರಿ 16ರಂದು ಶಿವರಾತ್ರಿಯ ದಿನ ಜನಿಸಿದರು. ತೂಗುದೀಪ್ ಶ್ರೀನಿವಾಸ್ ಅವರು ಚಿತ್ರರಂಗದಲ್ಲಿದ್ದು ಅವರು ತಮ್ಮ ಮಕ್ಕಳು ಮತ್ತು ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡು ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದರು, ಆದರೆ ತೂಗುದೀಪ್ ಶ್ರೀನಿವಾಸ್ ಅವರಿಗೆ ಕಿಡ್ನಿ ವೈಫಲ್ಯದಿಂದ ಅವರು ಹಾಸಿಗೆಯನ್ನು ಹಿಡಿಯುತ್ತಾರೆ ನಂತರದಲ್ಲಿ ಅವರ ಯಾವುದೇ ಚಿತ್ರಗಳಲ್ಲಿ ನಟಿಸಲು ಆಗುವುದಿಲ್ಲ ಅಂತಹ ಸಂದರ್ಭದಲ್ಲಿ ಈ ಕುಟುಂಬವನ್ನು ನೋಡಿಕೊಳ್ಳಲಿ ತುಂಬಾ ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ದರ್ಶನ್ ಅವರು ಚಿತ್ರರಂಗಕ್ಕೆ ಹೋಗಿ ಹೆಸರನ್ನು ಮಾಡಬೇಕು ಎನ್ನುವ ಹಠವನ್ನು ಹೊಂದಿರುತ್ತಾರೆ ನೀನಾಸಂ ಗೆ ಸೇರಿಕೊಳ್ಳುತ್ತಾರೆ. ತದನಂತರದಲ್ಲಿ ದರ್ಶನ್ ಅವರು ಅಭಿನಯ ಮಾಡಲೆಂದು ಬೆಂಗಳೂರಿಗೂ ಸಹ ಬರುತ್ತಾರೆ ಆದರೆ ದರ್ಶನ್ ಅವರು ಅಂದುಕೊಂಡಂತೆ ಯಾವುದೇ ರೀತಿಯಾದಂತಹ ಚಾನ್ಸ್ ಗಳು ಇವರಿಗೆ ಸಿಗದ ಕಾರಣ ಚಿತ್ರರಂಗದಲ್ಲಿ ಲೈಟ್ ಬಾಯ್ ಆಗಿ ಅವರು ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ನಂತರ ಇವರು ಅಸಿಸ್ಟೆಂಟ್ ಕ್ಯಾಮರಾಮನ್ ಆಗಿಯು ಸಹ ಕೆಲಸಮಾಡುತ್ತಾರೆ, ದರ್ಶನ್ ರವರು ಮಹಾಭಾರತ ಎಂಬ ಸಿನಿಮಾದಲ್ಲಿ ನಟಿಸುತ್ತಾರೆ ಆದರೆ ಇದು ಅವರಿಗೆ ಹೆಚ್ಚಿನದೇನು ಹೆಸರನ್ನು ತಂದುಕೊಡುವುದಿಲ್ಲ, ನಂತರದಲ್ಲಿ ಇವರು ಡಿಟೆಕ್ಟಿವ್ ಚಂದ್ರಕಾಂತ್ ಎಂಬ ಸೀರಿಯಲ್ ನಲ್ಲೂ ಸಹ ನಟಿಸುತ್ತಾರೆ ಹಾಗೆಯೆ ಅಂಬಿಕಾ ಎಂಬ ಧಾರಾವಾಹಿಯಲ್ಲಿ ನಟಿಸಿ ಸೊಲ್ಪ ಮಟ್ಟಿಗೆ ಗುರುತಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ದರ್ಶನ್ ಅವರು ಪೋಷಕ ಪಾತ್ರಗಳಲ್ಲಿ ಸಹ ನಟನೆಯನ್ನು ಮಾಡುತ್ತಾರೆ ನಂತರದಲ್ಲಿ ಇವರು ಪಿ ಎಸ್ ಸತ್ಯ ಅವರ ನಿರ್ದೇಶನ ಮಾಡಿರುವಂತಹ ಮೆಜೆಸ್ಟಿಕ್ ಎಂಬ ಚಿತ್ರದ ಮೂಲಕ ನಾಯಕ ನಟನಾಗಿ ನಮ್ಮ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ದರ್ಶನ್ ಅವರು ಅಭಿನಯಿಸಿರುವಂತಹ ಈ ಒಂದು ಮೆಜೆಸ್ಟಿಕ್ ಸಿನಿಮಾ ಅತ್ಯದ್ಭುತ ವಾದಂತಹ ಪ್ರದರ್ಶನವನ್ನು ಕಾಣುತ್ತದೆ ಅಂದಿನ ದಿನಗಳಲ್ಲಿ ಶತದಿನಗಳನ್ನು ಪೂರೈಸಿದ ಹೆಗ್ಗಳಿಗೆ ಪಡೆಯುತ್ತದೆ. ತದನಂತರದಲ್ಲಿ ದರ್ಶನ್ ಅವರು ಕರಿಯಾ, ಕಲಾಸಿಪಾಳ್ಯ, ಅನಾಥರು, ಈ ಬಂಧನ, ಅಯ್ಯಾ, ಮಂಡ್ಯ, ಗಜಾ, ಸಾರಥಿ, ಬುಲ್ ಬುಲ್, ಬೃಂದಾವನ, ಅಂಬರೀಶ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟ ಎಂದು ಗುರುತಿಸಿಕೊಳ್ಳುತ್ತಾರೆ.

ನಂತರದಲ್ಲಿ ಇವರು ತೂಗುದೀಪ ಪ್ರೊಡಕ್ಷನ್ಸ್ ಪ್ರಾರಂಭಮಾಡಿ ಸಾಕಷ್ಟು ಚಿತ್ರಗಳನ್ನು ತೂಗುದೀಪ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾಗಳನ್ನು ನಿರ್ಮಾಣ ಸಹ ಮಾಡುತ್ತಾರೆ. ಹೀಗೆ ದರ್ಶನ್ ಅವರು ತಮ್ಮ ಜೀವನದಲ್ಲಿ ಸಾಕಷ್ಟು ರೀತಿಯಾದಂತಹ ಏಳು ಬೀಳುಗಳನ್ನು ಕಂಡರೂ ಮುಂದಿನ ದಿನಗಳಲ್ಲಿ ಯಶಸ್ಸನ್ನೇ ಕಾಣುತ್ತ ಬಂದವರು. ಇವರು ನಟಿಸಿರುವಂತಹ ಎಲ್ಲಾ ಸಿನಿಮಾಗಳು ಸಹ ಉತ್ತಮವಾದಂತಹ ಪ್ರದರ್ಶನಗಳನ್ನು ಕಾಣುತ್ತವೆ. ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳ ಮೇಲೆ ಹೆಚ್ಚಿನ ಒಲವು ಇವರು ಪ್ರಾಣಿ ಪಕ್ಷಿಗಳಿಗಾಗಿ ಒಂದು ಸಪರೇಟ್ ಆದಂತಹ ಫಾರ್ಮ್ ಹೌಸ್ ಕೂಡ ನಡೆಸುತ್ತಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಪ್ರಾಣಿ ಮತ್ತು ಪಕ್ಷಿಗಳ ಜೊತೆ ಸಮಯವನ್ನು ಕಳೆಯುತ್ತಾರೆ. ದರ್ಶನ್ ಅವರು ವಿಜಯಲಕ್ಷ್ಮಿ ಎಂಬುವವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಇವರಿಗೆ ವಿನೇಶ್ ಎಂಬಂತಹ ಒಬ್ಬ ಮುದ್ದಾದ ಗಂಡು ಮಗ ಸಹ ಇದ್ದಾರೆ, ದರ್ಶನ್ ಅವರಿಗೆ ಕಾರು ಮತ್ತು ಬೈಕ್ ಮೇಲೆ ಕ್ರೇಜ್ ಹೆಚ್ಚಾಗಿದೆ.

ಇತ್ತೀಚಿಗೆ ದರ್ಶನ್ ಅವರು ರೇಂಜ್ ರೋರರ್ ಎಂಬಂತಹ ಹೊಸ ಕಾರನ್ನು ತೆಗೆದುಕೊಂಡಿದ್ದು ಇದರ ಬೆಲೆ ಒಂದು ಕೋಟಿಗೂ ಅಧಿಕವಾಗಿದೆ. ದರ್ಶನ್ ಅವರಿಗೆ ದೇವರ ಮೇಲೆ ಅಪಾರವಾದಂತಹ ಭಕ್ತಿ ಇವರು ಮೂಲತಃ ಮೈಸೂರಿನವರು ಆಗಿದ್ದು ಚಾಮುಂಡೇಶ್ವರಿ ಅವರ ಮೇಲೆ ಹೆಚ್ಚಿನ ಭಕ್ತಿಯನ್ನು ಇವರು ಹೊಂದಿದ್ದಾರೆ. ತಮ್ಮ ಮನೆಯಲ್ಲಿ ಯಾವುದೇ ಶುಭಕಾರ್ಯ, ಯಾವುದೇ ಹಬ್ಬಗಳು ಬಂದವರು ಚಾಮುಂಡೇಶ್ವರಿ ತಾಯಿಯ ಪೂಜೆಯನ್ನು ಸಲ್ಲಿಸುತ್ತಾರೆ, ಇದೀಗ ಖರೀದಿಸಿರುವ ರೇಂಜ್ ರೋವರ್ ಎಂಬ ಕಾರನ್ನು ದರ್ಶನ್ ಅವರು ಚಾಮುಂಡೇಶ್ವರಿ ತಾಯಿಯ ಸನ್ನಿಧಿಗೆ ತೆಗೆದುಕೊಂಡು ಹೋಗಿ ಪೂಜೆಯನ್ನು ಸಲ್ಲಿಸಿದರು. ದರ್ಶನ್ ಅವರು ಯಾವುದೇ ಕಾರನ್ನು ತೆಗೆದುಕೊಂಡರೂ ಅದನ್ನು ಚಾಮುಂಡೇಶ್ವರಿ ತಾಯಿಯ ಬಳಿ ಹೋಗಿ ಪೂಜೆಯನ್ನು ಸಲ್ಲಿಸಿ ಬರುತ್ತಾರೆ.

Leave a Reply

Your email address will not be published. Required fields are marked *