ಸಾಧು ಕೋಕಿಲ ಬಗ್ಗೆ ಮಾತನಾಡಿದ ಕಾಳಿ ಸ್ವಾಮಿ! ಮಠ2 ಸಿನಿಮಾದ ಮೇಲೆ ಸ್ವಾಮಿಗಳು ಗರಂ! ಅಷ್ಟಕ್ಕೂ ಆಗಿದ್ದೇನು ಗೊತ್ತಾ?… ನೋಡಿ

ಸ್ಯಾಂಡಲವುಡ್

ಕೆಲವು ಬಾರಿ ಸಿನಿಮಾಗಳ ಕೆಲ ದೃಶ್ಯಗಳು ಹಾಗೂ ಹಾಡುಗಳು ಸಾಕಷ್ಟು ವಿವಾಧಗಳಿಗೆ ಕಾರಣವಾಗುತ್ತದೆ. ಒಂದು ಚಿಕ್ಕ ತಪ್ಪು ಒಂದು ಸಿನಿಮಾದ ಬಗ್ಗೆ ಸಂಪೂರ್ಣ ಅಭಿಪ್ರಾಯವನ್ನೇ ಬದಲಾಯಿಸಿ ಬಿಡುತ್ತದೆ. ವರ್ಷಗಳ ಕಾಲ ಶ್ರಮ ಪಟ್ಟು ಸಿನಿಮಾ ಮಾಡಿ ಒಂದು ಚಿಕ್ಕ ತಪ್ಪಿನಿಂದ,

ಆ ಸಿನಿಮಾದ ಬಗ್ಗೆ ಅಪ ಪ್ರಚಾರ ಕೇಳಿದರೆ ನಿಜಕ್ಕೂ ಆ ಚಿತ್ರತಂಡಕ್ಕೆ ಬೇಸರವಾಗುತ್ತದೆ. ಇದೀಗ ಇದೆ ರೀತಿ ಒಂದು ಸಿನಿಮಾ ಹಾಗೂ ಅದರ ಹಾಡು ಕಾಳಿ ಸ್ವಾಮಿಜಿಗಳ ಕೋಪಕ್ಕೆ ಕಾರಣವಾಗಿದೆ. ಹಾಗಾದರೆ ಏನಿದು ಸುದ್ದಿ ಎಂದು ತಿಳಿಯುವ ಕುತೂಹಲ ನಿಮಗೂ ಇದ್ದರೆ, ಬನ್ನಿ ನೋಡೋಣ..

ಮಠ ಎನ್ನುವ ಸಿನಿಮಾ ಎಲ್ಲರೂ ನೋಡಿರುತ್ತೀರಾ, ಈ ಸಿನಿಮಾ ಹಾಸ್ಯಭರಿತವಾಗಿದ್ದು, ಈ ಸಿನಿಮಾ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಇನ್ನು ಈ ಸಿನಿಮಾದ ಯಶಸ್ಸಿನ ನಂತರ ಮಠ 2 ಸಿನಿಮಾವನ್ನು ಇದೀಗ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದೆ. ಈ ಸಿನಿಮಾವನ್ನು ವೆಂಶಿ ರವೀಂದ್ರ ಅವರು ನಿರ್ದೇಶನ ಮಾಡಿದ್ದಾರೆ.

ಇನ್ನು ಮಠ 2 ಸಿನಿಮಾದಲ್ಲಿ ಬರೋಬ್ಬರಿ 82 ಕಲಾವಿದರು ನಟಿಸಿದ್ದು, ಗುರುಪ್ರಸಾದ್, ತಬಲ ನಾಣಿ, ಮಂಡ್ಯ ರಮೇಶ್, ಸಾಧು ಕೋಕಿಲ, ಬಿರಾದಾರ್ ಹೀಗೆ ಹಲವಾರು ಸ್ಟಾರ್ ಕಲಾವಿದರು ಬಣ್ಣ ಹಚ್ಚಿದ್ದಾರೆ. ಇನ್ನು ಈ ಸಿನಿಮಾ ಇದೆ ನವೆಂಬರ್ 18 ಕ್ಕೆ ಬಿಡುಗಡೆಯಾಗುತ್ತಿದೆ.

ಸದ್ಯ ಮಠ 2 ಸಿನಿಮಾದ ಟ್ರೈಲರ್ ಹಾಗೂ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸ*** ಅದು ಮಾಡುತ್ತಿದೆ. ಇನ್ನು ಈ ಸಿನಿಮಾದ ಕಲ್ಲ ಮೇಲೆ ಕಲ್ಲು ಇಟ್ಟು ಹಾಡು ಕೇಳಿದ ಕಾಳಿ ಸ್ವಾಮಿಗಳು ಇದೀಗ ಚಿತ್ರತಂಡದವರ ಮೇಲೆ ಗರಂ ಆಗಿದ್ದಾರೆ. ಈ ಹಾಡಿನಲ್ಲಿ ಮಠದ ಹೆಸರಿನಲ್ಲಿ ಜನರು ತಾವೇ ದೇವರೆಂದು ಹೇಳಿಕೊಳ್ಳುತ್ತಾ,

ಎಲ್ಲರಿಗೂ ಮೋಸ ಮಾಡುತ್ತಿದ್ದಾರೆ. ಎನ್ನುವ ಅರ್ಥ ಇದೆ. ಅಲ್ಲದೆ ಹಾಸ್ಯ ನಟ ಸಾಧುಕೋಕಿಲ ಆದರೂ ಈ ಸಿನಿಮಾದಲ್ಲಿ ಒಂದು ಡೈಲಾಗ್ ಹೇಳಿದ್ದು ನಾವು ಮಾಡಬಾರದ ಕೆಲಸ ಮಾಡಿದರೆ, ನಮ್ಮನ್ನು ಕರೆದುಕೊಂಡು ಹೋಗಿ ನಮ್ಮ ದುಡ್ಡಲ್ಲಿ ಗಂಡ್ಸ ಎಂದು ಟೆಸ್ಟ್ ಮಾಡಿಸುತ್ತಾರೆ.

ಈ ಡೈಲಾಗ್ ಹಾಗೂ ಈ ಸಿನಿಮಾದ ಹಾಡು ಕಾಳಿ ಸ್ವಾಮಿಗಳ ಮುನಿಸಿಗೆ ಕಾರಣವಾಗಿದೆ. ಸದ್ಯ ಈ ಬಗ್ಗೆ ಕಾಳಿ ಸ್ವಾಮಿಗಳು ಮಾಧ್ಯಮಗಳ ಮುಂದೆ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಷಯ ಎಲ್ಲೆಡೆ ವೈರಲ್ ಆಗುತ್ತಿದೆ, ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ…

Leave a Reply

Your email address will not be published. Required fields are marked *