ಕೆಲ ಜನರು ಅವರಿಗೆ ಬೇಕಾದಾಗ ಜನರನ್ನು ಬಳಸಿಕೊಂಡು ನಂತರ ಅವರು ಬೆಳೆದ ಮೇಲೆ ಅವರನ್ನು ಮರೆತು ಹೋಗುತ್ತಾರೆ. ಇನ್ನು ಕೆಲವರು ತಮ್ಮ ಕಷ್ಟ ಕಾಲದಲ್ಲಿ ತಮ್ಮ ಜೊತೆಗಿದ್ದವರನ್ನು ಯಾವತ್ತಿಗೂ ಮರೆಯುವುದಿಲ್ಲ. ಇದೀಗ ಇದೆ ರೀತಿಯ ಮತ್ತೊಂದು ಉದಾಹರಣೆ ನಮ್ಮ ಕನ್ನಡ ಸಿನಿಮಾರಂಗದಲ್ಲಿದೆ.
ಹೌದು ನಟ ರಿಷಬ್ ಶೆಟ್ಟಿ ಅವರ ಕ್ರೇಜ್ ಇದೀಗ ಎಷ್ಟರ ಮಟ್ಟಕೆ ಬೆಳೆದಿದೆ ಎನ್ನುವುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ರಿಷಬ್ ಶೆಟ್ಟಿ ಕೇವಲ ಕರ್ನಾಟಕ ಮಾತ್ರವಲ್ಲದೆ ದೇಶದ ಎಲ್ಲೆಡೆ ಅಭಿಮಾನಿಗಳನ್ನು ಸಂಪಾದಿಸಿಕೊಂಡು, ಇದೀಗ ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಯಾವ ರೀತಿ ಸದ್ದು ಮಾಡುತ್ತಿದೆ ಎನ್ನುವುದು ನಿಮ್ಮೆಲರಿಗೂ ಸಹ ಗೊತ್ತಿರುವ ವಿಚಾರ. ಕಾಂತಾರ ಸಿನಿಮಾ ದಿನದಿಂದ ದಿನಕ್ಕೆ ಎಲ್ಲಾ ಭಾಷೆಯ ಸಿನಿಮಾಗಳ ರೆಕಾರ್ಡ್ ಅನ್ನು ಬ್ರೇಕ್ ಮಾಡುತ್ತಾ, ತನ್ನದೇ ಆದ ಹೊಸ ರೆಕಾರ್ಡ್ ಸೃಷ್ಟಿಸುತ್ತಿದೆ.
ಕಾಂತಾರ ಸಿನಿಮಾ ಬಿಡುಗಡೆಯಾಗಿ ಇದೀಗ ತಿಂಗಳು ಕಳೆದು ಹೋಗಿದೆ, ಆದರೂ ಸಹ ಈ ಸಿನಿಮಾದ ಕ್ರೇಜ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇಂದಿಗೂ ಸಹ ಅದೆಷ್ಟೋ ಚಿತ್ರಮಂದಿರಗಳಲ್ಲಿ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಫೌಸ್ ಫುಲ್ ಪ್ರದರ್ಶನ ನೀಡುತ್ತಿದೆ.
ಇನ್ನು ರಿಷಬ್ ಶೆಟ್ಟಿ ಅವರು ಈ ಮಟ್ಟಕ್ಕೆ ಬೆಳೆಯಲು ಅವರ ಪರಿಶ್ರಮವೇ ಕಾರಣ ಎಂದರೆ ತಪ್ಪಾಗುವುದಿಲ್ಲ.ರಿಷಬ್ ಶೆಟ್ಟಿ ಅವರ ಸಿನಿಮಾಗಳು ಮೊದಮೊದಲು ಅಷ್ಟಾಗಿ ಓಡುತ್ತಿರಲಿಲ್ಲ, ಈ ವೇಳೆ ಅವರ ಸ್ನೇಹಿತ ಆರ್ ಜೆ ಅರುಲ್ ಅವರು ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಅವರ ಸಿನಿಮಾಗೆ ಒಂದು ಶೋ ಕೊಡಿಸಿದ್ದರಂತೆ.
ಇನ್ನು ಇದೀಗ ರಿಷಬ್ ಶೆಟ್ಟಿ ಅವರ ಸಿನಿಮಾ ನೋಡಲು ಜನ ಕ್ಯೂ ನಿಲ್ಲುತ್ತಿದ್ದಾರೆ. ಸದ್ಯ ಕಾಂತಾರ ಸಿನಿಮಾದ ಸಕ್ಸಸ್ ನಲ್ಲಿರುವ ರಿಷಬ್ ಶೆಟ್ಟಿ ತಮ್ಮ ಸ್ನೇಹಿತ ಅರುಲ್ ಅವರ ಜೊತೆಗೆ ಸಂದರ್ಶನ ನೀಡಿದ್ದಾರೆ. ಇನ್ನು ತಮ್ಮ ಹಳೆಯ ದಿನಗಳನ್ನು ರಿಷಬ್ ಶೆಟ್ಟಿ ಎಲ್ಲರ ಮುಂದೆ ತಿಳಿಸಿದ್ದಾರೆ.
ಇನ್ನು ತಾನು ದೊಡ್ಡ ಸ್ಟಾರ್ ನಟರಾದರೂ ಸಹ ತಮ್ಮಗೆ ಸಹಾಯ ಮಾಡಿದ್ದ ಸ್ನೇಹಿತನನ್ನು ನಟ ಇನ್ನು ಮರೆತಿಲ್ಲ, ಇನ್ನು ರಿಷಬ್ ಅವರ ಈ ವ್ಯಕ್ತಿತ್ವಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಅವರ ಈ ಗುಣಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ…