ನಮ್ಮ ಕನ್ನಡ ಚಿತ್ರರಂಗಕ್ಕೆ ಅದ್ಯಾರ ಕಣ್ಣು ಬಿತ್ತೋ ಏನೋ ಇತ್ತೀಚೆಗೆ ಒಬ್ಬರಾದ ಮೇಲೆ ಒಬ್ಬ ಅದ್ಭುತ ನಟರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಅನಾಥವಾಗಿದೆ ಎಂದರೆ ತಪ್ಪಾಗುವುದಿಲ್ಲ. ಕೋಟಿ ರಾಮು, ಚಿರಂಜೀವಿ ಸರ್ಜಾ, ಪುನೀತ್ ರಾಜ್ ಕುಮಾರ್ ಸೇರಿದಂತೆ ಸಾಕಷ್ಟು ಜನ ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿ ಬಿಟ್ಟಿದ್ದಾರೆ.
ಚಿರು ಸರ್ಜಾ ಅವರು ನಮ್ಮನ್ನು ಬಿಟ್ಟು ಹೋಗಿ ಈಗಾಗಲೇ ಎರಡು ವರ್ಷ ಕಳೆದು ಹೋಗಿದೆ. ಇನ್ನು ಚಿರು ಸರ್ಜಾ ಅವರ ನಿ*ಧ*ನದ ಸಮಯದಲ್ಲಿ ಮೇಘನಾ ರಾಜ್ ತುಂಬು ಗರ್ಭಿಣಿಯಾಗಿದ್ದರು. ಮೇಘನಾ ರಾಜ್ ನೋವು ಯಾರಿಂದಲೂ ಸಹ ಊಹಿಸಲು ಸಾಧ್ಯವಿಲ್ಲ.
ಇನ್ನು ಮೇಘನಾ ರಾಜ್ ಅವರು ರಾಯನ್ ರಾಜ್ ಸರ್ಜಾನಿಗೆ ಜನ್ಮ ಕೊಟ್ಟು, ರಾಯನ್ ನಲ್ಲಿ ಚಿರು ಅವರನ್ನು ನೋಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಸದ್ಯ ಮೇಘನಾ ರಾಜ್ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದು, ಸದ್ಯ ಈ ವಿಷಯ ಅವರ ಅಭಿಮಾನಿಗಳಿಗೆ ತುಂಬಾ ಖುಷಿ ತಂದು ಕೊಟ್ಟಿದೆ.
ಮೇಘನಾ ರಾಜ್ ಅವರು ಇದೀಗ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಚಿತ್ರರಂಗದಲ್ಲಿ ಸಕತ್ ಬ್ಯುಸಿಯಾಗಿದ್ದಾರೆ. ಇದೀಗ ನಟಿ ಮೇಘನಾ ರಾಜ್ ಕೆಲ ದಿನಗಳ ಕಾಲ ಎಲ್ಲದರಿಂದ ಬ್ರೇಕ್ ತೆಗೆದುಕೊಂಡು ತಮ್ಮ ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ಹೋಗಿದ್ದಾರೆ.
ಸದ್ಯ ನಟಿ ಮೇಘನಾ ರಾಜ್ ಇದೀಗ ತಮ್ಮ ಸ್ನೇಹಿತರ ಜೊತೆಗೆ ಥೈಲ್ಯಾನ್ಡ್ ನಲ್ಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ನಟಿ ಅಲ್ಲಿನ ಕೆಲ ಫೋಟೋಗಳನ್ನು ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ನೋಡಿ ಕೆಲವರು ಖುಷಿ ಪಟ್ಟರೆ, ಇನ್ನು ಕೆಲವರು ತಮ್ಮ ಮಗ ಮತ್ತು ಪೋಷಕರನ್ನು ಬಿಟ್ಟು ಎಂಜಾಯ್ ಮಾಡುತ್ತಿದ್ದಾರೆ ಎಂದು ನೆಗಟಿವ್ ಕಾಮೆಂಟ್ಸ್ ಮಾಡಿದ್ದರು.
ಇದೀಗ ಈ ರೀತಿಯ ಕಾಮೆಂಟ್ಸ್ ಗಳಿಗೆ ಮೇಘನಾ ರಾಜ್ ತಂದೆ ಸುಂದರ್ ರಾಜ್ ಉತ್ತರಿಸಿದ್ದಾರೆ. ಸದ್ಯ ಸಿನಿಮಾದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಸುಂದರ್ ರಾಜ್, ನನ್ನ ಮಗಳು ಸದ್ಯ ಎಲ್ಲಾ ನೋವನ್ನು ಮರೆತು ಇದೀಗ ಮತ್ತೆ ಜೀವನ ಶುರು ಮಾಡಿದ್ದಾಳೆ. ಇದೀಗ ಅವಳು ಥೈಲ್ಯಾನ್ಡ್ ನಲ್ಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾಳೆ.
ಇದನ್ನು ನೋಡಿ ಕೆಲವರು ಇಲ್ಲ ಸಲ್ಲದ ರೀತಿ ಮಾತನಾಡುತ್ತಿದ್ದರು, ಈ ಸಮಯದಲ್ಲಿ ನಮ್ಮ ನೆರವಿಗೆ ವಾಣಿಜ್ಯ ಮಂಡಳಿ ಬಂತು ಎಂದಿದ್ದಾರೆ. ಸದ್ಯ ಸುಂದರ್ ರಾಜ್ ಮಾತುಗಳು ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…