ಐರಾ ಯಥರ್ವ್ ಕ್ಯೂಟ್ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್ ಇಲ್ಲಿದೇ ನೋಡಿ ವಿಡಿಯೋ!..

ಸ್ಯಾಂಡಲವುಡ್

ಕನ್ನಡ ಚಿತ್ರರಂಗದ ಉತ್ತಮ ನಟಿಯರ ಪೈಕಿ ನಟಿ ರಾಧಿಕಾ ಪಂಡಿತ್ ಸಹ ಒಬ್ಬರು. ತಮ್ಮ ಅದ್ಭುತ ನಟನೆ ಹಾಗೂ ಗ್ಲಾಮರ್ ನ ಮೂಲಕ ನಟಿ ರಾಧಿಕಾ ಪಂಡಿತ್ ಸಾಕಷ್ಟು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ನಟಿ ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ನಟಿಯರ ಪೈಕಿ ಅತಿ ಹೆಚ್ಚು ಅಭಿಮಾನಿಗಳನ್ನು ಕೂಡ ಸಂಪಾದಿಸಿಕೊಂಡಿದ್ದಾರೆ.

ನಟಿ ರಾಧಿಕಾ ಪಂಡಿತ್ ಸದ್ಯ ಸಿನಿಮಾರಂಗದಿಂದ ದೂರ ಉಳಿದು, ತಮ್ಮ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ನಟಿ ರಾಧಿಕಾ ಅವರು ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ತಮ್ಮ ಆಸೆಯನ್ನು ಅಭಿಮಾನಿಗಳು ಸಾಕಷ್ಟು ಬಾರಿ ವ್ಯಕ್ತಪಡಿಸಿದ್ದರು.

ಇತ್ತೀಚೆಗೆ ರಾಧಿಕಾ ಪಂಡಿತ್ ಯಶ್ ಜೊತೆ ತಮ್ಮ ವಿದೇಶ ಪ್ರವಾಸ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದರು. ಯಶ್ ಹಾಗೂ ರಾಧಿಕಾ ಅವರ ಸುಂದರ ಕ್ಷಣಗಳನ್ನು ನೋಡಿದ ಅಭಿಮಾನಿಗಳು ತಮ್ಮ ಸಂತಸವನ್ನು ಕಾಮೆಂಟ್ ಮಾಡುವ ಮೂಲಕ ವ್ಯಕ್ತ ಪಡಿಸಿದ್ದರು.

ಇದೀಗ ನಟಿ ರಾಧಿಕಾ ಪಂಡಿತ್ ತಮ್ಮ ಮಕ್ಕಳಾದ ಐರಾ ಮತ್ತು ಯಥರ್ವ್ ನ ಹೊಸ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನಟಿ ತಮ್ಮ ಮಕ್ಕಳ ಸಣ್ಣ ಡಾನ್ಸ್ ವಿಡಿಯೋವನ್ನು ಸಹ ಹಂಚಿಕೊಂಡಿದ್ದು ಸದ್ಯ ಎಲ್ಲೆಡೆ ವೈರಲಾಗುತ್ತಿದೆ.

ನಟಿ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿರುತ್ತಾರೆ. ಆಗಾಗ ತಮ್ಮ ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ರಾಧಿಕಾ ಪಂಡಿತ್ ಮಕ್ಕಳ ಕುರಿತು ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸತ್ಯ ನಟನೆಯಿಂದ ದೂರ ಉಳಿದು ತಮ್ಮ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ನಟಿ ರಾಧಿಕಾ ಪಂಡಿತ್ ಆಗಾಗ ತಮ್ಮ ಮಕ್ಕಳ ಜೊತೆಗಿನ ಫೋಟೋ ಮತ್ತು ವಿಡಿಯೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ನಟಿ ಹಂಚಿಕೊಂಡಿರುವ ವೀಡಿಯೊ ಸಖತ್ ವೈರಲ್ ಆಗುತ್ತಿದೆ.

ಐರಾ ಮತ್ತು ಯಥರ್ವ್ ಆಸಿಗೆಯ ಮೇಲೆ ಮುದ್ದಾಗಿ ಕುಣಿಯುತ್ತಿದ್ದು, ಈ ದೃಶ್ಯವನ್ನು ನಟಿ ರಾಧಿಕಾ ಸೆರೆ ಹಿಡಿದು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ವಿಡಿಯೋ ಸಾಕಷ್ಟು ಪ್ರೀತಿ ತೋರಿಸುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *